• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

10 ದಿನ ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌

|

ನವದೆಹಲಿ, ಏಪ್ರಿಲ್ 22: ಭಾರತದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ ಎಮಿರೇಟ್ಸ್ ಇದೇ ಭಾನುವಾರದಿಂದ ಹತ್ತು ದಿನಗಳ ಕಾಲ ಭಾರತ ಹಾಗೂ ದುಬೈ ನಡುವಿನ ವಿಮಾನಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.

ಬ್ರಿಟನ್ ಭಾರತದಿಂದ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಫ್ರಾನ್ಸ್‌ ಕೂಡ ಭಾರತದಿಂದ ಬರುವ ಪ್ರಯಾಣಿಕರಿಗೆ ಹತ್ತು ದಿನಗಳ ಕಾಲ ಕ್ವಾರಂಟೈನ್ ವಿಧಿಸಿದೆ. ಹಾಂಕಾಂಗ್ ಭಾರತೀಯ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದೆ.

ಭಾರತ ಸೇರಿ 3 ದೇಶಗಳಿಂದ ಬರುವ ವಿಮಾನಗಳಿಗೆ ಹಾಂಗ್‌ಕಾಂಗ್ ನಿರ್ಬಂಧಭಾರತ ಸೇರಿ 3 ದೇಶಗಳಿಂದ ಬರುವ ವಿಮಾನಗಳಿಗೆ ಹಾಂಗ್‌ಕಾಂಗ್ ನಿರ್ಬಂಧ

ಬುಧವಾರದಿಂದ ಎರಡು ವಾರಗಳ ಕಾಲ ಹಾಂಕಾಂಗ್ ನಿರ್ಬಂಧ ಮಾಡಿದೆ.

ಈಚೆಗಷ್ಟೆ ದುಬೈಗೆ ಭಾರತದಿಂದ ತೆರಳುವ ಪ್ರಯಾಣಿಕರು ಹೊಂದಿರಬೇಕಾದ ಕೊರೊನಾ ಪರೀಕ್ಷಾ ಪ್ರಮಾಣ ಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸಿತ್ತು. ಏಪ್ರಿಲ್ 22ರಿಂದ ಇದು ಜಾರಿಯಾಗುವುದಾಗಿ ತಿಳಿಸಿತ್ತು.

ಇದೀಗ ಹತ್ತು ದಿನಗಳ ಕಾಲ ಎಮಿರೇಟ್ಸ್ ಭಾರತ-ದುಬೈ ನಡುವಿನ ವಿಮಾನವನ್ನು ರದ್ದುಪಡಿಸಿದೆ.

English summary
Emirates will suspend flights between Dubai and India for 10 days from Sunday amid the deadly surge in COVID-19 cases in India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X