ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾಲ್ಕು ವರ್ಷದ ಅಘೋಷಿತ ತುರ್ತು ಪರಿಸ್ಥಿತಿಗೆ ಕ್ಷಮೆ ಕೋರುತ್ತೀರಾ?'

|
Google Oneindia Kannada News

ನವದೆಹಲಿ, ಜೂನ್ 26: 1975ರ ತುರ್ತು ಪರಿಸ್ಥಿತಿಯ ಅವಧಿಯ ಕುರಿತು ಹೇಳಿಕೆ ನೀಡುತ್ತಿರುವ ಬಿಜೆಪಿಯನ್ನು ಟೀಕಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್ ಪಟೇಲ್, ಕಳೆದ ನಾಲ್ಕು ವರ್ಷಗಳಿಂದ ಹೇರಿರುವ 'ಅಘೋಷಿತ ತುರ್ತುಪರಿಸ್ಥಿತಿ'ಗೆ ಆ ಪಕ್ಷವು ಕ್ಷಮೆ ಕೋರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅಹ್ಮದ್ ಪಟೇಲ್, ಸರಣಿ ಟ್ವೀಟ್‌ಗಳಲ್ಲಿ ಕೇಂದ್ರ ಸರ್ಕಾರದ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತರಾಗಿರುವ ಪಟೇಲ್, ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ತುರ್ತು ಪರಿಸ್ಥಿತಿ ಪಠ್ಯವಾಗಬೇಕು: ಉಪರಾಷ್ಟ್ರಪತಿ ನಾಯ್ಡುತುರ್ತು ಪರಿಸ್ಥಿತಿ ಪಠ್ಯವಾಗಬೇಕು: ಉಪರಾಷ್ಟ್ರಪತಿ ನಾಯ್ಡು

2019ರ ಚುನಾವಣೆಯಲ್ಲಿ ಸೋಲುವ ಭೀತಿ ಅನುಭವಿಸುತ್ತಿರುವ ಬಿಜೆಪಿಯು ತುರ್ತುಪರಿಸ್ಥಿತಿ ಆಧಾರದ ಸಂಗತಿಗಳನ್ನು ಕೆದಕುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿನ ಅಘೋಷಿತ ತುರ್ತುಪರಿಸ್ಥಿತಿಯ ಕುರಿತು ಅವರು ಕ್ಷಮೆ ಕೋರುತ್ತಾರೆಯೇ? ಜನರನ್ನು ಕೊಂದು ಹಾಕಲಾಗುತ್ತಿದೆ ಮತ್ತು ಬೆದರಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್ಥಿಕ ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಾಲ್ಕು ವರ್ಷದ ಬಳಿಕ 2019ರ ಚುನಾವಣೆಯಲ್ಲಿ ಸೋಲುವ ಭೀತಿ ಸರ್ಕಾರವನ್ನು ಕಾಡುತ್ತಿದೆ. ಈ ಕಾರಣದಿಂದ ಅವರು 1975ರ ತುರ್ತು ಪರಿಸ್ಥಿತಿಯ ಘಟನಾವಳಿಗಳ ಅಡಿಯಲ್ಲಿ ಆಶ್ರಯ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

emergency: will bjp apologise for the undeclared emergency?

ಆದರೆ ವಾಸ್ತವವೆಂದರೆ 1977ರ ಬಳಿಕ ಇಂದಿರಾಜಿ ಅವರು ಕ್ಷಮೆ ಕೋರಿದರು, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡರು ಮತ್ತು ಭಾರತದ ಜನರು ಅವರಿಗೆ ಮತ್ತೆ ಮತ ಹಾಕಿದರು ಎಂದು ಅಹ್ಮದ್ ಪಟೇಲ್ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

English summary
Congress Senior leader Ahmed Patel asked that will bjp apologise for four years undeclared emergency? 'ನಾಲ್ಕು ವರ್ಷದ ಅಘೋಷಿತ ತುರ್ತು ಪರಿಸ್ಥಿತಿಗೆ ಕ್ಷಮೆ ಕೋರುತ್ತೀರಾ?'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X