• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುರ್ತು ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ : ಅಡ್ವಾಣಿ ಎಚ್ಚರಿಕೆ

|

ನವದೆಹಲಿ, ಜೂ. 18: ಕೇಂದ್ರ ಎನ್ ಡಿಎ ಸರ್ಕಾರ ಲಲಿತ್ ಮೋದಿ ವೀಸಾ ಪ್ರಕರಣದಲ್ಲಿ ಮುಜುಗರಕ್ಕೆ ಗುರಿಯಾಗಿರುವ ಸಂದರ್ಭದಲ್ಲೇ ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಸಂದರ್ಭ ಎದುರಾದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ದೇಶ ವಿರೋಧಿ ಶಕ್ತಿಗಳು ಪ್ರತಿದಿನ ಬಲಗೊಳ್ಳುತ್ತಿವೆ. ಇದರಿಂದ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಆದರೆ ದೇಶದಲ್ಲಿ ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆ ತುಂಬಾ ಶಕ್ತಿಶಾಲಿಯಾಗಿರುವುದು ಅವರಿಗೆ ತೊಡಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಪದ್ಮವಿಭೂಷಣ ಅಡ್ವಾಣಿಗೆ ನೋಟಿಸ್]

ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಜೂನ್ 25ಕ್ಕೆ 40 ವರ್ಷ ತುಂಬುವ ಹಿನ್ನೆಲೆಯಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಎಲ್.ಕೆ.ಅಡ್ವಾಣಿ I ಹೇಳಿಕೆ ನೀಡಿದ್ದಾರೆ.

1975ರಿಂದ 77ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಜನರ ಹಕ್ಕು ಕಸಿಯಲಾಗಿತ್ತು ಈಗ ಮತ್ತೆ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿಯಲ್ಲ ಎಂಬ ನಂಬಿಕೆ ಇಲ್ಲ. ಆದರೆ ಇದನ್ನು ತುಂಬಾ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಕೆಲವು ಶಕ್ತಿಗಳು ಪ್ರಜಾಪ್ರಭುತ್ವದ ಶಕ್ತಿ ಕುಂದಿಸುತ್ತಿವೆ. ಹೀಗಾಗಿ ತುರ್ತು ಪರಿಸ್ಥಿತಿಯನ್ನು ತಳ್ಳಿಹಾಕುವಂತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.[ಬಿಜೆಪಿ ಕಾರ್ಯಕಾರಿಣಿ: ಏನು ಆಗಬಾರದಿತ್ತೋ ಅದೇ ಆಯ್ತು?]

ಇಂದಿರಾ ಗಾಂಧಿ ಆಳ್ವಿಕೆ ಸಮಯದಲ್ಲಿ ದೇಶ ತುರ್ತು ಪರಿಸ್ಥಿತಿ ಹೇರಿಸಿಕೊಂಡಿತ್ತು. ಅಂದು ಅಡ್ವಾಣಿ ಸೇರಿದಂತೆ ಅನೇಕ ನಾಯಕರನ್ನು ಬಂಧನದಲ್ಲಿ ಇಡಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Even as the Narendra Modi government faces heat from the opposition over Lalit Modi visa controversy involving External Affairs Minister Sushma Swaraj, Bharatiya Janata Party (BJP) patron Lal Krishna Advani has said he fears that an emergency like situation could arise again. Speaking to The Indian Express ahead of the 40th Anniversary of the emergency, the veteran BJP leader said that "forces that can crush democracy" are stronger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more