ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆರಿಲ್ಯಾಂಡ್‌ನಲ್ಲಿ ಭಾರಿ ಪ್ರವಾಹ: ದಿಗ್ಭ್ರಮೆಗೊಳಿಸುವ ಚಿತ್ರಗಳು

By Nayana
|
Google Oneindia Kannada News

ಎಲ್ಲಿಕಾಟ್‌, ಮೇ 28: ಎಲಿಕಾಟ್ ನ ಮೇರಿಲ್ಯಾಂಡ್‌ನಲ್ಲಿ ಭಾನುವಾರ ಮಳೆ, ಪ್ರವಾಹಕ್ಕೆ ನಗರವು ಸಂಪೂರ್ಣ ಜಲಾವೃತವಾಗಿದೆ. ಕಳೆದ ಎರಡು ವರ್ಷಗಳ ಹಿಂದೇ ಇದೇ ರೀತಿಯ ಮಳೆ ಸುರಿದಿತ್ತು, ಪ್ರಮುಖ ನಗರವು ಇದೀಗ ನದಿಯ ರೀತಿಯಲ್ಲಿ ಕಾಣುತ್ತಿದೆ. ನೀರು ಸಾಕಷ್ಟು ಕಟ್ಟಡದ ಮೊದಲ ಮಹಡಿಯವರೆಗೂ ತಲುಪಿದೆ. ಅದರ ಜತೆಗೆ ನಿಲುಗಡೆ ಮಾಡಿದ್ದ ಕಾರುಗಳು ನೀರಿನಲ್ಲಿ ತೇಲಿ ಹೋಗಿವೆ.

ಎಲ್ಲಿಕಾಟ್ ನಗರದ ಸುಮಾರು 20 ಕಿ.ಮೀ ವ್ಯಾಪ್ತಿಯ ಪ್ರದೇಶಗಳು ಜಲಾವೃತವಾಗಿದೆ. ಮೇರಿಲ್ಯಾಂಡ್‌ನ ನದಿಯ ಮತ್ತೊಂದು ಭಾಗಕ್ಕೆ ತೆರಳಿ ಜನರು ಆಶ್ರಯ ಪಡೆದಿದ್ದಾರೆ.ಯಾವುದೇ ಪ್ರಾಣಹಾನಿ, ಗಾಯಗಳಾಗಿರುವ ಬಗ್ಗೆ ಮಾಹಿತಿ ಇನ್ನೂ ಕೂಡ ಲಭ್ಯವಾಗಿಲ್ಲ. ಇನ್ನೂ ಕೂಡ ರಕ್ಷಣಾ ಕಾರ್ಯ ಮುಂದುವರೆದಿದೆ.

ಹವಾಯಿಯಲ್ಲಿ ಜ್ವಾಲಾಮುಖಿ ಸ್ಫೋಟ: ದೇಶದಲ್ಲಿ ನಡೆದ ಪ್ರಮುಖ ಘಟನೆಗಳುಹವಾಯಿಯಲ್ಲಿ ಜ್ವಾಲಾಮುಖಿ ಸ್ಫೋಟ: ದೇಶದಲ್ಲಿ ನಡೆದ ಪ್ರಮುಖ ಘಟನೆಗಳು

ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ 2016ರಲ್ಲಿ ಬಂದಿದ್ದ ಪ್ರವಾಹಕ್ಕಿಂತ ಇದು ಭೀಕರವಾಗಿದೆ. ಆ ಪ್ರವಾಹ ಇಬ್ಬರು ಮಂದಿಯನ್ನು ಬಲಿತೆಗೆದುಕೊಂಡಿದ್ದು, ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿತ್ತು. 2016ರಲ್ಲಿ 2ರಿಂದ 3 ಗಂಟೆಯ ಒಳಗೆ 6.6 ಇಂಚು ಅಂದರೆ 17 ಸೆಂ.ಮೀ ಮಳೆಯಾಗಿತ್ತು. ಭಾನುವಾರ 3 ಗಂಟೆ ಅವಧಿಯಲ್ಲಿ 8 ಇಂಚು ಅಂದರೆ 20 ಸೆಂ.ಮೀ ನಷ್ಟು ಮಳೆಯಾಗಿದೆ.

ಮೆರಿಲ್ಯಾಂಡ್‌ನಲ್ಲಿ ಪ್ರವಾಹ, ಚಿತ್ರಗಳು

ಮೆರಿಲ್ಯಾಂಡ್‌ನಲ್ಲಿ ಪ್ರವಾಹ, ಚಿತ್ರಗಳು

ಮೆರಿಲ್ಯಾಂಡ್‌ನಲ್ಲಿ ಭಾನುವಾರ ಉಂಟಾದ ಪ್ರವಾಹನದಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಎಲ್ಲಿಕಾಟ್ ನಗರದ ಸುಮಾರು 20 ಕಿ.ಮೀ ವ್ಯಾಪ್ತಿ ಪ್ರದೇಶವು ಜಲಾವೃತವಾಗಿದೆ. 2016 ರಲ್ಲಿ ಇದೇ ರೀತಿಯ ಪ್ರವಾಹ ಬಂದಿತ್ತು.

ಪ್ರವಾಹದ ಬಳಿಕ ಮೆರಿಲ್ಯಾಂಡ್ ಕಂಡಿದ್ದು ಹೀಗೆ

ಪ್ರವಾಹದ ಬಳಿಕ ಮೆರಿಲ್ಯಾಂಡ್ ಕಂಡಿದ್ದು ಹೀಗೆ

ಮೆರಿಲ್ಯಾಂಡ್‌ನಲ್ಲಿ 2016ರಲ್ಲಿ ಸಂಭವಿಸಿದಂತಹ ಪ್ರವಾಹವು ಭಾನುವಾರ ಸಂಭವಿಸಿದೆ, 8 ಇಂಚು ಅಂದರೆ 20 ಸೆಂ.ಮೀಟರ್‌ನಷ್ಟು ಮಳೆಯಾಗಿದೆ. ಮನೆಯ ಮುಂದೆ ನಿಲುಗಡೆ ಮಾಡಿದ್ದ ವಾಹನಗಳೆಲ್ಲೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಿಂದಾಗಿ ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.

ಸಿಎಸ್‌ಕೆ ಗೆಲುವಿನ ಸಂತಸದಲ್ಲಿ ಧೋನಿ ಪತ್ನಿ, ಪುತ್ರಿ

ಸಿಎಸ್‌ಕೆ ಗೆಲುವಿನ ಸಂತಸದಲ್ಲಿ ಧೋನಿ ಪತ್ನಿ, ಪುತ್ರಿ

ಧೋನಿ ಕ್ಯಾಪ್ಟನ್‌ಶಿಪ್‌ನ ಚೆನ್ನೈ ಸೂಪರ್ ಕಿಂಗ್ಸ್ ಭಾನುವಾರ ನಡೆದ ಐಪಿಎಲ್ 2018ರ ಫೈನಲ್‌ನಲ್ಲಿ ಹೈದರಾಬಾದ್‌ ತಂಡದ ವಿರುದ್ಧ ಜಯಗಳಿಸಿ, 2018 ಐಪಿಎಲ್‌ ಕಪ್ ತನ್ನದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಧೋನಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಧೋನಿ ಹಾಗೂ ಅವರ ತಂಡಕ್ಕೆ ಶುಭಕೋರಿದರು. ಸಂತಸವನ್ನು ಹಂಚಿಕೊಂಡ ಕ್ಷಣ ಹೀಗಿತ್ತು.

ಭಾರಿ ಮಳೆಗೆ ಕಾರಿನ ಮೇಲೆ ಉರುಳಿದ ಮರ

ಭಾರಿ ಮಳೆಗೆ ಕಾರಿನ ಮೇಲೆ ಉರುಳಿದ ಮರ

ಹುಬ್ಬಳ್ಳಿಯಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಸಾಕಷ್ಟು ಕಡೆಗಳಲ್ಲಿ ಮರಗಳು ಧರೆಗುರುಳಿದೆ, ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ಮರಗಳು ಉರುಳಿದ್ದು, ಕಾರುಗಳು ಜಖಂಗೊಂಡಿದೆ.

ಹವಾಯಿಯಲ್ಲಿ ಕಾಣಿಸಿಕೊಂಡ ಹೊಗೆ

ಹವಾಯಿಯಲ್ಲಿ ಕಾಣಿಸಿಕೊಂಡ ಹೊಗೆ

ಹವಾಯಿಯ ಕಿಲವ್ಯಾ ಜ್ವಾಲಾಮುಖಿ ಶುಕ್ರವಾರ ಮತ್ತೆ ಸ್ಫೋಟಿಸಿದ್ದು, ನೂರಾರು ಅಡಿ ಎತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಿಮ್ಮಿದೆ. ಆಗಸದಲ್ಲಿ 30 ಸಾವಿರ ಅಡಿ ಎತ್ತರಕ್ಕೆ ಜ್ವಾಲಾಮುಖಿಯ ಬೂದಿ ಹಾರಿದೆ. ಹವಾಯಿ ಜ್ವಾಲಾಮುಖಿ ವೀಕ್ಷಣಾಲಯದ ವೆಬ್‌ ಕ್ಯಾಮೆರಾದಲ್ಲಿ ಈ ಜ್ವಾಲಾಮುಖಿಯ ಪರಿಣಾಮವನ್ನು ಸೆರೆಹಿಡಿಯಲಾಗಿದ್ದು, ಧೂಳುಯುಕ್ತ ಬೂದಿಯ ಮಳೆ ಈಗಾಗಲೇ ಕಪ್ಪುಗಟ್ಟಿರುವ ದೃಶ್ಯಾವಳಿಯ ಮೇಲೆ ಆಗುತ್ತಿರುವುದನ್ನು ಇದು ಚಿತ್ರಿಸಿದೆ. ಬೆಂಕಿಯ ಜ್ವಾಲೆ ಒಂಬತ್ತು ಕಿಲೋ ಮೀಟರ್ ಎತ್ತರಕ್ಕೆ ವ್ಯಾಪಿಸಿರುವುದು ಕಂಡುಬಂದಿದೆ.

ರಷ್ಯಾದಲ್ಲಿ ಸೇಂಟ್‌ ಪೀಟರ್ಸ್‌ ಬರ್ಗ್ ವರ್ಷಾಚರಣೆ ವಿಶಿಷ್ಟ ಆಚರಣೆ

ರಷ್ಯಾದಲ್ಲಿ ಸೇಂಟ್‌ ಪೀಟರ್ಸ್‌ ಬರ್ಗ್ ವರ್ಷಾಚರಣೆ ವಿಶಿಷ್ಟ ಆಚರಣೆ

ರಷ್ಯಾದ ಸೇಂಟ್‌ ಪೀಟರ್ಸ್‌ ಬರ್ಗ್‌ನಲ್ಲಿ ಸೇಂಟ್‌ ಪೀಟರ್ಸ್‌ ಬರ್ಗ್ 315ನೇ ವರ್ಷಾಚರಣೆ ಅಂಗವಾಗಿ ವಿಶಿಷ್ಟ ಕಾರ್ಯಕ್ರಮಗಳು ಭಾನುವಾರ ಜರುಗಿದವು. ಅಲ್ಲಿನ ಬೀದಿಯ ತುಂಬೆಲ್ಲ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆ ನಡೆಸಿದರು.

English summary
Ellicott City: Water rushes through Main Street in Ellicott City, on Sunday, May 27, 2018. Flash flooding and water rescues are being reported in Maryland as heavy rain soaks much of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X