ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಅಮೆರಿಕ ರಕ್ಷಣಾ ಪಾಲುದಾರಿಕೆ ಬಗ್ಗೆ ಮಾತನಾಡಿದ ಲಾಯ್ಡ್ ಆಸ್ಟಿನ್

|
Google Oneindia Kannada News

ನವದೆಹಲಿ, ಮಾರ್ಚ್ 20: ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಪಾಲುದಾರಿಕೆಯನ್ನು ಎತ್ತರಕ್ಕೆ ಕೊಂಡೊಯ್ಯುವುದೇ ಜೋ ಬೈಡನ್ ಆಡಳಿತದ ಮೊದಲ ಆದ್ಯತೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.

ಜೋ ಬೈಡನ್ ನೇತೃತ್ವದಲ್ಲಿ ಅಮೆರಿಕದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಲಿನ ರಕ್ಷಣಾ ಕಾರ್ಯದರ್ಶಿಲಾಯ್ಡ್ ಆಸ್ಟಿನ್ ಮೊದಲ ಬಾರಿಗೆ 3 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೆ ಹಲವು ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

India- America

ತಮ್ಮ ಹೇಳಿಕೆಯಲ್ಲಿ ಮುಕ್ತ ಹಾಗೂ ಸ್ವತ೦ತ್ರವಾದ ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಆಸ್ಟಿನ್ ವಿಶೇಷವಾಗಿ ಉಲ್ಲೇಖಿಸಿದ್ದು, ಭಾರತ-ಅಮೆರಿಕದ ನಡುವಿನ ಬಾಂಧವ್ಯವನ್ನು ಮುಕ್ತ ಹಾಗೂ ಸ್ವತ೦ತ್ರವಾದ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಭದ್ರವಾದ ನೆಲೆ ಎಂದು ಬಣ್ಣಿಸಿದ್ದಾರೆ.

ಮಾತುಕತೆ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಭಾರತ-ಯುಎಸ್ ರಕ್ಷಣಾ ಪಾಲುದಾರಿಕೆಯನ್ನು ಎತ್ತರಕ್ಕೆ ಬೆಳೆಸುವುದು ಬೈಡನ್ ಆಡಳಿತದ ಆದ್ಯತೆಯಾಗಿದ್ದು, ಈ ಸಂದೇಶವನ್ನು ಅಮೆರಿಕ ಸರ್ಕಾರದಿಂದ ತಾವು ತಲುಪಿಸುತ್ತಿರುವುದಾಗಿ ಆಸ್ಟಿನ್ ಹೇಳಿದ್ದಾರೆ.

ರಕ್ಷಣಾ ಸಚಿವರೊಂದಿಗಿನ ಸಭೆಯಲ್ಲಿ ಆಸ್ಟಿನ್ ರಕ್ಷಣಾ ಪಾಲುದಾರಿಕೆಯಷ್ಟೇ ಅಲ್ಲದೇ ಮಾಹಿತಿ ಹಂಚಿಕೆ, ಲಾಜಿಸ್ಟಿಕ್ಸ್ ಸಹಕಾರ, ಕೃತಕ ಬುದ್ಧಿಮತ್ತೆ ಹಾಗೂ ಹೊಸ ಕ್ಷೇತ್ರಗಳಾದ ಬಾಹ್ಯಾಕಾಶ ಹಾಗೂ ಸೈಬರ್ ಗಳೆಡೆಗೆ ಭಾರತ-ಅಮೆರಿಕದ ಹೊಸ ಸಹಯೋಗದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ.

ವೇಗವಾಗಿ ಬದಲಾಗುತ್ತಿರುವ ಅಂತಾರಾಷ್ಟ್ರೀಯ ಸೂತ್ರಗಳ ನಡುವೆಯೂ ಭಾರತ ಅಮೆರಿಕಾಗೆ ಅತ್ಯಂತ ಪ್ರಮುಖ ಪಾಲುದಾರಿಕೆ ರಾಷ್ಟ್ರವಾಗಿದ್ದು, ಅಮೆರಿಕ ಭಾರತದೊಂದಿಗೆ ಪ್ರಗತಿಪರ, ಮುನ್ನಡೆಯ ರಕ್ಷಣಾ ಪಾಲುದಾರಿಕೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಇಂಡೋ-ಪೆಸಿಫಿಕ್ ಪ್ರದೇಶದೆಡೆಗೆ ಅಮೆರಿಕಗೆ ಇರುವ ಮಾರ್ಗಕ್ಕೆ ಭಾರತವೇ ಪ್ರಮುಖ ಕೇಂದ್ರ ಸ್ತಂಭ ಎಂದೂ ಆಸ್ಟಿನ್ ಬಣ್ಣಿಸಿದ್ದಾರೆ.

English summary
Elevating the US-India defence partnership is a priority of the Biden administration, US Defence Secretary Lloyd Austin said on Saturday as he described the relationship between the two countries as a "stronghold" of a free and open Indo-Pacific.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X