ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 'ಟಿವಿ, ಸಾಮಾಜಿಕ ಮಾಧ್ಯಮಗಳು ಪ್ರಜಾಪ್ರಭುತ್ವಕ್ಕೆ ಹಾನಿಕರ'

|
Google Oneindia Kannada News

ರಾಂಚಿ, ಜುಲೈ 23: 'ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕರ ಎಂದು ಶನಿವಾರ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ತೀವ್ರ ಟೀಕೆ ಮಾಡಿದರು.

ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಯ ತೀರ್ಪಿಗೆ ಹಿನ್ನಡೆಯಾದ ನಂತರ ಹೆಚ್ಚಿನ ಟೀಕೆಗಳು ಬಂದ ಬಳಿಕ ನ್ಯಾಯಮೂರ್ತಿ ರಮಣರಿಂದ ಈ ಹೇಳಿಕೆಗಳು ಬಂದಿವೆ.

Breaking : ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪೂಜೆಗೆ ಅವಕಾಶವಿಲ್ಲ- ಸುಪ್ರೀಂ ಕೋರ್ಟ್Breaking : ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪೂಜೆಗೆ ಅವಕಾಶವಿಲ್ಲ- ಸುಪ್ರೀಂ ಕೋರ್ಟ್

ರಾಂಚಿಯಲ್ಲಿ ನಡೆದ ಶೈಕ್ಷಣಿಕ ಸಮಾರಂಭದಲ್ಲಿ ಮಾತನಾಡಿದ ಭಾರತದ ಮುಖ್ಯ ನ್ಯಾಯಾಧೀಶರು "ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಟಿತ ಪ್ರಚಾರಗಳು ನಡೆಯುತ್ತಿವೆ. ನ್ಯಾಯಾಧೀಶರು ತಕ್ಷಣವೇ ಪ್ರತಿಕ್ರಿಯಿಸುವುದಿಲ್ಲ, ದಯವಿಟ್ಟು ಅದನ್ನು ತಪ್ಪಾಗಿ ದೌರ್ಬಲ್ಯ ಅಥವಾ ಅಸಹಾಯಕತೆ ಎ ಎಂದು ಗ್ರಹಿಸಬೇಡಿ" ಎಂದು ಎಚ್ಚರಿಕೆ ನೀಡಿದರು.

Electronic and social media were doing a disservice to democracy- NV Ramana

"ಹೊಸ ಮಾಧ್ಯಮಗಳು ಅಗಾಧವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಸರಿ ಮತ್ತು ತಪ್ಪು, ಒಳ್ಳೆಯದು ಮತ್ತು ಕೆಟ್ಟದು ಮತ್ತು ನೈಜ ಮತ್ತು ನಕಲಿಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಅಸಮರ್ಥವಾಗಿವೆ" ಎಂದರು.

"ಮಿಡಿಯಾ ಟ್ರಯಲ್ಸ್‌ಗಳು ಪ್ರಕರಣಗಳನ್ನು ನಿರ್ಧರಿಸುವಲ್ಲಿ ಮಾರ್ಗದರ್ಶಿ ಅಂಶವಾಗುವುದಿಲ್ಲ. ಮಾಧ್ಯಮಗಳು 'ಕಾಂಗರೂ ನ್ಯಾಯಾಲಯ'ಗಳನ್ನು ನಡೆಸುವುದನ್ನು ನಾವು ನೋಡುತ್ತಿದ್ದೇವೆ, ಕೆಲವೊಮ್ಮೆ ಅನುಭವಿ ನ್ಯಾಯಾಧೀಶರು ಸಹ ಸಮಸ್ಯೆಗಳ ಬಗ್ಗೆ ನಿರ್ಧರಿಸಲು ಕಷ್ಟಪಡುವಂತಾಗಿದೆ" ಎಂದರು.

ಮಾಧ್ಯಮಗಳು ಹರಡುತ್ತಿರುವ ಪಕ್ಷಪಾತದ ಅಭಿಪ್ರಾಯಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿವೆ ಮತ್ತು ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಎಂದಿರುವ ಅವರು, "ನ್ಯಾಯ ವಿಚಾರಣೆ ನೆಯುತ್ತಿರುವ ವಿಷಯಗಳ ಬಗ್ಗೆ ಅನಪೇಕ್ಷಿತ ಮತ್ತು ಅಜೆಂಡಾ ರೀತಿಯ ಚರ್ಚೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತಾಗಿದೆ. ಈ ಪ್ರಕ್ರಿಯೆಯಲ್ಲಿ, ನ್ಯಾಯ ನೀಡುವಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದರು.

Electronic and social media were doing a disservice to democracy- NV Ramana

ಮುದ್ರಣ ಮಾಧ್ಯಮವು ಇನ್ನೂ ಒಂದು ನಿರ್ದಿಷ್ಟ ಮಟ್ಟದ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ ವಿದ್ಯುನ್ಮಾನ ಮಾಧ್ಯಮವು ಶೂನ್ಯ ಹೊಣೆಗಾರಿಕೆಯನ್ನು ಹೊಂದಿದೆ. ಸಾಮಾಜಿಕ ಮಾಧ್ಯಮ ಇನ್ನೂ ಕೆಟ್ಟದಾಗಿದೆ ಎಂದು ವಿಷಾಧ ವ್ಯಕ್ತಪಡಿಸಿರುವ ಅವರು, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸುವಂತೆ ಒತ್ತಾಯಿಸಿದರು.

English summary
Chief Justice of India NV Ramana Saturday criticism of the Electronic and social media, saying they were detrimental to health of democracy. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X