ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಯ ಚುನಾವಣೆ 2020:ಒಟ್ಟು ಸ್ಥಾನ, ರಾಜ್ಯವಾರು ಪೂರ್ಣ ವಿವರ

|
Google Oneindia Kannada News

ನವದೆಹಲಿ, ಜೂನ್ 9: ಕೊರೊನಾವೈರಸ್ ಹಿನ್ನೆಲೆಯಿಂದ ಮುಂದೂಡಲ್ಪಟ್ಟಿದ್ದ ರಾಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆಗೆ ದಿನಾಂಕವನ್ನು ಸೋಮವಾರದಂದು ಚುನಾವಣಾ ಆಯೋಗ ಪ್ರಕಟಿಸಿದೆ.

Recommended Video

ಕಣ್ಣೂರಿನ ಆಂಬುಲೆನ್ಸ್ ಡ್ರೈವರ್ ಉಮೇಶ್ ಅವರ ಪತ್ನಿಗೆ ಮುಖ್ಯಮಂತ್ರಿ ಕರೆ‌ | Oneindia Kannada

ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್ ಡೌನ್ ಮುಂದುವರೆಸಲಾಗಿದೆ. ಈ ನಡುವೆ ಮಾರ್ಚ್ ತಿಂಗಳಿನಲ್ಲಿ ನಿಗದಿಯಾಗಿದ್ದ ರಾಜ್ಯಸಭೆ ಚುನಾವಣೆಯನ್ನುಕೇಂದ್ರ ಚುನಾವಣಾ ಆಯೋಗವು ಮುಂದೂಡಿತ್ತು. ಮಾರ್ಚ್ 26 ರಂದು ರಾಜ್ಯಸಭೆಯ 55 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.

ಜೂನ್ 19ರಂದು 10 ರಾಜ್ಯಗಳ 24 ಸ್ಥಾನಗಳಿಗೆ ಚುನಾವಣೆ

ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಣಿಪುರ, ಜಾರ್ಖಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಚುನಾವಣೆ ನಿಗದಿಯಾಗಿದೆ. ಜೂನ್ 19 ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಜೂನ್ 22ರೊಳಗೆ ಎಲ್ಲಾ ಚುನಾವಣೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಿದೆ.

ರಾಜ್ಯಸಭಾ ಚುನಾವಣೆ; ಬಿಜೆಪಿ ಬಹುಮತ ಪಡೆಯುವುದು ಕಷ್ಟ?ರಾಜ್ಯಸಭಾ ಚುನಾವಣೆ; ಬಿಜೆಪಿ ಬಹುಮತ ಪಡೆಯುವುದು ಕಷ್ಟ?

ಅಂಧ್ರಪ್ರದೇಶ (4 ಸ್ಥಾನ), ಗುಜರಾತ್ (4), ಕರ್ನಾಟಕ (4), ಮಧ್ಯಪ್ರದೇಶ(3), ಜಾರ್ಖಂಡ್(2), ಮಣಿಪುರ(1), ಮೇಘಾಲಯ (1), ಅರುಣಾಚಲಪ್ರದೇಶ(1), ಮಿಜೋರಾಂ (1) ಹಾಗೂ ರಾಜಸ್ಥಾನದ (3) ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.

37 ಸೀಟುಗಳಿಗೆ ಅವಿರೋಧ ಆಯ್ಕೆ

37 ಸೀಟುಗಳಿಗೆ ಅವಿರೋಧ ಆಯ್ಕೆ

ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜ್ಯಸಭೆ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಚುನಾವಣೆಗೆ ಸಜ್ಜಾಗಿವೆ. 55 ರಾಜ್ಯಸಭಾ ಸೀಟುಗಳ ಪೈಕಿ 37 ಸೀಟುಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 18 ಸೀಟುಗಳಿಗೆ ಮಾತ್ರ ಚುನಾವಣೆ ನಡೆಯಬೇಕಾಗಿತ್ತು. ಈಗ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, ಜೂನ್ 19ರಂದು ಮತದಾನ ಹಾಗೂ ಮತ ಎಣಿಕೆ ಎಲ್ಲವೂ ನಡೆಯಲಿದೆ.

ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?

ಬಿಜೆಪಿ 13 ಸ್ಥಾನ ಗಳಿಸುವ ಸಾಧ್ಯತೆ

ಬಿಜೆಪಿ 13 ಸ್ಥಾನ ಗಳಿಸುವ ಸಾಧ್ಯತೆ

ರಾಜ್ಯಸಭೆಯಲ್ಲಿ 82 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತೆರವಾಗುವ 51 ಸ್ಥಾನಗಳ ಪೈಕಿ 13 ಸ್ಥಾನ ಗಳಿಸುವ ಸಾಧ್ಯತೆಯಿದೆ. ಒಡಿಶಾದಲ್ಲಿ ಮೂರು ಸ್ಥಾನಗಳು ತೆರವಾಗಲಿದ್ದು, ಈ ಪೈಕಿ ಎರಡು ಬಿಜೆಡಿ ಪಾಲಾಗಲಿದ್ದು, ಉಳಿದ ಒಂದು ಬಿಜೆಪಿಗೆ ಸಿಗಲಿದೆ. ಏಪ್ರಿಲ್ ನಲ್ಲಿ ಆಂಧ್ರದಿಂದ ನಾಲ್ಕು ಸ್ಥಾನಗಳು ತೆರವಾಗಲಿದ್ದು, ವೈಎಸ್‌ಆರ್‌ ಕಾಂಗ್ರೆಸ್ ಪಡೆದುಕೊಳ್ಳಲಿದೆ. ಉಳಿದಂತೆ ಕರ್ನಾಟಕದಲ್ಲಿ ಬಿಜೆಪಿಯ ಪ್ರಭಾಕರ ಕೋರೆ, ರಾಜೀವ್ ಗೌಡ, ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ಹಾಗೂ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವಧಿ ಜೂನ್ 25ಕ್ಕೆ ಅಂತ್ಯವಾಗಲಿದೆ. 2 ಸ್ಥಾನ ಬಿಜೆಪಿಗೆ ಖಚಿತವಾಗಲಿದೆ.

ಜ್ಯೋತಿರಾದಿತ್ಯ ಸಿಂಧಿಯಾ ಸಂಸತ್ತಿಗೆ ಪ್ರವೇಶ ಬಯಸಿದ್ದಾರೆ

ಜ್ಯೋತಿರಾದಿತ್ಯ ಸಿಂಧಿಯಾ ಸಂಸತ್ತಿಗೆ ಪ್ರವೇಶ ಬಯಸಿದ್ದಾರೆ

ಹಿಮಾಚಲ ಪ್ರದೇಶ ಹಾಗೂ ಹರ್ಯಾಣದಲ್ಲಿ ತಲಾ ಒಂದು ಸ್ಥಾನಗಳು ಬಿಜೆಪಿಗೆ ಲಾಭವಾಗಲಿವೆ. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ ರಾಜ್ಯಸಭೆ ಟಿಕೆಟ್ ಪಡೆದಿದ್ದ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ರಾಜ್ಯಸಭೆ ಮೂಲಕ ಸಂಸತ್ತಿಗೆ ಪ್ರವೇಶ ಬಯಸಿದ್ದಾರೆ. ಕರ್ನಾಟಕದಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಕಾಂಗ್ರೆಸ್ಸಿನಿಂದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಪ್ರವೇಶ ಬಯಸಿರುವ ಸುದ್ದಿ ಬರುತ್ತಿದೆ. ಹೀಗಾಗಿ, ಈ ಬಾರಿ ಸ್ಪರ್ಧೆ ಕುತೂಹಲಕಾರಿಯಾಗಲಿದೆ

24 ಸ್ಥಾನಕ್ಕೆ ಚುನಾವಣೆ ನಡೆಯಲಿದೆ

24 ಸ್ಥಾನಕ್ಕೆ ಚುನಾವಣೆ ನಡೆಯಲಿದೆ

ಮಹಾರಾಷ್ಟ್ರದಿಂದ 7, ತಮಿಳುನಾಡಿನಿಂದ 6, ಬಿಹಾರ ಹಾಗೂ ಪಶ್ಚಿಮ ಬಂಗಾಳದಿಂದ ತಲಾ 5, ಆಂಧ್ರ ಹಾಗೂ ಗುಜರಾತ್‌ನಿಂದ ತಲಾ 4, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಒಡಿಶಾದಿಂದ ತಲಾ 3, ಜಾರ್ಖಂಡ್ ಹಾಗೂ ಛತ್ತೀಸ್‌ಗಢದಿಂದ ತಲಾ 2, ಅಸ್ಸಾಂ, ಮಣಿಪುರ, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳ ತಲಾ 1ಸ್ಥಾನಗಳು ತೆರವಾಗಿತ್ತು. ಈ ಪೈಕಿಆಂಧ್ರ, ಗುಜರಾತ್, ಮಧ್ಯಪ್ರದೇಶ, ಮಣಿಪುರ, ಜಾರ್ಖಂಡ್, ಮೇಘಾಲಯ ಹಾಗೂ ರಾಜಸ್ಥಾನ ರಾಜ್ಯಗಳನ್ನು ಬಿಟ್ಟು ಮಿಕ್ಕ ರಾಜ್ಯಗಳಲ್ಲಿ ಅವಿರೋಧ ಆಯ್ಕೆಯಾಗಿದೆ.ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳು ಜೂನ್ 25ಕ್ಕೆ ಅಂತ್ಯವಾಗಲಿದೆ. ಉಳಿದ 24 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

{quiz_144}

English summary
Elections to Council of States (Rajya Sabha) to fill 24 seats from States of Andhra Pradesh, Gujarat, Jharkhand, Madhya Pradesh, Manipur, Meghalaya, Rajasthan and tohers to be held on 19th June, 2020. Counting of votes shall take place at 5 pm on day of election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X