ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯ ದ್ವೇಷ ಭಾಷಣಕ್ಕೆ ಪ್ರೀತಿಯ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮೇ 15: ಲೋಕಸಭೆ ಚುನಾವಣೆ 2019ರ ಕೊನೆ ಎರಡು ಹಂತದ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ವೈಖರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಚ್ಚರಿಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ದ್ವೇಷಭರಿತ, ವೈಯಕ್ತಿಕ ನಿಂದನೆ ವಾಗ್ದಾಳಿ ನಡೆಸಿದ ಮೋದಿ ಅವರನ್ನು ಪ್ರೀತಿಯ ಮೂಲಕ ಸೋಲಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಸಂಸತ್ತಿನಲ್ಲಿ ಮೋದಿ ಅವರಿಗೆ ಅಪ್ಪುಗೆ ನೀಡಿದ್ದ ಸಂದರ್ಭದಲ್ಲೂ ಇದೇ ರೀತಿ ಮಾತುಗಳನ್ನಾಡಿದ್ದರು. ದ್ವೇಷ, ನಿಂದನೆಗಳನ್ನು ಬಿಟ್ಟು ಪ್ರೀತಿಯಿಂದ ಎಲ್ಲರನ್ನು ಗೆಲ್ಲಬೇಕು ಎಂದು ರಾಹುಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Will die but wont insult PM Modis parents: Rahul Gandhi

'ನನ್ನ ತಂದೆ ಹಾಗೂ ಅಜ್ಜಿಯನ್ನು ಪ್ರಧಾನಿ ಮೋದಿ ಅವರು ತೀವ್ರವಾಗಿ ನಿಂದಿಸಿದ್ದಾರೆ. ಚುನಾವಣಾ ಪ್ರಚಾರ ಭಾಷಣದ ವೇಳೆ ವೈಯಕ್ತಿಕ ದ್ವೇಷ ಎದ್ದು ಕಾಣುತ್ತಿದೆ. ಆದರೆ, ನಾನು ಅವರಂತೆ ದ್ವೇಷಕಾರುವುದಿಲ್ಲ, ಅವರ ತಂದೆ-ತಾಯಿಯನ್ನು ನಿಂದಿಸುವುದಿಲ್ಲ' ಎಂದಿದ್ದಾರೆ.

'ಮೋದಿಜೀ ದ್ವೇಷದ ಬಗ್ಗೆ ಮಾತನಾಡುತ್ತಿದ್ದಾರೆ, ನನ್ನ ತಂದೆ, ಅಜ್ಜಿ, ಮುತ್ತಜ್ಜರನ್ನು ನಿಂದಿಸಿದ್ದಾರೆ. ನಾನು ನನ್ನ ಜೀವಿತಾವಧಿಯಲ್ಲಿ ಮೋದಿ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ, ಅವರ ತಂದೆ, ತಾಯಿಯ ಅಪಮಾನ ಮಾಡಲ್ಲ, ಅಂಥ ಕೃತ್ಯ ಎಸಗಿಸುವುದರ ಬದಲು ಸಾವನ್ನು ಸ್ವೀಕರಿಸುತ್ತೇನೆ' ಎಂದು ಹೇಳಿದರು.

'ನಾನು ಆರೆಸ್ಸೆಸ್ ಅಥವಾ ಬಿಜೆಪಿಯವನಲ್ಲ, ನಾನು ಕಾಂಗ್ರೆಸ್ಸಿಗ. ನನ್ನ ವಿರುದ್ಧ ದ್ವೇಷದ ಬಾಣ ಎಸೆದರೆ, ಪ್ರೀತಿಯನ್ನು ಹಿಂತಿರುಗಿಸುತ್ತೇನೆ, ಮೋದಿ ಅವರಿಗೆ ಅಪ್ಪುಗೆ ನೀಡಿ, ಪ್ರೀತಿಯಿಂದ ಗೆಲ್ಲುತ್ತೇನೆ' ಎಂದು ರಾಹುಲ್ ಹೇಳಿದ್ದಾರೆ.

English summary
Congress chief Rahul Gandhi on Tuesday said Prime Minister Narendra Modi insulted his father and grandmother during campaigning but he would not do the same to the latter's parents. Rahul Gandhi also said the Congress would defeat the Prime Minister "with love".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X