ನಮೋ ಟಿವಿ ಪ್ರಸಾರ ಎಲ್ಲೆಡೆ ಬಂದ್, ಎಎಪಿ, ಕಾಂಗ್ರೆಸ್ಸಿಗೆ ಗೆಲುವು
ನವದೆಹಲಿ, ಮೇ 20: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಇನ್ನಷ್ಟು ವಿಸ್ತಾರವಾಗಿ ತಲುಪಿಸಲು ಇತ್ತೀಚೆಗೆ ಆರಂಭವಾದ "ನಮೋ ಟಿವಿ' ಪ್ರಸಾರ ಬಂದ್ ಆಗಿದೆ. "ನಮೋ ಟಿವಿ' ಬಂದ್ ಮಾಡುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ದೂರು ಸಲ್ಲಿಸಿದ್ದು, ಪರಿಣಾಮ ಬೀರಿದಂತೆ ಕಾಣುತ್ತಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪ್ರಧಾನಿ ಮೋದಿ ಅವರ ಚುನಾವಣಾ ಭಾಷಣಗಳನ್ನು ಲೈವ್ ಪ್ರಸಾರ ಮಾಡುವುದು, ಮಾರ್ಚ್ 31ರಂದು 'ಮೇ ಭಿ ಚೌಕಿದಾರ್' ಕಾರ್ಯಕ್ರಮ ಸಂವಾದವನ್ನು ಪ್ರಸಾರ ಮಾಡಿದ್ದರ ಬಗ್ಗೆ ಸ್ಪಷ್ಟನೆ ಕೋರಿ ಪ್ರಸಾರ ಭಾರತಿ ಹಾಗೂ ದೂರದರ್ಶನಕ್ಕೆ ಚುನಾವಣಾ ಆಯೋಗವು ನೋಟಿಸ್ ನೀಡಿತ್ತು.
ನಮೋ ಟಿವಿ ವಿರುದ್ಧ ಆಯೋಗಕ್ಕೆ ದೂರಿತ್ತ ಎಎಪಿ, ಕಾಂಗ್ರೆಸ್
ಚುನಾವಣೆಗೆ ಸಂಬಂಧಿಸಿದ ವಿಷಯಗಳು, ಬಿಜೆಪಿ ಪರ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಆಯೋಗವು ನಿರ್ಬಂಧ ಹೇರಿತ್ತು. ಲೈಸನ್ಸ್ ಅಗತ್ಯವಿರುವ ಟಿವಿಗಳ ಕೆಟಗೆರಿಗೆ ಈ ಟಿವಿ ಸೇರುವುದಿಲ್ಲ. ಇದು ಜಾಹೀರಾತು ಆಧಾರಿತ ವಾಹಿನಿ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಮರ್ಥಿಸಿಕೊಂಡಿತ್ತು.
ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ಆಯೋಗದ ಸೂಚನೆ ಅನ್ವಯ ಈ ರೀತಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಟಿವಿ ಚಾನಲ್ಗಳಿಗೆ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಯೋಗವನ್ನು ಕೋರಿತ್ತು.
'ನಮೋ ಟಿವಿ' ಹಿಂದಿ ಸುದ್ದಿ ವಾಹಿನಿ ಅಲ್ಲ: ಟಾಟಾ ಸ್ಕೈ ಸ್ಪಷ್ಟನೆ
ನಮೋ ಟಿವಿ ಡಿಶ್ ಟಿವಿ, ಟಾಟಾ ಸ್ಕೈ, ಸಿಟಿ, ಏರ್ ಟೆಲ್ ಸೇರಿದಂತೆ ಪ್ರಮುಖ ಡಿಟಿಎಚ್ ಮತ್ತು ಕೇಬಲ್ ಟಿವಿ ಜಾಲದಲ್ಲಿ ಲಭ್ಯವಿತ್ತು. ಮೋದಿ ಹೆಸರಿನ ಮೊಬೈಲ್ ಅಪ್ಲಿಕೇಶನ್ ಕೂಡಾ ಒಳಗೊಂಡಿತ್ತು. ಪ್ರತ್ಯೇಕ ಇಂಟರ್ನೆಟ್ ಟಿವಿ ಚಾನಲ್ ಕೂಡಾ ಇತ್ತು.