• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವಿಎಂ: ಭಾರತೀಯರು ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು

|

ನವದೆಹಲಿ, ಆ 31: ಕಾಂಗ್ರೆಸ್ಸಿನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ, ಭಾರತೀಯರು ಇನ್ನಾದರೂ ಎಚ್ಚೆತ್ತುಕೊಳ್ಳಿ ಎನ್ನುವ ಸಲಹೆಯನ್ನು ನೀಡಿದ್ದಾರೆ.

ಟ್ವೀಟ್ ಒಂದಕ್ಕೆ ಉತ್ತರಿಸುತ್ತಾ ದಿಗ್ವಿಜಯ್ ಸಿಂಗ್, "ಭಾರತೀಯರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಅಂದರೆ 2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯೇ ಕೊನೆ ಚುನಾವಣೆಯಾಗಬಹುದು"ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರ್ಚಸ್ಸಿಗಾಗಿ ಆಡಿದ್ದಕಿಂತ, ನುಂಗಿದ್ದೇ ಹೆಚ್ಚು: ಆ ಸ್ಥಾನ ಅವರಿಗೆ ಒಲಿಯುತ್ತಾ?

"ನಿಮ್ಮ ಮಾತು ಸತ್ಯ. ಹೊಸ ತಂತ್ರಜ್ಞಾನದ ಮೂಲಕ ಇವಿಎಂ, ದೇಶದ ಪ್ರಜಾಪ್ರಭುತ್ವ / ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಭಾರತೀಯರು ಇನ್ನಾದರೂ ಎಚ್ಚೆತ್ತುಕೊಂಡು ಬ್ಯಾಲಟ್ ಪೇಪರ್ ಮೂಲಕವೇ ಚುನಾವಣೆಗೆ ಪಟ್ಟು ಹಿಡಿಯದಿದ್ದರೆ, 2024ರಲ್ಲಿ ದೇಶದಲ್ಲಿ ಕೊನೆಯ ಚುನಾವಣೆ ಆಗಬಹುದು" ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಡಿಸ್ ಲೈಕ್ ಆಗಿದ್ದೇ ಹೆಚ್ಚು ಎಂದು ಲೇವಡಿ ಮಾಡಿರುವ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ವಿರುದ್ದವೂ ಕಿಡಿಕಾರಿದ್ದಾರೆ.

ಆಶುಭ ಗಳಿಗೆಯಲ್ಲಿ ರಾಮ ಮಂದಿರ ಶಿಲಾನ್ಯಾಸ: ದಿಗ್ವಿಜಯ್ ಸಿಂಗ್

ಬಿಜೆಪಿಯವರು ನಕಲಿ ಗೋಭಕ್ತರು ಎಂದು ಜರಿದಿರುವ ಸಿಂಗ್, "ಹಿಂದೆ ಕಮಲ್ ನಾಥ್ ಸರಕಾರ ಗೋಶಾಲೆಗೆಂದು ಮೀಸಲಾಗಿಟ್ಟಿದ್ದ ಅನುದಾನವನ್ನು ಶಿವರಾಜ್ ಸಿಂಗ್ ಸರಕಾರ ಕಡಿತಗೊಳಿಸಿದೆ. ಇದು, ಬಿಜೆಪಿಯ ಗೋಪ್ರೇಮ" ಎಂದು ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.

ಬಿಹಾರದ ಅಸೆಂಬ್ಲಿ ಚುನಾವಣೆ ಈ ವರ್ಷದಲ್ಲಿ ನಡೆಯುತ್ತಿರುವುದರಿಂದ, ಇವಿಎಂ ವಿಚಾರ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಯಿದೆ. ಕೊರೊನಾ ಕಾಟದ ನಡುವೆಯೂ, ಬಿಹಾರದಲ್ಲಿ ಚುನಾವಣೆ ನಡೆಸುವುದಾಗಿ, ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟ ಪಡಿಸಿದೆ.

English summary
Election Through EVM Should Be Stopped: Senior Congress Leader Digvijay Singh Demands,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X