ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರನ್ನು ಸ್ಥಳದಲ್ಲೇ ನೋಂದಣಿ ಮಾಡಲು ನೂತನ ಆ್ಯಪ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಲೋಕಸಭಾ ಚುನಾವಣೆ(2019)ರ ಸಮಯದಲ್ಲಿ ಮತದಾರರ ಪಟ್ಟಿಯನ್ನು ದೋಷರಹಿತವನ್ನಾಗಿ ಮಾಡುವ ಉದ್ದೇಶದಿಂದ ಚುನಾವಣಾ ಆಯೋಗವು ಎರಡು ಹೊಸ ಅಪ್ಲಿಕೇಷನ್ ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, ಬಿಎಲ್‌ಇ ನೆಟ್ ಮತ್ತು ಇಆರ್‌ಒನೆಟ್ ಮೂಲಕ ಇವುಗಳನ್ನು ಪರಿಚಯಿಸಲಿದೆ.

ಮತದಾರರ ಗುಣಮಟ್ಟದ ಭಾವಚಿತ್ರಗಳನ್ನು ಸಂಗ್ರಹಿಸುವ ಸಲುವಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ಟ್ಯಾಬ್ ಇಲ್ಲವೆ ಸ್ಮಾರ್ಟ್ ಫೋನ್ ಗಳನ್ನು ಆಯೋಗ ನೀಡಲಿದೆ. ಇವರು ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಮತದಾರರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಾರೆ ಮತ್ತು ಭಾವಚಿತ್ರ ಸೆರೆಹಿಡಿಯಲಿದ್ದಾರೆ.

ಕರ್ನಾಟಕ ಚುನಾವಣಾ ಕಣದಲ್ಲಿ ಕೊನೆಗೆ ಉಳಿದವರೆಷ್ಟು? ಕರ್ನಾಟಕ ಚುನಾವಣಾ ಕಣದಲ್ಲಿ ಕೊನೆಗೆ ಉಳಿದವರೆಷ್ಟು?

ಇವುಗಳನ್ನು ಆ ಸ್ಥಳದಲ್ಲೇ ಚುನಾವಣಾ ಆಯೋಗಕ್ಕೆ ಈ ಅಪ್ಲಿಕೇಷನ್ ಮೂಲಕ ನೇರವಾಗಿ ರವಾನಿಸುತ್ತಾರೆ. ಈ ದಾಖಲೆ ಸಮರ್ಪಕವಾಗಿದ್ದರೆ ಮತದಾರರ ಹೆಸರು ಆ ಕ್ಷಣದಲ್ಲೇ ಮತದಾರರ ಪಟ್ಟಿಗೆ ಅಡಕವಾಗುತ್ತದೆ ಎಂದು ಡೆಪ್ಯುಟಿ ಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ ತಿಳಿಸಿದ್ದಾರೆ.

Election commission will launch two Apps soon!

ಬಿಎಲ್ಒ-ನೆಟ್ ಸಂಪರ್ಕಿಸುವ ಅಪ್ಲಿಕೇಷನ್ ನಲ್ಲಿ ಎಂಟು ಅರ್ಜಿಗಳು ದೊರೆಯಲಿದ್ದು, ಮತದಾರರ ವಿವರ, ವಿಳಾಸ ಬದಲಾವಣೆಯಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ.

English summary
Election commission of India is planning to launch two more applications including voters enrollment device which will register the electoral names to voters list on the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X