ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಏರಿಕೆ: ಸಮಿತಿ ರಚಿಸಿದ ಆಯೋಗ

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಪರಿಷ್ಕರಣೆ ಮಾಡುವ ಸಂಬಂಧ ಪರಿಶೀಲನೆ ನಡೆಸಲು ಚುನಾವಣಾ ಆಯೋಗವು ಸಮಿತಿಯೊಂದನ್ನು ರಚಿಸಿದೆ. ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಮತ್ತು ವೆಚ್ಚ ಹೆಚ್ಚಳ ಸೂಚ್ಯಂಕದ ಏರಿಕೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ತೀರ್ಮಾನಕ್ಕೆ ಬಂದಿದೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು 2014ರಲ್ಲಿ ಕೊನೆಯ ಬಾರಿ ಪರಿಷ್ಕರಿಸಲಾಗಿತ್ತು. 2018ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಲಾಗಿತ್ತು.

ಅಭ್ಯರ್ಥಿಗಳ ಚುನಾವಣಾ ವೆಚ್ಚ ಏರಿಕೆ ಮಾಡಿದ ಕೇಂದ್ರ ಸರ್ಕಾರಅಭ್ಯರ್ಥಿಗಳ ಚುನಾವಣಾ ವೆಚ್ಚ ಏರಿಕೆ ಮಾಡಿದ ಕೇಂದ್ರ ಸರ್ಕಾರ

ಮತದಾರರ ಸಂಖ್ಯೆ 834 ಮಿಲಿಯನ್‌ನಿಂದ 2019ರ ವೇಳೆಗೆ 910 ಮಿಲಿಯನ್‌ಗೆ ಏರಿಕೆಯಾಗಿತ್ತು. ಈಗ ಅದು 921 ಮಿಲಿಯನ್‌ಗೆ ಏರಿಕೆಯಾಗಿದೆ. ಕಳೆದ ಆರು ವರ್ಷಗಳಲ್ಲಿ ಚುನಾವಣಾ ವೆಚ್ಚದ ಮಿತಿಯನ್ನು ಏರಿಕೆ ಮಾಡಿಲ್ಲ. ಆದರೆ 2019ರ ವೇಳೆಗೆ 220 ರಿಂದ 280ಕ್ಕೆ ಏರಿಕೆಯಾಗುದ್ದ ವೆಚ್ಚಳ ಏರಿಕೆ ಸೂಚ್ಯಂಕ ಈಗ 301ಕ್ಕೆ ತಲುಪಿದೆ ಎಂದು ಚುನಾವಣಾ ಆಯೋಗ ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ. ಮುಂದೆ ಓದಿ.

ವೆಚ್ಚದ ಮೌಲ್ಯಮಾಪನ

ವೆಚ್ಚದ ಮೌಲ್ಯಮಾಪನ

ತನಿಖಾ ದಳದ ಮಾಜಿ ಡಿಜಿ ಹರೀಶ್ ಕುಮಾರ್ ಮತ್ತು ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಉಮೇಶ್ ಸಿನ್ಹಾ ಅವರನ್ನು ಒಳಗೊಂಡ ಸಮಿತಿಯು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮತದಾರರ ಸಂಖ್ಯೆಯಲ್ಲಿನ ಬದಲಾವಣೆ ಹಾಗೂ ವೆಚ್ಚದ ಮೇಲಿನ ವಿವರಗಳನ್ನು ಮೌಲ್ಯಮಾಪನ ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳು ಮಾಡಿದ ವೆಚ್ಚದ ಸ್ವರೂಪ ಮತ್ತು ವೆಚ್ಚ ಹೆಚ್ಚಳ ಸೂಚ್ಯಂಕದಲ್ಲಿನ ಬದಲಾವಣೆಗಳನ್ನೂ ಮೌಲ್ಯಮಾಪನ ಮಾಡುವಂತೆ ಸೂಚಿಸಲಾಗಿದೆ.

ನಾಲ್ಕು ತಿಂಗಳಲ್ಲಿ ವರದಿ ಸಲ್ಲಿಕೆ

ನಾಲ್ಕು ತಿಂಗಳಲ್ಲಿ ವರದಿ ಸಲ್ಲಿಕೆ

ರಾಜಕೀಯ ಪಕ್ಷಗಳು ಹಾಗೂ ಇತರೆ ಸಂಬಂಧಿತ ಸಂಸ್ಥೆಗಳ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಮಿತಿ ಪಡೆದುಕೊಳ್ಳಲಿದೆ. ವೆಚ್ಚದ ಮೇಲೆ ಅವಲಂಬಿತವಾಗಿರುವ ಇತರೆ ಅಂಶಗಳನ್ನು ಕೂಡ ಅದು ಪರಿಶೀಲಿಸಲಿದೆ. ರಚನೆಯಾದ ನಾಲ್ಕು ತಿಂಗಳ ಒಳಗೆ ಸಮಿತಿಯು ವರದಿ ನೀಡಲಿದೆ ಎಂದು ಆಯೋಗ ತಿಳಿಸಿದೆ.

ಬಿಜೆಪಿ ಮಹಿಳಾ ಅಭ್ಯರ್ಥಿಗೆ 'ಐಟಂ' ಎಂದ ಮಾಜಿ ಸಿಎಂಗೆ ನೋಟಿಸ್ಬಿಜೆಪಿ ಮಹಿಳಾ ಅಭ್ಯರ್ಥಿಗೆ 'ಐಟಂ' ಎಂದ ಮಾಜಿ ಸಿಎಂಗೆ ನೋಟಿಸ್

ಶೇ 10ರಷ್ಟು ವೆಚ್ಚದ ಮಿತಿ ಏರಿಕೆ

ಶೇ 10ರಷ್ಟು ವೆಚ್ಚದ ಮಿತಿ ಏರಿಕೆ

ಕೋವಿಡ್ 19ರ ಸಮಸ್ಯೆ ಮಧ್ಯೆ ಅಭ್ಯರ್ಥಿಗಳು ಪ್ರಚಾರಕ್ಕೆ ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ ಚುನಾವಣಾ ಆಯೋಗದ ಶಿಫಾರಸಿನಂತೆ ಸರ್ಕಾರವು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಶೇ 10ರಷ್ಟು ಹೆಚ್ಚಿಸಿ ಸೋಮವಾರ ಆದೇಶ ಹೊರಡಿಸಿತ್ತು. ಈ ಏರಿಕೆಯು ಪ್ರಸ್ತುತ ನಡೆಯುತ್ತಿರುವ ಬಿಹಾರ ವಿಧಾನಸಭೆ ಚುನಾವಣೆ ಹಾಗೂ ವಿವಿಧ ವಿಧಾನಸಭೆ ಉಪ ಚುನಾವಣೆ ಮತ್ತು ಒಂದು ಲೋಕಸಭೆ ಸ್ಥಾನದ ಉಪ ಚುನಾವಣೆಗೆ ತಕ್ಷಣದಿಂದಲೇ ಅನ್ವಯವಾಗಲಿದೆ. ರಾಜ್ಯದಿಂದ ರಾಜ್ಯಕ್ಕೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿ ವಿಭಿನ್ನವಾಗಿದೆ. ಸಣ್ಣ ರಾಜ್ಯಗಳಿಗೂ ದೊಡ್ಡ ರಾಜ್ಯಗಳಲ್ಲಿನ ಉಪ ಚುನಾವಣೆಯ ವೆಚ್ಚದ ಮಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ.

ಮಿತಿ ಹೆಚ್ಚಳ ಎಷ್ಟು?

ಮಿತಿ ಹೆಚ್ಚಳ ಎಷ್ಟು?

ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಬಿಹಾರ ಮತ್ತು ಹರಿಯಾಣದಂತಹ ದೊಡ್ಡ ರಾಜ್ಯಗಳಿಗೆ ಲೋಕಸಭೆ ಚುನಾವಣೆಯ ಪ್ರಚಾರ ವೆಚ್ಚದ ಮಿತಿಯನ್ನು 77 ಲಕ್ಷಕ್ಕೆ ಏರಿಸಲಾಗಿದೆ. ಅದು ಇದುವರೆಗೂ 70 ಲಕ್ಷ ರೂ ಇತ್ತು. ಹಾಗೆಯೇ ವಿಧಾನಸಭೆ ಚುನಾವಣೆಯ ವೆಚ್ಚದ ಮಿತಿಯನ್ನು 28 ಲಕ್ಷದಿಂದ 30.8 ಲಕ್ಷಕ್ಕೆ ಏರಿಸಲಾಗಿದೆ. ಸಣ್ಣ ರಾಜ್ಯಗಳಲ್ಲಿ 54 ಲಕ್ಷ ರೂ ಇದ್ದ ಲೋಕಸಭೆ ಪ್ರಚಾರ ವೆಚ್ಚದ ಮಿತಿಯನ್ನು 59.40 ಲಕ್ಷ ರೂ ಹಾಗೂ ವಿಧಾನಸಭೆ ವೆಚ್ಚದ ಮಿತಿಯನ್ನು 20 ಲಕ್ಷದಿಂದ 22 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಬಿಜೆಪಿ ಮಹಿಳಾ ಅಭ್ಯರ್ಥಿಗೆ 'ಐಟಂ' ಎಂದ ಮಾಜಿ ಸಿಎಂಗೆ ನೋಟಿಸ್ಬಿಜೆಪಿ ಮಹಿಳಾ ಅಭ್ಯರ್ಥಿಗೆ 'ಐಟಂ' ಎಂದ ಮಾಜಿ ಸಿಎಂಗೆ ನೋಟಿಸ್

English summary
Election Commission has set up a committee to examine the issue of revising the expenditure limit for canidates for lok sabha and assembly polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X