ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಲ್ಲಿ ಭಾರತದ ಇವಿಎಂ ಹ್ಯಾಕಿಂಗ್ : ಇದು ಅಸಾಧ್ಯ ಎಂದ ಆಯೋಗ

|
Google Oneindia Kannada News

ಬೆಂಗಳೂರು, ಜನವರಿ 21: 2014ರಲ್ಲಿ ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಳಕೆಯಾದ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್(ಇವಿಎಂ) ಗಳನ್ನು ಹ್ಯಾಕ್ ಮಾಡಲಾಗಿತ್ತು. ಇದಲ್ಲದೆ, ಭಾರತದಲ್ಲಿ ಎಲ್ಲ ಮಾದರಿಯ ಚುನಾವಣೆಗೆ ಬಳಕೆಯಾಗುವ ಇವಿಎಂ ಅನ್ನು ಹ್ಯಾಕ್ ಮಾಡುತ್ತೇನೆ ಎಂದು ಲಂಡನ್ನಿನ ಹ್ಯಾಕಥಾನ್ ನಲ್ಲಿ ಕೇಳಿ ಬಂದ ಘೋಷಣೆಯನ್ನು ಕೇಂದ್ರ ಚುನಾವಣೆ ಆಯೋಗವು ತಳ್ಳಿ ಹಾಕಿದೆ.

ಹ್ಯಾಕರ್​ ಹಾಕಿದ ಸವಾಲಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. 'ಇವಿಎಂ ಅನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ. ವೈರ್​ಲೆಸ್​ಸಂವಹನದ ಮೂಲಕ ಯಾವುದೇ ದತ್ತಾಂಶವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಾಂತ್ರಿಕ ತಜ್ಞ ಭಿಲಾಯಿಯ ಐಐಟಿಯ ನಿರ್ದೇಶಕ ಡಾ. ರಜತ್​ಮೂನಾ ಹೇಳಿದ್ದಾರೆ.

Election Commission Rubbishes London Hackers Claims On EVMs

ಸ್ಫೋಟಕ ಸುದ್ದಿ: ಇವಿಎಂ ಹ್ಯಾಕ್ ಬಗ್ಗೆ ತಿಳಿದಿದ್ದಕ್ಕೆ ಗೋಪಿನಾಥ್ ಮುಂಡೆ ಹತ್ಯೆ?ಸ್ಫೋಟಕ ಸುದ್ದಿ: ಇವಿಎಂ ಹ್ಯಾಕ್ ಬಗ್ಗೆ ತಿಳಿದಿದ್ದಕ್ಕೆ ಗೋಪಿನಾಥ್ ಮುಂಡೆ ಹತ್ಯೆ?

ಸೈಯ್ಯದ್​ಶುಜಾ ಎಂಬ ಹೆಸರಿನ ಹ್ಯಾಕರ್, ಇವಿಎಂ ಅನ್ನು ಹ್ಯಾಕ್ ಮಾಡಲು ಸಾಧ್ಯವಿದೆ ಎಂದು ಹ್ಯಾಕಥಾನ್ ವೇಳೆ ವಿವರಿಸಿದ್ದ. ಅತ್ಯಂತ ಕ್ಷೀಣ ತರಂಗಗಳಲ್ಲಿ ಕಾರ್ಯ ನಿರ್ವಹಿಸಬಲ್ಲ ಗ್ರಾಫೈಟ್ ಆಧಾರಿತ ಟ್ರಾನ್ಸ್ ಮೀಟರ್ ಇದ್ದರೆ ಮಾತ್ರ ಹ್ಯಾಕ್ ಮಾಡಲು ಸಾಧ್ಯ ಎಂದಿದ್ದ.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಭಾಗಿಯಾಗಿದ್ದ ಈ ಕಾರ್ಯಕ್ರಮದ ಪ್ರಚಾರದ ಮೂಲಕ ಕಾಂಗ್ರೆಸ್ ಏನ್ನನ್ನು ಹೇಳಲು ಹೊರಟಿದೆ. ರಫೇಲ್, 15 ಉದ್ಯಮಿಗಳ(ಅಸ್ತಿತ್ವದಲ್ಲೇ ಇಲ್ಲದ) ಸಾಲಮನ್ನಾ ಸುಳ್ಳುಗಳ ಸರಮಾಲೆಗೆ ಈಗ ಇವಿಎಂ ಹ್ಯಾಕಿಂಗ್ ಸೇರ್ಪಡೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.

English summary
The Election Commission today dismissed the claims made by a London-based hacker, who said he can hack the electronic voting machines used in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X