ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ, ಕಾಂಗ್ರೆಸ್ ಗೆ ಚುನಾವಣಾ ಆಯೋಗ ನೊಟೀಸ್

|
Google Oneindia Kannada News

ನವದೆಹಲಿ, ನ. 30: 'ಚುನಾವಣೆಯಲ್ಲಿ ನೀವು ಮಾಡಿದ ಖರ್ಚಿನ ವಿವರವನ್ನು ನಿಗದಿತ ದಿನದೊಳಗೆ ನೀಡಬೇಕು, ಇಲ್ಲವಾದರೆ ಪಕ್ಷದ ಮಾನ್ಯತೆಯನ್ನೇ ರದ್ದು ಮಾಡಬೇಕಾಗುವುದು' ಎಂದು ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.

ಕೇಂದ್ರದ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ, ಆಮ್ ಆದ್ಮಿ ಪಕ್ಷ ಸೇರಿದಂತೆ 20 ರಾಜಕೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗದಿಂದ ನೊಟೀಸ್ ಪಡೆದುಕೊಂಡಿವೆ.['ಶೂ' ಹೊಡೆತದಿಂದ ನಿತಿನ್‌ ಗಡ್ಕರಿ ಜಸ್ಟ್ ಮಿಸ್]

elections

ಸದ್ಯ ನಡೆದ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು 2014 ರ ಲೋಕಸಭಾ ಚುನಾವಣೆಯ ಖರ್ಚು ವೆಚ್ಚದ ವಿವರ ನೀಡುವಂತೆ ತಾಕೀತು ಮಾಡಿದೆ. ನಿಮಗೆ 15 ದಿನ ಕಾಲಾವಕಾಶ ನೀಡುತ್ತಿದ್ದು ಅಷ್ಟರಲ್ಲಿ ಸಮರ್ಪಕ ಲೆಕ್ಕ ಒದಗಿಸಿ, ಇಲ್ಲವಾದರೆ ಮಾನ್ಯತೆ ರದ್ದು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದೆ.[ಇತಿಹಾಸದ ಅತ್ಯಂತ ದುಬಾರಿ ಲೋಕಸಭಾ ಚುನಾವಣೆ]

ಚುನಾವಣೆ ಮುಗಿದ 75 ದಿನದೊಳಗಾಗಿ ಆಯೋಗಕ್ಕೆ ರಾಜಕೀಯ ಪಕ್ಷಗಳು ಲೆಕ್ಕಾಚಾರ ಒದಗಿಸಬೇಕು. ಅತಿ ಹೆಚ್ಚು ಅಂದರೆ 90 ದಿನಗಳ ಕಾಲಾವಕಾಶ ಪಡೆದುಕೊಳ್ಳಬಹುದು. ಆದರೆ ತಿಂಗಳುಗಳೇ ಉರುಳಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಯಾವ ವಿವರ ನೀಡಿಲ್ಲ ಎಂದು ಆಯೋಗ ತಿಳಿಸಿದೆ. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಯಾವ ಪ್ರತಿಕ್ರಿಯೆ ನೀಡಿಲ್ಲ.

English summary
Election Commission (EC) today issued showcause notices to 20 political parties including Congress, BJP and Aam Aadmi Party for failing to file poll expenditure statements within the stipulated time. The EC also warned these parties that it would withdraw their recognition if these statements, pertaining to recently held Assembly and General elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X