ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ದೇಶದಲ್ಲಿ ನಡೆದ ಪ್ರಮುಖ ಘಟನೆಗಳು

By Kiran B Hegde
|
Google Oneindia Kannada News

ಬೆಂಗಳೂರು, ನ. 22: ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾರ್ಖಂಡ್ ರಾಜ್ಯದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಚುನಾವಣೆ ಪ್ರಚಾರ ನಡೆಸಿದ್ದಾರೆ. ಕಾಶ್ಮೀರದ ನಿರಾಶ್ರಿತರ ಸಮಸ್ಯೆ ಬಗೆಹರಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಜನರ ಕೈಗೆ ಪೊರಕೆ ಕೊಟ್ಟಿದ್ದೇ ಮೋದಿ ಸರ್ಕಾರ ಸಾಧನೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

jammu

ದೇಶದಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ವಿವಿಧ ಘಟನೆಗಳ ವಿವರ.

ಮಧ್ಯಾಹ್ನ

4.15 : ಚೀನಾದ ಸಿಚುವಾನ್ ಪ್ರದೇಶದಲ್ಲಿ 5.8 ಮ್ಯಾಗ್ನಿಟ್ಯೂಡ್ ಸಾಮರ್ಥ್ಯದ ಭೂಕಂಪ : ಯುಎಸ್‌ಜಿಎಸ್

3.25 : ತಾಕತ್ತಿದ್ದರೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಎಂದು ಕೇಂದ್ರಕ್ಕೆ ಸವಾಲು ಹಾಕಿದ ಮಮತಾ ಬ್ಯಾನರ್ಜಿ : ಪಿಟಿಐ

2.10 : ನಾನು ದೆಹಲಿಯಲ್ಲಿ ಜಾತ್ಯತೀತ ಸಮಾವೇಷದಲ್ಲಿ ಭಾಗವಹಿಸಿದ್ದರಿಂದ ನನ್ನ ಪಕ್ಷದ ಸಂಸದ ಬಂಧಿಸಲ್ಪಟ್ಟಿದ್ದಾರೆ: ಮಮತಾ ಬ್ಯಾನರ್ಜಿ

1.40 : ಜಾರ್ಖಂಡ್ ರಾಜ್ಯದಲ್ಲಿ ಚುನಾವಣೆ ಪ್ರಚಾರ ಆರಂಭಿಸಿದ ರಾಹುಲ್ ಗಾಂಧಿ

12.33 : ಕಾಶ್ಮೀರದ ಕಿಸ್ತ್‌ವಾರ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸನ್ಮಾನ

12.20 : ಕೀನ್ಯಾದಲ್ಲಿ ಸೋಮಾಲಿಯಾದ ಗಡಿ ಹತ್ತಿರ 28 ಬಸ್ ಪ್ರಯಾಣಿಕರನ್ನು ಹತ್ಯೆಗೈದ ಉಗ್ರರು

12.05 : ನೊಯ್ದಾ ಮತ್ತು ಗ್ರೇಟರ್ ಕೈಲಾಶ್‌ನಲ್ಲಿ ಸಹರಾ ಸಂಸ್ಥೆ ಹೊಂದಿರುವ ಆಸ್ತಿಗಳ ಮೇಲೆ ಸಿಬಿಡಿಟಿ ದಾಳಿ

ಬೆಳಗ್ಗೆ

11.00 : ಚೆನ್ನೈ - ಶಿಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ 200 ಜನರಿಂದ ಪ್ರತಿಭಟನೆ

10.20 : ಚೆನ್ನೈ ನಗರದ ಪೊಶ್ ಲೋಯೋಲಾ ಶಾಲೆಯ ಶಿಕ್ಷಕರೋರ್ವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 19 ಜನರನ್ನು ಬಂಧಿಸಲಾಗಿದೆ.

10.06 : ಜಾರ್ಖಂಡ್ ರಾಜ್ಯದ ಮನಿಕಾ ನಗರದಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಸಭೆಗಾಗಿ ತಯಾರಿ ಆರಂಭ.

9.03 : ಜಮ್ಮು ಕಾಶ್ಮೀರದ ಕಿಸ್ತ್‌ವಾರ್ ನಗರದಲ್ಲಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಗಾಗಿ ತಯಾರಿ ಆರಂಭ.

8.15 : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ತಮ್ಮ ವಲಸೆ ಸುಧಾರಣೆ ನೀತಿಗೆ ಸಮರ್ಥನೆ

8.10 : ಬಂಧನದಲ್ಲಿರುವ ಟಿಎಂಸಿ ಸಂಸದ ಶ್ರಿಂಜೊಯ್ ಬೋಸ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

English summary
Election campaign rally is held in Kashmir and Jarkhand on Saturday. Narendra Modi will talk in Kashmir and Rahul will talk in Jarkhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X