ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ಮತದಾನದ ಹಕ್ಕು ಕಸಿದುಕೊಳ್ಳಿ: ಸಾಕ್ಷಿ

|
Google Oneindia Kannada News

ನವದೆಹಲಿ, ಏ. 13: 'ಮುಸ್ಲಿಮರ ಮತದಾನದ ಹಕ್ಕನ್ನು ರದ್ದುಪಡಿಸಬೇಕು, ದೇಶದಲ್ಲಿ ಇರುವುದು ಒಂದೇ ಕಾನೂನು, ಹಿಂದುಗಳು ಮಾತ್ರ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಮುಸ್ಲಿಮರು ಇದನ್ನು ಯಾಕೆ ಅನುಸರಿಸುತ್ತಿಲ್ಲ? ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್.

ಈ ಬಗ್ಗೆ ಕಟ್ಟುನಿಟ್ಟಿನ ಕಾನೂನು ರಚನೆಯಾಗಬೇಕು. ಮುಸ್ಲಿಮರು ಹಾಗೂ ಕ್ರೈಸ್ತರಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದ ಹೇಳುವುದಿಲ್ಲ. ಆದರೆ ಏಕರೂಪದ ಕುಟುಂಬ ಯೋಜನೆ ಹಾಗೂ ಕಾನೂನು ದೇಶದಲ್ಲಿ ಇರಬೇಕು. ಹಿಂದುಗಳು ನಾಲ್ಕು ಮಕ್ಕಳನ್ನು ಪಡೆಯಲಿ ಎಂದು ಹೇಳಿದರೆ ದೊಡ್ಡ ವಿವಾದವಾಗುತ್ತದೆ. ಆದರೆ ಇತರರು ನಾಲ್ಕು ಹೆಂಡತಿಯರನ್ನು ಹೊಂದಿ 40 ಮಕ್ಕಳನ್ನು ಪಡೆದರೂ ಕಾನೂನು ಸಮಸ್ಯೆ ಎದುರಾಗಲ್ಲ. ಇಂಥ ನೀತಿ ಬದಲಾಗಬೇಕು ಎಂದು ಆಗ್ರಹ ಮಾಡಿದ್ದಾರೆ.[ಹಿಂದೂ ಕುಟುಂಬಕ್ಕೆ ಫ್ಯಾಮಿಲಿ ಪ್ಲ್ಯಾನಿಂಗ್ ಬೇಡ: ಸಾಧ್ವಿ]

bjp

ಹೆಚ್ಚುತ್ತಿರುವ ಜನಸಂಖ್ಯೆಯು ದೇಶಕ್ಕೆ ಪ್ರಮುಖ ಸವಾಲಾಗಿದ್ದು ಇದನ್ನು ಕುಟುಂಬ ನಿಯಂತ್ರಣದ ಮೂಲಕ ಪರಿಹರಿಸಬೇಕು. ನಮ್ಮ ದೇಶವು ಸ್ವತಂತ್ರಗೊಂಡಾಗ 30 ಕೋಟಿ ಜನಸಂಖ್ಯೆ ಇತ್ತು. ಇದೀಗ 130 ಕೋಟಿ ಆಗಿದೆ. ಆದರೆ ಮುಸ್ಲಿಮರ ಸಂಖ್ಯೆ ಏರಿಕೆ ನೋಡಿದರೆ ಭಯವಾಗುತ್ತದೆ. ಎಲ್ಲರಿಗೂ ಏಕರೂಪದ ಕಾನೂನು ಇದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.[ಎಲ್ಲರನ್ನೂ ಮೀರಿಸಲಿದ್ದಾರೆ ಭಾರತದ ಮುಸ್ಲಿಮರು]

ಕುಟುಂಬ ಯೋಜನೆ ಕಾನೂನು ಸರಿಯಾಗಿ ಪಾಲಿಸದವರ ಮತದಾನದ ಹಕ್ಕು ಕಸಿದುಕೊಂಡರೆ ತಪ್ಪಾಗುವುದಿಲ್ಲ. ಇನ್ನಾದರೂ ಸಮಾಜಮುಖಿಯಾಗಿ ಚಿಂತಿಸಬೇಕಿದೆ ಎಂದು ಸಾಕ್ಷಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಸಾಕ್ಷಿ ಹೇಳಿಕೆಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಿಂದೊಮ್ಮೆ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಅವರನ್ನು ದೇಶ ಭಕ್ತ ಎಂದು ಸಾಕ್ಷಿ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದರು.

English summary
BJP MP Sakshi Maharaj has demanded that a strict law for family planning be brought in for all to check population growth and those who do not follow it should be stripped of their right to vote. "When Hindus go for sterilisation, Muslims should also opt for it. There should be one law for everyone, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X