ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಅತ್ಯಾಚಾರಿಗಳ ಜೊತೆ ನೇಣಿಗೇರಲಿದ್ದಾರೆ 8 ಅಪರಾಧಿಗಳು

|
Google Oneindia Kannada News

Recommended Video

ಕೊನೆಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಸುಪ್ರೀಂ | Oneindia Kannada

ನವದೆಹಲಿ, ಡಿಸೆಂಬರ್ 12: ನಿರ್ಭಾಯಾ ಅತ್ಯಾಚಾರಿಗಳಿಗೆ ನೇಣು ಶಿಕ್ಷೆ ವಿಧಿಸಲು ದಿನಗಣನೆ ಶುರುವಾಗಿದ್ದು, ಡಿಸೆಂಬರ್ 16 ರಂದು ಅವರನ್ನು ನೇಣಿಗೆ ಏರಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿವೆ ಆದರೆ ಅಧಿಕೃತ ದಿನಾಂಕ ಹೊರಬಿದ್ದಿಲ್ಲ.

ನೇಣಿಗೇರಿಸಲು ನುರಿತ ಸಿಬ್ಬಂದಿ ಇಲ್ಲದ ಕಾರಣ ನಿರ್ಭಯಾ ಅತ್ಯಾಚರಿಗಳು ಇನ್ನೂ ಉಸಿರಾಡುತ್ತಿದ್ದಾರೆ. ಇವರು ಮಾತ್ರವಲ್ಲದೆ ಇವರೊಂದಿಗೆ ಇನ್ನೂ ಎಂಟು ಮಂದಿ ನೇಣು ಶಿಕ್ಷೆ ವಿಧಿಸಲ್ಪಟ್ಟವರು ಸಹ ನೇಣು ಶಿಕ್ಷೆಯ ಸರತಿಯಲ್ಲಿದ್ದಾರೆ.

ನಿರ್ಭಯಾ ಅತ್ಯಾಚಾರ ಆರೋಪಿಗಳಾದ ಪವನ್ ಗುಪ್ತಾ, ಅಕ್ಷಯ್‌ ಠಾಕೂರ್, ವಿನಯ್ ಶರ್ಮಾ, ಮುಖೇಶ್ ಸಿಂಗ್ ಅವರಿಗೆ ಸುಪ್ರೀಂಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಒಟ್ಟು ಆರ್ವರು ಅಪರಾಧಿಗಳಲ್ಲಿ ರಾಮ್‌ ಸಿಂಗ್ ಎಂಬಾತ ಜೈಲಿನಲ್ಲಿ ನೇಣು ಹಾಕಿಕೊಂಡು ಅಸುನೀಗಿದ್ದ. ಮತ್ತೊಬ್ಬನು ಅಪ್ತಾಪ್ತನಾಗಿದ್ದ ಕಾರಣ ಆತನನ್ನು ಪುನಶ್ಚೇತನ ಗೃಹಕ್ಕೆ ಕಳುಹಿಸಲಾಗಿದೆ.

ಅಪರಾಧಿಗಳೆಲ್ಲರೂ ತಿಹಾರ್ ಜೈಲಿನಲ್ಲಿದ್ದು, ಇಲ್ಲಿಯೇ ಇವರನ್ನು ಗಲ್ಲಿಗೇರಿಸಲಾಗುತ್ತದೆ. ತಿಹಾರ್‌ ಜೈಲಿನಲ್ಲಿರುವ ಜೈಲು ನಂಬರ್ 3, ಫಾಸಿ ಕೋತಾ ಎಂಬಲ್ಲಿ ಗಲ್ಲು ಶಿಕ್ಷೆ ಜಾರಿಯಾಗುತ್ತದೆ. ಇದೇ ಸ್ಥಳದಲ್ಲಿ ಅಫ್ಜಲ್ ಗುರು, ಮಕ್ಬೂಲ್ ಭಟ್‌ ಅನ್ನೂ ಗಲ್ಲಿಗೇರಿಸಲಾಗಿತ್ತು. ಅವರನ್ನು ಇಲ್ಲಿಯೇ ಮಣ್ಣು ಮಾಡಲಾಗಿದೆ.

ಹೊಸ ನಾಟಕ ಶುರು ಹಚ್ಚಿದ ನಿರ್ಭಯಾ ಅತ್ಯಾಚಾರಿ!ಹೊಸ ನಾಟಕ ಶುರು ಹಚ್ಚಿದ ನಿರ್ಭಯಾ ಅತ್ಯಾಚಾರಿ!

ನಿರ್ಭಯಾ ಅಪರಾಧಿಗಳನ್ನು ಏಕಾಂತ ವಾಸದಲ್ಲಿ ಇಡಲಾಗಿಲ್ಲ. ಅವರ ಆರೋಗ್ಯ, ವರ್ತನೆಯ ಮೇಲೆ ನಿಗಾ ವಹಿಸಲಾಗಿದೆ. ಅವರು ಆರೋಗ್ಯದಿಂದಿದ್ದು, ವರ್ತನೆ ಸಹಜವಾಗಿದೆ ಎಂದು ತಿಹಾರ್ ಅಧಿಕಾರಿಗಳು ಹೇಳಿದ್ದಾರೆ.

ಅವಕಾಶ ಕೊಡುವಂತೆ ಪತ್ರ ಬರೆದಿದ್ದಾರೆ 12 ಮಂದಿ

ಅವಕಾಶ ಕೊಡುವಂತೆ ಪತ್ರ ಬರೆದಿದ್ದಾರೆ 12 ಮಂದಿ

ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ಸಹಾಯ ಮಾಡಲು 12 ಮಂದಿ ಮುಂದೆ ಬಂದಿದ್ದು, ತಿಹಾರ್ ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ವಿದೇಶದಿಂದಲೂ ಪತ್ರಗಳು ಬಂದಿವೆ. ಲಾಯರ್, ಚಾರ್ಟೆಡ್ ಅಕೌಂಟೆಂಟ್, ಕೆಲವು ಪೊಲೀಸರು ಪತ್ರ ಬರೆದಿರುವುದಾಗಿ ತಿಹಾರ್ ಜೈಲು ಅಧಿಕಾರಿಗಳು ಹೇಳಿದ್ದಾರೆ.

ನಮ್ಮ ಸಿಬ್ಬಂದಿಯೇ ಗಲ್ಲಿಗೇರಿಸುತ್ತಾರೆ

ನಮ್ಮ ಸಿಬ್ಬಂದಿಯೇ ಗಲ್ಲಿಗೇರಿಸುತ್ತಾರೆ

ಆದರೆ ಹೀಗೆ ಸ್ವಯಂಪ್ರೇರಿತರಾಗಿ ಮುಂದೆ ಬಂದಿರುವವರ ಸೇವೆಯನ್ನು ಬಳಸಿಕೊಳ್ಳುವುದಿಲ್ಲ ಎಂದಿರುವ ಅಧಿಕಾರಿಗಳು, ಅವಶ್ಯಕತೆ ಬಿದ್ದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿಯೇ ಗಲ್ಲಿಗೇರಿಸುವ ಕಾರ್ಯ ಮಾಡುತ್ತಾರೆ. ಹಿಂದೆಯೂ ಕೆಲವು ಪ್ರಕರಣಗಳಲ್ಲಿ ಹೀಗೆ ಮಾಡಲಾಗಿದೆ. ಅವಶ್ಯಕತೆ ಬಿದ್ದಲ್ಲಿ ಹೊರರಾಜ್ಯಗಳಿಂದ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುವುದು ಎಂದಿದ್ದಾರೆ.

'ಪಶುವೈದ್ಯೆ' ಕೊಂದ ಪಾಪಿಗಳಾಯ್ತು, 'ನಿರ್ಭಯಾ' ನೀಚರಿಗೆಂದು ಶಿಕ್ಷೆ?'ಪಶುವೈದ್ಯೆ' ಕೊಂದ ಪಾಪಿಗಳಾಯ್ತು, 'ನಿರ್ಭಯಾ' ನೀಚರಿಗೆಂದು ಶಿಕ್ಷೆ?

ಒಬ್ಬ ಮಾತ್ರ ಕ್ಷಮಾದಾನ ಅರ್ಜಿ ಹಾಕಿದ್ದಾನೆ

ಒಬ್ಬ ಮಾತ್ರ ಕ್ಷಮಾದಾನ ಅರ್ಜಿ ಹಾಕಿದ್ದಾನೆ

ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬ ಮಾತ್ರ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದ ಆತನಿಗೆ ಕ್ಷಮಾಧಾನ ನಿರಾಕರಿಸಲಾಗಿದೆ. ಇನ್ನುಳಿದ ಮೂವರು ಅರ್ಜಿ ಹಾಕಿಲ್ಲ. ಆದರೆ ಅವರಿಗೆ ತಿಹಾರ್ ಜೈಲು ಅಧಿಕಾರಿ ಜ್ಞಾಪನಾ ಪತ್ರ ರವಾನಿಸಿದ್ದು, ಕ್ಷಮಾ ಅರ್ಜಿ ಹಾಕುವ ಇಚ್ಛೆಯಿದ್ದರೆ ಹಾಕಬಹುದು ಇಲ್ಲವಾದರೆ ಗಲ್ಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾನೆ ಅಪರಾಧಿ

ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾನೆ ಅಪರಾಧಿ

ಆದರೆ ಈ ನಡುವೆ ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್‌ ಗೆ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಯಾರಾಗಿದ್ದು, ಅರ್ಜಿ ಇತ್ಯರ್ಥವಾಗುವ ವರೆಗೂ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲ. ಈಗಾಗಲೇ ಮೂವರು ಅಪರಾಧಿಗಳು ಸಲ್ಲಿಸಿದ್ದ ಗಲ್ಲು ಶಿಕ್ಷೆ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.

ನಿರ್ಭಯಾ ಪ್ರಕರಣ: ಆರೋಪಿಗಳ ಮರಣದಂಡನೆಗೆ ಇನ್ನೆಷ್ಟು ವಿಳಂಬ?ನಿರ್ಭಯಾ ಪ್ರಕರಣ: ಆರೋಪಿಗಳ ಮರಣದಂಡನೆಗೆ ಇನ್ನೆಷ್ಟು ವಿಳಂಬ?

2012 ಡಿಸೆಂಬರ್ 16 ರಂದು ನಡೆದಿತ್ತು ಘೋರ ಘಟನೆ

2012 ಡಿಸೆಂಬರ್ 16 ರಂದು ನಡೆದಿತ್ತು ಘೋರ ಘಟನೆ

2012 ರ ಡಿಸೆಂಬರ್ 16 ರಂದು ಆರು ಮಂದಿ ಕಾಮುಕರು ಚಲಿಸುವ ಬಸ್‌ನಲ್ಲಿ ನಿರ್ಭಯಾಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹಿಂಸಿಸಿ ಚಲಿಸುವ ಬಸ್‌ನಿಂದ ಕೆಳಕ್ಕೆ ದಬ್ಬಿದ್ದರು. ಜೀವನ್ಮರಣದ ನಡುವೆ ಹೋರಾಡಿ 16 ದಿನಗಳ ನಂತರ ಆಕೆ ಸಾವನ್ನಪ್ಪಿದ್ದರು.

ದೇಶದಾದ್ಯಂತ ಆಕ್ರೋಶ ಕೆರಳಿಸಿದ್ದ ಘಟನೆ

ದೇಶದಾದ್ಯಂತ ಆಕ್ರೋಶ ಕೆರಳಿಸಿದ್ದ ಘಟನೆ

ಈ ಪ್ರಕರಣ ದೇಶದಾದ್ಯಂತ ಆಕ್ರೋಶ ಕೆರಳಿಸಿತ್ತು. ಆರ್ವರು ಅಪರಾಧಿಗಳನ್ನು ಕೆಲವೇ ದಿನಗಳಲ್ಲಿ ಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅಪರಾಧಿಗಳೆಂದು ತೀರ್ಪು ಸಹ ಬಂದು ನೇಣು ಶಿಕ್ಷೆ ಸಹ ವಿಧಿಸಲಾಗಿದೆ. ಆದರೆ ಅವರಿಗಿನ್ನೂ ನೇಣು ಹಾಕಲಾಗಿಲ್ಲ.

English summary
NIrbhaya case convits and other 8 convicts to be hanged soon. hanging will be done in Tihar jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X