ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಕರೆತಂದ 8 ಚೀತಾ ಪೈಕಿ ಕಿಡ್ನಿ ಸಮಸ್ಯೆಗೆ ತುತ್ತಾದ ಹೆಣ್ಣು ಚೀತಾ, ವೈದ್ಯರ ತಂಡ ಹೇಳಿದ್ದೇನು?

ಸದ್ಯದ ಭಾರತದ ಮಟ್ಟಿಗೆ ಅಪರೂಪ ಹುಲಿ ಸಂತತಿಯಗಿದ್ದ ಚೀತಾಗಳನ್ನು ಕಳೆದ ವರ್ಷ ನಮೀಬಿಯಾದಿಂತ ಭಾರತದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಆ ಪೈಕಿ ಒಂದು ಹೆಣ್ಣು ಚೀತಾ (Cheetahs) ಆನಾರೋಗ್ಯಕ್ಕೆ ತುತ್ತಾಗಿದೆ. ತಜ್ಞ ವೈದ್ಯ ತಂಡದಿಂದ ಚೀತಾ ಆರೋಗ್ಯ ತಪಾಸಣೆ.

|
Google Oneindia Kannada News

ನವದೆಹಲಿ, ಜನವರಿ 26: ಸದ್ಯದ ಭಾರತದ ಮಟ್ಟಿಗೆ ಅಪರೂಪ ಹುಲಿ ಸಂತತಿಯಗಿದ್ದ ಚೀತಾಗಳನ್ನು ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ಕರೆತರಲಾಗಿತ್ತು. ಒಟ್ಟು ಹುಲಿಗಳ ಪೈಕಿ ಒಂದು ಹೆಣ್ಣು ಚೀತಾ (Cheetahs) ಆನಾರೋಗ್ಯಕ್ಕೆ ತುತ್ತಾಗಿದೆ.

ಭಾರತದಲ್ಲಿ ಏಷ್ಯಾಟಿಕ್ ಚಿರತೆಗಳ ಸಂತತಿ ಅಂತ್ಯಗೊಂಡ 70 ವರ್ಷಗಳ ನಂತರ ಭಾರತಕ್ಕೆ 08 ಚೀತಾಗಳನ್ನು ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸೆಪ್ಟಂಬರ್ 17ರಂದು ಇವುಗಳನ್ನು ನಮೀಬಿಯಾದಿಂದ ಕರೆತರಲಾಯಿತು. ನಂತರ ಅವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬೀಡಲಾಗಿತ್ತು.

Eight Cheetahs Brought To India, The Female Cheetah Suffered From Kidney Problems

ನಮೀಬಿಯಾದಿಂದ ಚೀತಾಗಳೇನೋ ಬಂದವು, ಮುಂದೆ ಅವು ದೇಶದಲ್ಲಿ ಉಳಿಯಬಲ್ಲವೇ?ನಮೀಬಿಯಾದಿಂದ ಚೀತಾಗಳೇನೋ ಬಂದವು, ಮುಂದೆ ಅವು ದೇಶದಲ್ಲಿ ಉಳಿಯಬಲ್ಲವೇ?

ಕರೆತಂದ ಎಂಟು ಚೀತಾಗಳ ಪೈಕಿ ಸಶಾ ಹೆಸರಿನ ಒಂದು ಚೀತಾ ಮೂತ್ರಪಿಂಡ (ಕಿಡ್ನಿ) ಸೋಂಕಿನಿಂದ ಬಳಲುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಂದಿನಂತೆ ಅಧಿಕಾರಿಗಳು ಸೋಮವಾರ ದೈನಂದಿನ ಮೇಲ್ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಶಾ ಹೆಸರಿನ ಹೆಣ್ಣು ಚೀತಾ ಆಯಾಸಗೊಂಡ ಸ್ಥಿತಿಯಲ್ಲಿರುವ ಕಂಡು ಬಂದಿದೆ. ತಡ ಮಾಡದ ಅಧಿಕಾರಿಗಳು ಕೂಡಲೇ ಟ್ರಾನ್ಸ್‌ಕ್ವಿಲೈಸ್ ಮಾಡಿ ಕ್ವಾರಂಟೈನ್‌ ಆವರಣಕ್ಕೆ ಬಿಟ್ಟಿದ್ದಾರೆ. ತಜ್ಞವೈದ್ಯರು ಆರೋಗ್ಯ ತಪಾಸಣೆ ಮಾಡಿದ್ದು, ಈ ವೇಳೆ ಸಶಾ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದೆ ಎಂಬುದು ಗೊತ್ತಾಗಿದೆ.

ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ತಜ್ಞ ವೈದ್ಯರು ಸಶಾ ಮೇಲೆ ಈಗ ನಿಗಾ ಇಟ್ಟಿದ್ದಾರೆ. ಈ ಒಂದು ಚೀತಾ ಬಿಟ್ಟು ಉಳಿದ ಏಳು ಚೀತಾಗಳು ಚೆನ್ನಾಗಿವೆ ಎಂದು ತಿಳಿದು ಬಂದಿದೆ. ಹೆಣ್ಣು ಚೀತಾಗೆ ಅನಾರೋಗ್ಯ ವಿಚಾರ ಗೊತ್ತಾಗುತ್ತಿದ್ದಂತೆ ಭೋಪಾಲ್‌ನ ವಾನ್ ವಿಹಾರ್‌ನಿಂದ ಡಾ.ಅತುಲ್ ಗುಪ್ತಾ ನೇತೃತ್ವದ ವೈದ್ಯರ ತಂಡವು ಉದ್ಯಾನಕ್ಕೆ ದೌಡಾಯಿಸಿತು. ಚಿಕಿತ್ಸೆಗಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞರನ್ನೂ ಸಂಪರ್ಕಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿಗಳು ಹೇಳಿದರು.

ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾ ದೇಶದಿಂದ ಭಾರತಕ್ಕೆ 2 ರಿಂದ 6 ವರ್ಷದೊಳಗಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ 2022 ರಲ್ಲಿ ಕರೆತರಲಾಗಿತ್ತು. ತಮ್ಮ ಜನ್ಮದಿನ ಅಂಗವಾಗಿ ಪ್ರಧಾನಮಂತ್ರಿಗಳು ಈ ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಿದ್ದರು.

Eight Cheetahs Brought To India, The Female Cheetah Suffered From Kidney Problems

ಚೀತಾ ಕರೆತರುವ ಪ್ರಕ್ರಿಯೇ ಮುಗಿದ ಬಳಿಕ ದೇಶಾದ್ಯಂತ ಈ ವಿಷಯ ಭಾರಿ ಸದ್ದು ಮಾಡಿತ್ತು. ಇತ್ತ ತಜ್ಞರು ಈ ಚೀತಾಗಳು ನೈಸರ್ಗಿಕ ಹುಲ್ಲುಗಾವಲು ಪ್ರದೇಶಗಳಲ್ಲಿ ಆರೋಗ್ಯಯುತವಾಗಿ ವಾಸಿಬಲ್ಲವು. ಆದರೆ ಭಾರತದಂತಹ ಕಾಡುಗಳು ಹೆಚ್ಚಿರುವ ಪ್ರದೇಶದಲ್ಲಿ ಮುಕ್ತವಾಗಿ ತಿರುಗಾಡಲು ಸಾಧ್ಯವಾಗದಿರಬಹುದು. ಜೊತೆಗೆ ಅವುಗಳು ಭೇಟಿಯಾಡಲು ಹುಡುಕುವ ಪ್ರಾಣಿ ಪ್ರಭೇದವು ಭಾರತದಲ್ಲಿ ಇಲ್ಲ ಎಂದಿದ್ದರು. ಹೀಗಾಗಿ ಚೀತಾಗಳ ಅಳಿವು ಉಳಿವಿನ ಬಗ್ಗೆ ಚರ್ಚೆ ಯಾಗಿತ್ತು. ಈ ಮಾತು ಸತ್ಯವೆಂಬಂತೆ ಸದ್ಯ ಒಂದು ಹೆಣ್ಣು ಚೀತಾದ ಆರೋಗ್ಯ ಹದಗೆಟ್ಟಿದೆ. ಇದಕ್ಕೆ ಕಾರಣ ಏನು ಎಂದು ಇನ್ನಷ್ಟೇ ವೈದ್ಯರ ತಂಡ ಬಹಿರಂಗಪಡಿಸಬೇಕಿದೆ.

ದೇಶಕ್ಕೆ ಬಂದ ಚೀತಾಗಳ ವಿಶೇಷತೆ ಏನು?
ಮೈಮೇಲೆಲ್ಲ ಕಪ್ಪು ಮಚ್ಚೆ ಗುರುತಿನ ಓಈ ಚೀತಾಗಳ ಸಂತತಿ ಭಾರತದಲ್ಲಿ 70 ವರ್ಷದ ಹಿಂದೆಯೇ ನಾಶವಾಗಿದೆ. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು ಎಂದು ವರದಿ ತಿಳಿಸಿದೆ. 1952ರಲ್ಲಿ ಈ ಚೀತಾ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಿಸಲಗಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಲಿಲ್ಲ. ಸದ್ಯ ನಿಮೀಬಿಯಾದಿಂದ ಕರೆತಂದು ಬೀಡಲಾದ ಕುನೋ ಉದ್ಯಾನವನ ಅವುಗಳಿ ಗೆ ಜೀವಿಸಲು ಅನುಕೂಲಕರವಾಗಿದೆ. ಹೀಗಾಗಿಯೇ ಉದ್ಯಾನದ ಸುತ್ತಮುತ್ತಲ 24 ಗ್ರಾಮದ ಜನರನ್ನು ಖಾಲಿ ಮಾಡಿಸಲಾಗಿದೆ. ಎಂಟು ಚೀತಾ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿತ್ತು.

English summary
8 cheetahs brought to India from Namibia, now the female cheetah suffered from kidney problems,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X