• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಬ್ಲೂ ಫ್ಲ್ಯಾಗ್" ಮಾನ್ಯತೆಗೆ ಶಿಫಾರಸ್ಸುಗೊಂಡ ಭಾರತದ 8 ಬೀಚ್ ಗಳು ಯಾವುವು?

By Lekhaka
|

ನವದೆಹಲಿ, ಸೆಪ್ಟೆಂಬರ್ 19: ಅಂತರರಾಷ್ಟ್ರೀಯ ಕಡಲ ಸ್ವಚ್ಛತಾ ಅಭಿಯಾನದ ದಿನವಾದ ಸೆಪ್ಟೆಂಬರ್ 18ರಂದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಇದೇ ಮೊದಲ ಬಾರಿಗೆ ಭಾರತದ ಎಂಟು ಕಡಲ ತೀರಗಳನ್ನು "ಬ್ಲೂ ಫ್ಲ್ಯಾಗ್" ಅಂತರರಾಷ್ಟ್ರೀಯ ಮಾನ್ಯತೆಗೆ ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದೆ.

ಗುಜರಾತ್ ನ ಶಿವರಾಜಪುರ, ದಿಯು ಮತ್ತು ದಾಮನ್ ನ ಘೋಗ್ಲಾ, ಕೇರಳದ ಕಪ್ಪದ್, ಕರ್ನಾಟಕದ ಪಡುಬಿದ್ರಿ ಹಾಗೂ ಹೊನ್ನಾವರದ ಇಕೋ ಬೀಚ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್ ನ ರಾಧಾನಗರ್ ಬೀಚ್ ಗಳು ಈ ಅಂತರ ರಾಷ್ಟ್ರೀಯ ಮಾನ್ಯತೆ ಪಡೆಯಲು ಶಿಫಾರಸ್ಸುಗೊಂಡಿವೆ.

ಪಡುಬಿದ್ರೆ ಬೀಚ್ ಗೆ ಶೀಘ್ರದಲ್ಲೇ ಅಂತರ ರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ: ಡಿಸಿ

ಪರಿಸರ ತಜ್ಞರು, ವಿಜ್ಞಾನಿಗಳನ್ನೊಳಗೊಂಡ ರಾಷ್ಟ್ರೀಯ ಸ್ವತಂತ್ರ ತಂಡವು ಶಿಫಾರಸ್ಸುಗೊಂಡಿರುವ ಈ ಕಡಲ ತೀರಗಳನ್ನು ಪರಿಶೀಲನೆ ನಡೆಸಲಿದೆ. ದೇಶದ ಎಂಟು ಕಡಲ ತಡಿಗಳು ಮಾನ್ಯತೆಗೆ ಶಿಫಾರಸ್ಸುಗೊಂಡಿದ್ದು, ಇಡೀ ದೇಶದಲ್ಲಿನ ಕಡಲ ತೀರಗಳನ್ನು ಸ್ವಚ್ಛವಾಗಿಡಲು ದೇಶವು ಬದ್ಧವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಶಿಫಾರಸು ಪ್ರಕ್ರಿಯೆಯ ಭಾಗವಾಗಿ ಸೆ.18ರಂದು ಈ ಎಂಟೂ ಕಡಲ ತೀರಗಳಲ್ಲಿ ಏಕಕಾಲಕ್ಕೆ "ನಾನು ಕಡಲ ತೀರವನ್ನು ರಕ್ಷಿಸುತ್ತೇನೆ" (i am saving my beach) ಎಂದುಬ ಧ್ವಜಾರೋಹಣ ನೆರವೇರಿಸಲಾಯಿತು. ಈ ಅಭಿಯಾನವು 1986ರಿಂದಲೂ ಸುಮಾರು 100 ದೇಶಗಳಲ್ಲಿ ನಡೆಯುತ್ತಿದೆ.

ಬ್ಲೂ ಫ್ಲ್ಯಾಗ್ ಸರ್ಟಿಫಿಕೇಷನ್ ಎಂದರೇನು?

ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಬೀಚ್ ಗಳನ್ನು ವಿಶ್ವದ ಅತಿ ಸ್ವಚ್ಛ ಕಡಲ ತಡಿಗಳೆಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ, ಡೆನ್ಮಾರ್ಕ್ ನಲ್ಲಿರುವ "ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್ " ಸಂಸ್ಥೆಯು ಪರಿಸರ ಶಿಕ್ಷಣ ಮತ್ತು ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ನಾಲ್ಕು ಭಾಗಗಳಲ್ಲಿ 33 ಮಾನದಂಡಗಳನ್ನಿಟ್ಟುಕೊಂಡು ಈ ಮಾನ್ಯತೆಯನ್ನು ನೀಡುತ್ತದೆ.

"ಬ್ಲೂ ಫ್ಲ್ಯಾಗ್" ಬೀಚ್ ಪರಿಸರ ಪ್ರವಾಸೋದ್ಯಮದ ಮಾದರಿಯಾಗಿದ್ದು, ಪ್ರವಾಸಿಗರಿಗೆ, ಕಡಲ ಪ್ರೇಮಿಗಳಿಗೆ ಪರಿಶುದ್ಧ ಸ್ನಾನದ ನೀರು, ಸೌಲಭ್ಯಗಳು, ಸುರಕ್ಷತೆ, ಆರೋಗ್ಯಕರ ಪರಿಸರ ನೀಡುವ ತಾಣಗಳೆಂದು ಗುರುತಿಸಿಕೊಳ್ಳಲಿವೆ.

English summary
Eight beaches around india have been recommended for the international eco lable blue flag certification this time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X