• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈದ್ 2018: ಕೇರಳದಲ್ಲಿ ಶುಕ್ರವಾರ, ಇತರೆಡೆ ಶನಿವಾರ ಆಚರಣೆ

By Mahesh
|

ನವದೆಹಲಿ, ಜೂನ್ 14: ಮುಸ್ಲಿಮರ ಪವಿತ್ರ ಹಬ್ಬ ಈದ್- ಉಲ್ ಫಿತ್ರ್ ವನ್ನು ಕೇರಳದಲ್ಲಿ ಶುಕ್ರವಾರದಂದೇ ಹಬ್ಬ ಆಚರಿಸಿದರೆ, ಭಾರತದ ಉಳಿದೆಡೆ ಶನಿವಾರದಂದು ಹಬ್ಬ ಆಚರಿಸಲಾಗುವುದು ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಸಯದ್ ಅಹ್ಮದ್ ಬುಖಾರಿ ಅವರು ಹೇಳಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರಂನಿಂದ ಸುಮಾರು 370 ಕಿ.ಮೀದಲ್ಲಿರುವ ಕೋಯಿಕ್ಕಾಡ್ ಜಿಲ್ಲೆಯಲ್ಲಿ ಚಂದ್ರ ದರ್ಶನವಾಗಿದ್ದರಿಂದ ಕೇರಳದಲ್ಲಿ ನಾಳೆ ದಿನ ಹಬ್ಬ ಆಚರಿಸಲಾಗುತ್ತದೆ.

ಚಂದ್ರ ದರ್ಶನದ ಮಾಹಿತಿ ಸಿಕ್ಕ ಬಳಿಕ ಜಾಮಾ ಮಸೀದಿಯ ಶಾಹಿ ಇಮಾಮ್ ಅವರು ಸಭೆ ನಡೆಸಿ, ಹಬ್ಬ ಆಚರಣೆ ಕುರಿತಂತೆ, ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ರಮ್ಜಾನ್ ತಿಂಗಳ ಅಂತ್ಯದಲ್ಲಿ ಈದ್ -ಉಲ್ ಫಿತ್ರ್ ಆಚರಿಸಲಾಗುತ್ತದೆ. ಒಂದು ತಿಂಗಳ ಅತ್ಯಂತ ಶ್ರದ್ಧೆಯ ಉಪವಾಸ ವ್ರತ (ರೋಜಾ) ತೆರೆಬಿದ್ದಿದೆ. ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತವಾಗುವ ಮೊದಲು ಹನಿ ನೀರು ಕೂಡ ಹೊಟ್ಟೆಗಿಳಿಸದಂತಹ ಕಠಿಣ ವ್ರತ ಪಾಲನೆ ಸುಲಭವಲ್ಲ. ಒಂದು ತಿಂಗಳ ರೋಜಾ ನಂತರ ವಿಶ್ವದೆಲ್ಲೆಡೆ ಈದ್ ಉಲ್ ಫಿತ್ರ್ ಆಚರಣೆ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eid-ul-Fitr will be celebrated across the country except Kerala on Saturday as the moon was not sighted here today, Jama Masjid Shahi Imam Syed Ahmed Bukhari said. The festival will be celebrated tomorrow in the southern state as the moon was sighted in Kozhikode district, around 370 kms from the state capital Thiruvananthapuram.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more