ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್ ಪಟೇಲ್ ಗೆ ಮಧ್ಯ ಪ್ರದೇಶದಲ್ಲಿ ಮೊಟ್ಟೆ, ಕಲ್ಲೇಟಿನ ಸ್ವಾಗತ

By Sachhidananda Acharya
|
Google Oneindia Kannada News

ಭುವನೇಶ್ವರ್, ಜೂನ್ 7: ಗುಜರಾತ್ ಗಡಿ ದಾಟಿ ಬೆಳೆದಿರುವ ಪಾಟೀದಾರ್ ಮೀಸಲಾತಿ ಹೋರಾಟದ ಹೀರೋ ಹಾರ್ದಿಕ್ ಪಟೇಲ್ ಕಾರಿನ ಮೇಲೆ ಇಂದು ಮಧ್ಯ ಪ್ರದೇಶದಲ್ಲಿ ಮೊಟ್ಟೆ, ಕಲ್ಲು ಮತ್ತು ಚಪ್ಪಲಿಗಳನ್ನು ಎಸೆಯಲಾಗಿದೆ.

ತಮ್ಮ ನೇತೃತ್ವದ 'ಕಿಸಾನ್ ಕ್ರಾಂತಿ ಸೇನೆ'ಯ ಸಭೆ ನಡೆಸಲು ಜಬಲ್ಪುರಕ್ಕೆ ಆಗಮಿಸಿದ್ದ ವೇಳೆ ಅವರ ಕಾರಿನ ಮೇಲೆ ಅಪರಿಚಿತರು ಈ ಕೃತ್ಯ ನಡೆಸಿದ್ದಾರೆ. ಅಂದಹಾಗೆ ಹಾರ್ದಿಕ್ ಪಟೇಲ್ ಅವರ ಪಕ್ಷ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಮಧ್ಯ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ಬಿಜೆಪಿ ವಿರುದ್ಧ ಹಾರ್ದಿಕ್ ಪಟೇಲ್ 'ಶಕುನಿ'ಯಾಟಕ್ಕೆ ಮೊದಲ ಹಿನ್ನಡೆ!ಬಿಜೆಪಿ ವಿರುದ್ಧ ಹಾರ್ದಿಕ್ ಪಟೇಲ್ 'ಶಕುನಿ'ಯಾಟಕ್ಕೆ ಮೊದಲ ಹಿನ್ನಡೆ!

"ನಾವು ಜಾಥಾ ಒಂದರಲ್ಲಿ ಭಾಗವಹಿಸಲು ಪನಗರ್ ಗೆ ತೆರಳುತ್ತಿದ್ದ ವೇಳೆ ಕೆಲವು ಅಪರಿಚಿತರು ಮೊಟ್ಟೆ, ಚಪ್ಪಲಿಗಳನ್ನು ಹಾರ್ದಿಕ್ ಕಾರಿನ ಮೇಲೆ ಎಸೆದರು. ರಾನಿತಾಲ್ ಪ್ರದೇಶದಲ್ಲಿರುವ ಬಿಜೆಪಿ ಕಚೇರಿಯ ಸಮೀಪವೇ ಈ ಘಟನೆ ನಡೆಯಿತು," ಎಂದು ಕಾಂಗ್ರೆಸ್ ನಾಯಕ ಸಂಜಯ್ ಯಾದವ್ ಹೇಳಿದ್ದಾರೆ.

Eggs thrown at Hardik Patels car in Madhya Pradesh

ಇವರಲ್ಲಿ ಕೆಲವರು ಕೈಯಲ್ಲಿ ಬಂದೂಕುಗಳನ್ನೂ ಹಿಡಿದಿದ್ದರು ಎಂದು ಯಾದವ್ ಹೇಳಿದ್ದಾರೆ. ಇದಲ್ಲದೆ ಅಧರ್ತಲ್ ಪ್ರದೇಶದಲ್ಲಿ ಕಾರಿನ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ತೂರಲಾಯಿತು ಎಂದು ಅವರು ತಿಳಿಸಿದ್ದಾರೆ.

ಈ ದಾಳಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬೆಂಬಲಿಗರೇ ಕಾರಣ ಎಂದು ಹಾರ್ದಿಕ್ ಪಟೇಲ್ ದೂರಿದ್ದಾರೆ.

"ಪನಗರ್ ಗೆ ತೆರಳುತ್ತಿದ್ದಾಗ ಶಿವರಾಜ್ ಮಾಮಾ ಅವರ ಬೆಂಬಲಿಗರು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ನಮ್ಮನ್ನು ಮೊಟ್ಟೆಗಳಿಂದ ಸ್ವಾಗತಿಸಿದರು. ಮತ್ತು ನಾನದರಿಂದ ತಪ್ಪಿಸಿಕೊಂಡೆ. ಮಾಮಾ ಶಿವರಾಜ್ ಅವರೇ, ಮೊಟ್ಟೆಯಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ. ಬಂದೂಕಿನಿಂದ ಗುಂಡುಗಳನ್ನು ಸಿಡಿಸಿ. ನನ್ನಲ್ಲಿ ರಕ್ತ ಇರುವಲ್ಲಿವರೆಗೆ ನನ್ನ ಹೋರಾಟ ಮುಂದುವರಿಯುತ್ತದೆ," ಎಂದು ಹಾರ್ದಿಕ್ ಪಟೇಲ್ ಟ್ಟೀಟ್ ಮಾಡಿದ್ದಾರೆ.

ಘಟನೆ ಸಂಬಂಧ 6-7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

English summary
Unidentified persons allegedly threw eggs and slippers at the car of Patidar quota agitation leader Hardik Patel here today. Patel was here to take part in a meeting of Kisan Kranti Sena, which he heads, in the run-up to the Assembly elections in Madhya Pradesh which are due by year-end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X