ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: 4 ದಶಕಗಳ ಹಿಂದೆನೇ ನುಡಿದಿದ್ದ ಕರಾರುವಾಕ್ ಭವಿಷ್ಯ

|
Google Oneindia Kannada News

ಟ್ರಾಫಿಕ್ ಸಿಗ್ನಲ್ ಇರಲಿ, ಅಂಗಡಿಯಲ್ಲಿ ಇರಲಿ, ಎಲ್ಲೆಲ್ಲೂ ಕೊರೊನಾ ವೈರಸ್ ನದ್ದೇ ಮಾತು. ಹಾಗಂತೆ, ಹೀಗಂತೆ ಎನ್ನುವ ಅಂತೆಕಂತೆ ಸುದ್ದಿಯದ್ದೇ ಎಲ್ಲೆಲ್ಲೂ ಕಾರುಬಾರು.

ಮೊದಲೇ ಭಯಭೀತರಾಗಿರುವ ಜನರಿಗೆ, ಕರ್ನಾಟಕ ಸರಕಾರ ಹೊರಡಿಸಿದ ಒಂದು ವಾರದ ಸಾರ್ವಜನಿಕ ನಿರ್ಬಂಧ ಆರ್ಡರ್ ಇನ್ನಷ್ಟು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ಇದರ ಜೊತೆಗೆ ದೆಹಲಿಯಲ್ಲಿ 69 ವರ್ಷದ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಶುಕ್ರವಾರ (ಮಾ 13) ಸಾವನ್ನಪ್ಪಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾ ಇಬ್ಬರನ್ನು ಬಲಿ ಪಡೆದುಕೊಂಡಂತಾಗಿದೆ.

ಒಂದೇ ದಿನದಲ್ಲಿ ಕೊರೊನಾಗೆ 250 ಮಂದಿ ಬಲಿ: ತತ್ತರಿಸಿದ ಇಟಲಿ!ಒಂದೇ ದಿನದಲ್ಲಿ ಕೊರೊನಾಗೆ 250 ಮಂದಿ ಬಲಿ: ತತ್ತರಿಸಿದ ಇಟಲಿ!

ವಿಶ್ವದೆಲ್ಲಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ನಾಲ್ಕು ದಶಕಗಳ ಹಿಂದೆನೇ ಒಬ್ಬರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದರು ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಯಡಿಯೂರಪ್ಪ ಕಾರ್ಯಕ್ರಮ ರದ್ದು

ಯಡಿಯೂರಪ್ಪ ಕಾರ್ಯಕ್ರಮ ರದ್ದು

ಕೊರೊನಾ ವೈರಸ್‌ಗೆ ಮುಂಜಾಗ್ರತೆ ವಹಿಸಲು, ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡುವ ಆದೇಶವನ್ನು ಯಡಿಯೂರಪ್ಪ ಸೂಚಿಸಿದ್ದರು, ಅದರಂತೆಯೆ ತಮ್ಮ ರಾಜ್ಯ ಪ್ರವಾಸವನ್ನೂ ಸಿಎಂ ರದ್ದು ಮಾಡಿದ್ದಾರೆ. ಯಡಿಯೂರಪ್ಪ ಅವರ ಜೊತೆಗೆ ಅವರ ಸಂಪುಟದ ಇತರ ಸಹೋದ್ಯೋಗಿಗಳು ಕೂಡ ತಮ್ಮ ತಮ್ಮ ಜಿಲ್ಲೆಗಳ ಪ್ರವಾಸವನ್ನು ರದ್ದು ಮಾಡಿದ್ದಾರೆ.

ದಿ ಎಂಡ್ ಆಫ್ ಡೇಸ್

ದಿ ಎಂಡ್ ಆಫ್ ಡೇಸ್

1981ರಲ್ಲಿ ಬಿಡುಗಡೆಯಾಗಿದ್ದ 'ದಿ ಎಂಡ್ ಆಫ್ ಡೇಸ್' ಎನ್ನುವ ಪುಸ್ತಕದಲ್ಲಿ ಕೊರೊನಾ ವೈರಸ್ ಹೆಸರನ್ನು ಉಲ್ಲೇಖಿಸದೇ, ಆದರೆ 2020ರಲ್ಲಿ ವಿಶ್ವವೇ ತಲ್ಲಣಗೊಳ್ಳುವ ಕಾಯಿಲೆ ಎದುರಾಗಲಿದೆ ಎಂದು ಆ ಪುಸ್ತಕದಲ್ಲಿ ಬರೆಯಲಾಗಿದೆ. ಆ ಪುಸ್ತಕದಲ್ಲಿ ಬರೆಯಲಾಗಿದ್ದ ವಾಕ್ಯಗಳು ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಸಿಲ್ವಿಯಾ ಬ್ರೌನಿ ಬರೆದಿರುವ ಪುಸ್ತಕ ಇದಾಗಿದೆ.

ಕೊರೊನಾ ತಗುಲಿರುವ ಶಂಕೆ: ಬೆಂಗಳೂರಿನ ಇನ್ಫೋಸಿಸ್ ಕಚೇರಿ ಸ್ಥಳಾಂತರಕೊರೊನಾ ತಗುಲಿರುವ ಶಂಕೆ: ಬೆಂಗಳೂರಿನ ಇನ್ಫೋಸಿಸ್ ಕಚೇರಿ ಸ್ಥಳಾಂತರ

ನ್ಯುಮೋನಿಯಾ ತರಹದ ಕಾಯಿಲೆ

ನ್ಯುಮೋನಿಯಾ ತರಹದ ಕಾಯಿಲೆ

ಸುಮಾರು 2020ರಲ್ಲಿ ತೀವ್ರವಾದ ನ್ಯುಮೋನಿಯಾ ತರಹದ ಕಾಯಿಲೆ ಪ್ರಪಂಚದಾದ್ಯಂತ ಹರಡುತ್ತದೆ, ಶ್ವಾಸಕೋಶ ಮತ್ತು ಶ್ವಾಸನಾಳದ ಕೊಳವೆಗಳ ಮೇಲೆ ವೈರಸ್ ದಾಳಿ ಮಾಡುತ್ತದೆ. ಯಾವುದೇ ಲಸಿಕೆ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಈ ವೈರಸ್ ಇದ್ದಕ್ಕಿದ್ದಂತೆ ದೂರವಾಗುತ್ತದೆ. 10 ವರ್ಷಗಳ ನಂತರ ಮತ್ತೆ ಈ ವೈರಸ್ ದಾಳಿ ಮಾಡುತ್ತದೆ, ನಂತರ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ" ಇದು ಆ ಪುಸ್ತಕದಲ್ಲಿ ಬರೆದಿರುವ ಅಂಶ.

ಇಟಲಿಯಲ್ಲಿ ನಿನ್ನೆ (ಶುಕ್ರವಾರ) ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ

ಇಟಲಿಯಲ್ಲಿ ನಿನ್ನೆ (ಶುಕ್ರವಾರ) ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ನಿನ್ನೆ (ಶುಕ್ರವಾರ) ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ. ಒಂದೇ ದಿನ ಇಟಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17% ರಷ್ಟು ಏರಿಕೆಯಾಗಿದೆ. 15,113 ಕ್ಕೆ ಇದ್ದ ಕೊರೊನಾ ಪೀಡಿತರ ಸಂಖ್ಯೆ ಇಂದು 17,660ಕ್ಕೆ ತಲುಪಿದೆ.

English summary
Eerie prophecy on coronavirus: Here is what Sylvia Browne predicted for 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X