ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್, ಜೆಇಇ ಪರೀಕ್ಷೆಗಳಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರದ ಮಹತ್ವದ ಚಿಂತನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ವೈದ್ಯಕೀಯ ಕೋರ್ಟ್‌ಗಳ ಪ್ರವೇಶಕ್ಕೆ ನಡೆಯುವ ನೀಟ್ 2021ರ ಪರೀಕ್ಷೆಯನ್ನು ರದ್ದುಗೊಳಿಸುವ ಯಾವುದೇ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಜತೆಗೆ ಜೆಇಇ ಮುಖ್ಯ ಪರೀಕ್ಷೆಯನ್ನು ಹಲವು ಅವಧಿಗಳಲ್ಲಿ ನಡೆಸಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ತಿಳಿಸಿದರು.

ನೇರ ಪ್ರಸಾರದಲ್ಲಿ ಮಾತನಾಡಿದ ಅವರು, ಸಿಬಿಎಸ್‌ಸಿ ಮಂಡಳಿ ಪರೀಕ್ಷೆ 2021, ಜೆಇಇ ಮೇನ್ 2021 ಮತ್ತು ನೀಟ್ 2021 ಪರೀಕ್ಷೆಗಳ ಕುರಿತಾದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಪರೀಕ್ಷೆಗಳ ಕುರಿತು ಸಲಹೆಗಳನ್ನು ನೀಡುವಂತೆ ಆಹ್ವಾನಿಸಿದ ಅವರು, ಅವರ ಎಲ್ಲ ಕಳವಳಗಳನ್ನು ಪರಿಶೀಲಿಸುವ ಭರವಸೆ ನೀಡಿದರು.

ಜೆಇಇ ಪರೀಕ್ಷೆಯಲ್ಲಿ ಶೇ.99.80ರಷ್ಟು ಅಂಕ ಪಡೆದವರು ಪೊಲೀಸ್ ವಶಕ್ಕೆಜೆಇಇ ಪರೀಕ್ಷೆಯಲ್ಲಿ ಶೇ.99.80ರಷ್ಟು ಅಂಕ ಪಡೆದವರು ಪೊಲೀಸ್ ವಶಕ್ಕೆ

ಕೊರೊನಾ ವೈರಸ್ ಸೋಂಕಿನ ಭೀತಿ ನಡುವೆ ಯಶಸ್ವಿಯಾಗಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಶ್ಲಾಘಿಸಿದ ಪೋಖ್ರಿಯಾಲ್, ಇದು ರಾಜ್ಯ ಚುನಾವಣೆಗಳನ್ನು ಆಯೋಜಿಸಲು ದಿನಾಂಕ ಪ್ರಕಟಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಕೂಡ ನೆರವಾಗಿತ್ತು ಎಂದರು. ಮುಂದೆ ಓದಿ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಮೂರು ನಾಲ್ಕು ಬಾರಿ ಪರೀಕ್ಷೆ

ಮೂರು ನಾಲ್ಕು ಬಾರಿ ಪರೀಕ್ಷೆ

ಜೆಇಇ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನಾವು ಜೆಇಇ ಪರೀಕ್ಷೆಗಳನ್ನು ಎರಡಕ್ಕೂ ಹೆಚ್ಚು ಬಾರಿ ನಡೆಸುವ ಕಾರ್ಯಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಜೆಇಇಗೆ ಮೂರು ಅಥವಾ ನಾಲ್ಕು ಬಾರಿ ಕುಳಿತುಕೊಳ್ಳುವ ಅವಕಾಶಗಳು ಮುಂದೆ ಸಿಗಬಹುದು' ಎಂದು ತಿಳಿಸಿದರು.

ಪ್ರಾಕ್ಟಿಕಲ್ ಪರೀಕ್ಷೆ ಬಗ್ಗೆ ಆತಂಕ

ಪ್ರಾಕ್ಟಿಕಲ್ ಪರೀಕ್ಷೆ ಬಗ್ಗೆ ಆತಂಕ

ಪ್ರಾಕ್ಟಿಕಲ್ ಪರೀಕ್ಷೆಗಳ ಬಗ್ಗೆ ಅನೇಕ ಪ್ರಶ್ನೆಗಳು ಕೇಳಿಬಂದವು. ಶಾಲೆಗಳು ಇನ್ನೂ ತೆರೆದಿಲ್ಲ. ಇದರಿಂದ ಪ್ರಾಕ್ಟಿಕಲ್ ವಿದ್ಯಾರ್ಥಿಗಳು ತಮಗೆ ಪ್ರಾಕ್ಟಿಕಲ್ ಪರೀಕ್ಷೆಗಳು ಇರುತ್ತವೆಯೇ ಎಂಬ ಚಿಂತೆಗೆ ಒಳಗಾಗಿದ್ದಾರೆ ಎಂದು ಅನೇಕರು ಹೇಳಿದರು.

ರಾಜ್ಯಕ್ಕೆ ಫಸ್ಟ್ ಬಂದವನ ಕಥೆ: ಜೆಇಇ ಬರೆದಿದ್ಯಾರೋ, ಪಾಸ್ ಆಗಿದ್ಯಾರೋ?ರಾಜ್ಯಕ್ಕೆ ಫಸ್ಟ್ ಬಂದವನ ಕಥೆ: ಜೆಇಇ ಬರೆದಿದ್ಯಾರೋ, ಪಾಸ್ ಆಗಿದ್ಯಾರೋ?

ದಿನಾಂಕ ಪ್ರಕಟಿಸಿ

ದಿನಾಂಕ ಪ್ರಕಟಿಸಿ

2021ರ ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳ ದಿನಾಂಕ ಪ್ರಕಟವಾಗಿಲ್ಲ. ಹೀಗಾಗಿ ಪಠ್ಯ ಮತ್ತು ಪರೀಕ್ಷೆಗೆ ಸಿದ್ಧವಾಗಲು ವಿದ್ಯಾರ್ಥಿಗಳಿಗೆ ಸಿಗುವ ಸಮಯದ ಬಗ್ಗೆ ಪ್ರಶ್ನಿಸಲಾಯಿತು. ಸಿಬಿಎಸ್‌ಇ ಮಂಡಳಿ ಪರೀಕ್ಷೆಯ ಸಿಲಬಸ್ ಕಡಿತಕ್ಕೆ ವಿದ್ಯಾರ್ಥಿಗಳು ಕೋರಿದರು.

ಶಿಕ್ಷಕರು ಮಾಹಿತಿ ನೀಡಲಿ

ಶಿಕ್ಷಕರು ಮಾಹಿತಿ ನೀಡಲಿ

ಈಗಾಗಲೇ ಸಿಲಬಸ್ ಅನ್ನು ಶೇ 30ರಷ್ಟು ತಗ್ಗಿಸಲಾಗಿದೆ. ಯಾವ ಅಧ್ಯಾಯಗಳನ್ನು ತೆಗೆಯಲಾಗಿದೆ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ನೀಡಬೇಕು. ಪರೀಕ್ಷೆಯ ದಿನಾಂಕದ ಬಗ್ಗೆ ಪರಿಸ್ಥಿತಿಗಳನ್ನು ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಚಿವರು ಸೂಚಿಸಿದರು.

2021ರ ಜನವರಿಯಲ್ಲಿ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ2021ರ ಜನವರಿಯಲ್ಲಿ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ

English summary
Education minister Ramesh Pokhriyal Nishank said ther is no plan to cancel the NEET 2021 and considering to hold multiple sessions of JEE Main.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X