ವಿಚಾರಣೆಗೆ ಹಾಜರಾಗಲು ವಿಜಯ್ ಮಲ್ಯರಿಗೆ ಕೊನೆ ಚಾನ್ಸ್

Subscribe to Oneindia Kannada

ಮುಂಬೈ, ಏಪ್ರಿಲ್, 03: ಸಾಕಷ್ಟು ಸಾಲ ಮಾಡಿಕೊಂಡು ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯಗೆ ಜಾರಿ ನಿರ್ದೇಶನಾಲಯ(ಇಡಿ) ಮತ್ತೊಂದು ನೋಟಿಸ್ ನೀಡಿದೆ. ಎಲ್ಲಿದ್ದರೂ ಏಪ್ರಿಲ್ 9ಕ್ಕೆ ಖುದ್ದು ಹಾಜರಾಗಬೇಕು ಎಂದು ಇಡಿ ಮಲ್ಯ ಅವರಿಗೆ ತಿಳಿಸಿದೆ.

ಐಡಿಬಿಐ ಬ್ಯಾಂಕಿನಿಂದ 900 ಕೋಟಿ ರೂ. ಸಾಲ ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಮಲ್ಯ ವಿರುದ್ಧ ಹೊರಡಿಸುತ್ತಿರುವ ಮೂರನೇ ಸಮನ್ಸ್ ಇದಾಗಿದೆ. ಇದೇ ಕೊನೆಯ ಸಮನ್ಸ್ ಕೂಡ ಆಗುವ ಸಾಧ್ಯತೆ ಇದೆ. [ಸಾಲ ಮರುಪಾವತಿಗೆ ವಿಜಯ್ ಮಲ್ಯ ಬಗ್ಗಿದ್ದು ಹೇಗೆ?]

vijay mallya

ಹಾಜರಾಗದಿದ್ದರೆ ಏನಾಗುತ್ತದೆ?
ಒಂದು ವೇಳೆ ಏಪ್ರಿಲ್ 9ರಂದು ಮಲ್ಯ ವಿಚಾರಣೆಗೆ ಬರದಿದ್ದರೆ ಅವರ ಪಾಸ್‌ಪೋರ್ಟ್‌ ರದ್ದುಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ. ಜತೆಗೆ ದೇಶಕ್ಕೆ ಆಗಮಿಸಿದ ತಕ್ಷಣವೇ ಅವರನ್ನು ಬಂಧಿಸಿದರೂ ಆಶ್ಚರ್ಯವಿಲ್ಲ.

ಮಾರ್ಚ್18ರಂದು ವಿಚಾರಣೆಗೆ ಹಾಜರಾಗುವಂತೆ ಮೊದಲು ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿತ್ತು. ಮಲ್ಯ ಅವರು ಕಾಲಾವಕಾಶ ಕೇಳಿದ್ದರು. ಅದಕ್ಕೆ ಒಪ್ಪಿಗೆ ನೀಡಿದ್ದ ನ್ಯಾಯಾಲಯ ಏಪ್ರಿಲ್ 2ರ ಶನಿವಾರ ವಿಚಾರಣೆಗೆ ಹಾಜರಾಗಲು ಮತ್ತೂಂದು ಸಮನ್ಸ್ ಕೊಟ್ಟಿತ್ತು. ಆದರೆ ಶನಿವಾರವೂ ವಿಚಾರಣೆಗೆ ಗೈರು ಹಾಜರಾದ ಮಲ್ಯ, ಮೇ ವರೆಗೆ ಕಾಲಾವಕಾಶ ಕೇಳಿದ್ದರು.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಇನ್ನೊಂದೆಡೆ ಮಲ್ಯ 4 ಸಾವಿರ ಕೋಟಿ ರೂ. ಸಾಲವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ತೀರಿಸುತ್ತೇನೆ ಎಂದು ಹೇಳಿಕೆ ನೀಡಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಮಲ್ಯ 17 ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Enforcement Directorate (ED) today issued the third and possibly the last summons to liquor baron Vijay Mallya to present himself before its investigators on April 9 in Mumbai in connection with money laundering probe in the over Rs 900 crore IDBI loan fraud case. Mallya had yesterday sought time till May to depose before the agency, expressing his inability to keep the scheduled date for today at the ED's zonal office in Mumbai.ED issues fresh summons to Vijay Mallya, to appear before April 9
Please Wait while comments are loading...