ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ: ಕಮಲ್ ನಾಥ್ ಮಕ್ಕಳು, ಸೋದರಳಿಯ ಕೂಡ ಭಾಗಿ

|
Google Oneindia Kannada News

ನವದೆಹಲಿ, ನವೆಂಬರ್ 18: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಐಷಾರಾಮಿ ಹೆಲಿಕಾಪ್ಟರ್ ಹಗರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದ್ದು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಕಮಲ್ ನಾಥ್ ಅವರ ಸೋದರಳಿಯ ಹಾಗೂ ಇಬ್ಬರು ಮಕ್ಕಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ.

ಕಮಲ್ ನಾಥ್ ಅವರ ಸೋದರಳಿಯ ರುತುಲ್ ಪುರಿ ಮತ್ತು ಮಕ್ಕಳಾದ ನಕುಲ್ ನಾಥ್ ಹಾಗೂ ಬಕುಲ್ ನಾಥ್ ಅವರು ಹೆಲಿಕಾಪ್ಟರ್‌ ಡೀಲ್‌ನಲ್ಲಿ ಪಡೆದ ಕಿಕ್‌ ಬ್ಯಾಕ್‌ನ ಫಲಾನುಭವಿಗಳಾಗಿದ್ದಾರೆ ಎಂದು ಇ.ಡಿ ಮೂಲಗಳು ಹೇಳಿವೆ. ಕಮಲ್ ನಾಥ್ ಸೋದರಳಿಯ ರುತುಲ್ ಪುರಿ ಬ್ರಿಟಿಷ್ ಪ್ರಜೆ ಹಾಗೂ ಈ ಒಪ್ಪಂದ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್ ಜೇಮ್ಸ್‌ನಿಂದ 1 ಮಿಲಿಯನ್ ಡಾಲರ್ ಪಡೆದಿದ್ದರು ಎಂದು 'ಟೈಮ್ಸ್ ನೌ' ವರದಿ ಮಾಡಿದೆ.

ಅಗಸ್ಟಾವೆಸ್ಟ್‌ಲ್ಯಾಂಡ್ ಹಗರಣ: 5 ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿದ ಸಿಬಿಐಅಗಸ್ಟಾವೆಸ್ಟ್‌ಲ್ಯಾಂಡ್ ಹಗರಣ: 5 ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿದ ಸಿಬಿಐ

ಅಗಸ್ಟಾವೆಸ್ಟ್‌ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದ ಕಿಕ್ ಬ್ಯಾಕ್ ಪಾವತಿ ಅವ್ಯವಹಾರಗಳ ಸರಪಣಿಯನ್ನು ಭೇದಿಸುವಲ್ಲಿ ಜಾರಿ ನಿರ್ದೇಶನಾಲಯ ಯಶಸ್ವಿಯಾಗಿದೆ. ಒಟ್ಟು 385 ಕೋಟಿ ರೂದಷ್ಟು ಲಂಚವನ್ನು ಈ ಹಗರಣದಲ್ಲಿ ನೀಡಲಾಗಿದೆ. ಮೈಕಲ್ ಒಂದು ಮಿಲಿಯನ್ ಡಾಲರ್ ಹಣವನ್ನು ಪುರಿಗೆ ನೀಡಿದ್ದ. ಬಕುಲ್ ಮತ್ತು ನಕುಲ್ ಟ್ರಸ್ಟಿಗಳಾಗಿರುವ ಟ್ರಸ್ಟ್ ಫಂಡ್ ಒಂದರಲ್ಲಿ ಪುರಿ ಕೂಡ ಪಾಲುದಾರನಾಗಿದ್ದಾನೆ ಎಂದು ಇ.ಡಿ. ತಿಳಿಸಿದೆ.

 ED Claims Kamal Naths Nephew And Sons Involved In AgustaWestland VVIP Chopper Scam

ಈ ಟ್ರಸ್ಟ್ ಪ್ರಿಸ್ಟೀನ್ ರಿವರ್ ಎಂಬ ಕಂಪೆನಿಯೊಂದನ್ನು ಹೊಂದಿದ್ದು, ಅದು 14 ಮಿಲಿಯನ್ ಡಾಲರ್ ಲಂಚದ ಮೊತ್ತವನ್ನು ಪಡೆದುಕೊಂಡಿದೆ. ಕಮಲ್ ನಾಥ್ ಅವರ ಇಬ್ಬರು ಮಕ್ಕಳು ಇದರ ನೇರ ಫಲಾನುಭವಿಗಳಾಗಿದ್ದಾರೆ ಎನ್ನುವುದು ಕೂಡ ಇಡಿ ತನಿಖೆಯಿಂದ ತಿಳಿದುಬಂದಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣ: ನಿನ್ನೆ 'ಸತ್ತಿದ್ದ' ವ್ಯಕ್ತಿ ನಾಳೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳಲಿದ್ದಾರೆ!ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣ: ನಿನ್ನೆ 'ಸತ್ತಿದ್ದ' ವ್ಯಕ್ತಿ ನಾಳೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳಲಿದ್ದಾರೆ!

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಯುಪಿಎ-2 ಸರ್ಕಾರದ ಅವಧಿಯಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಅವರಂತಹ ವಿವಿಐಪಿಗಳ ಓಡಾಟಕ್ಕಾಗಿ 3,600 ಕೋಟಿ ರೂ ವೆಚ್ಚದಲ್ಲಿ ಐಷಾರಾಮಿ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈ ಒಪ್ಪಂದದಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದ್ದು, ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು.

English summary
ED claims Congress leader Kamal Nath's nephew Ratul Puri and his two sons Nakul Nath and Bakul Nath were beneficiaries of kickbacks as part of AgustaWestland VVIP Chopper Scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X