ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟರ್ಲಿಂಗ್ ಬಯೋಟೆಕ್ ಪ್ರಕರಣ: ಇ.ಡಿ.ಯಿಂದ 9778 ಕೋಟಿ ಮೌಲ್ಯದ ಆಸ್ತಿ ಜಪ್ತಿ

|
Google Oneindia Kannada News

ಸ್ಟರ್ಲಿಂಗ್ ಬಯೋಟೆಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ಜಾರಿ ನಿರ್ದೇಶನಾಲಯವು ಸಂದೇಸರಾಗೆ ಸೇರಿದ 9778 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ. ತಲೆ ಮರೆಸಿಕೊಂಡಿರುವ ಚೇತನ್ ಹಾಗೂ ನಿತಿನ್ ಸಂದೇಸರಾಗೆ ಸೇರಿದ ವಿಮಾನ ಹಾಗೂ ಲಂಡನ್ ನಲ್ಲಿರುವ ಆಸ್ತಿಗಳನ್ನು ಕೂಡ ಜಪ್ತಿ ಮಾಡಿದೆ.

ಬ್ಯಾಂಕ್ ಗೆ ಮಾಡಿದ 8100 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟರ್ಲಿಂಗ್ ಬಯೋಟೆಕ್ ಪ್ರವರ್ತಕರು, ಸಂದೇಸರಾ ಹಸ್ತಾಂತರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ಪ್ರಕರಣದಲ್ಲಿ ನಿತಿನ್ ಸಂದೇಸರಾ, ಚೇತನ್ ಕುಮಾರ್ ಸಂದೇಸರಾ, ಹಿತೇಶ್ ಕುಮಾರ್ ಪಟೇಲ್ ಹಾಗೂ ದೀಪ್ತಿ ಸಂದೇಸರಾ ಪ್ರಮುಖ ಆರೋಪಿಗಳಾಗಿದ್ದಾರೆ.

ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಇ.ಡಿ ಹೊಸ ಪ್ಲ್ಯಾನ್ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಇ.ಡಿ ಹೊಸ ಪ್ಲ್ಯಾನ್

ಇವರೆಲ್ಲರ ಹಸ್ತಾಂತರಕ್ಕಾಗಿ ತನಿಖಾ ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ. ತನಿಖಾ ಸಂಸ್ಥೆಗಳಿಂದ ಈಗಾಗಲೇ 191 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅದರಲ್ಲಿ ಏಳು ವ್ಯಕ್ತಿಗಳು ಹಾಗೂ 184 ಶೆಲ್ ಕಂಪೆನಿಗಳು ಇವೆ. ಆ ಶೆಲ್ ಕಂಪೆನಿಗಳ ಪೈಕಿ ಸ್ಟರ್ಲಿಂಗ್ ಬಯೋಟೆಕ್, ಪಿಎಂಟಿ ಮಶೀನ್ಸ್, ಸ್ಟರ್ಲಿಂಗ್ ಎಸ್ ಇಝೆಡ್ ಮತ್ತು ಇನ್ಪ್ರಾ, ಸ್ಟರ್ಲಿಂಗ್ ಪೋರ್ಟ್, ಸ್ಟರ್ಲಿಂಗ್ ಆಯಿಲ್ ರಿಸೋರ್ಸಸ್ ಹಾಗೂ 179 ಶೆಲ್ ಕಂಪೆನಿಗಳಿವೆ.

ED attached 9778 crore worth of property of Sandesara brothers

ಹಿತೇಶ್ ನರೇಂದ್ರ ಭಾಯ್ ಪಟೇಲ್ ನನ್ನು ಈ ವರ್ಷದ ಮಾರ್ಚ್ ಅಲ್ಬೇನಿಯಾದ ತಿರಾನದಲ್ಲಿ ವಶಕ್ಕೆ ಪಡೆಯಲಾಯಿತು. ಕಳೆದ ವರ್ಷ ಮಾರ್ಚ್ 11ರಂದು ಆತನ ವಿರುದ್ಧ ಇಂಟರ್ ಪೋಲ್ ನಿಂದ ರೆಡ್ ನೋಟಿಸ್ ನೀಡಲಾಗಿತ್ತು. ಆತನನ್ನು ಭಾರತಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ.

ವಂಚನೆ ಪ್ರಕರಣ: IL&FS ಮಾಜಿ ಅಧಿಕಾರಿಗಳನ್ನು ವಶಕ್ಕೆ ಪಡೆದ EDವಂಚನೆ ಪ್ರಕರಣ: IL&FS ಮಾಜಿ ಅಧಿಕಾರಿಗಳನ್ನು ವಶಕ್ಕೆ ಪಡೆದ ED

ಜಾಮೀನು ರಹಿತ ವಾರೆಂಟ್:
2017ರಲ್ಲಿ ಸಿಬಿಐನಿಂದ ಸ್ಟರ್ಲಿಂಗ್ ಬಯೋಟೆಕ್ ಮತ್ತು ಅದರ ಗುಂಪಿನ ಕಂಪೆನಿಗಳು, ನಿರ್ದೇಶಕರ ಮೇಲೆ ಎಫ್ ಐಆರ್ ದಾಖಲಿಸಿತು. ಭಾರತದಲ್ಲಿ ವಿಚಾರಣೆ ತಪ್ಪಿಸಿಕೊಳ್ಳುವ ಸಲುವಾಗಿ ಕಂಪೆನಿ ಪ್ರವರ್ತಕರಾದ ನಿತಿನ್ ಹಾಗೂ ಚೇತನ್ ವಿದೇಶಕ್ಕೆ ಓಡಿ ಹೋಗಿದ್ದರು. ನಾಪತ್ತೆಯಾದ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಜಾಮೀನು ರಹಿತ ವಾರೆಂಟ್ ಪಡೆದಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯದಿಂದ್ ಸಂದೇಸರಾ ಸೋದರರು ಹಾಗೂ ಕಂಪೆನಿಯ 4,700 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿತ್ತು. ಅದರಲ್ಲಿ 4000 ಎಕರೆಯಷ್ಟು ಆಸ್ತಿ ಕೂಡ ಇತ್ತು. ವಿವಿಧ ಕಂಪೆನಿಗಳ 200 ಬ್ಯಾಂಕ್ ಖಾತೆ, ಪ್ರವರ್ತಕರ ಖಾತೆಗಳು, 6.67 ಕೋಟಿ ಮೌಲ್ಯದ ಷೇರು ಹಾಗೂ ವಿಲಾಸಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

5,000 ಕೋಟಿಗೂ ಹೆಚ್ಚು ಮೊತ್ತದ ಸಾಲ:
ಸುಳ್ಳು ದಾಖಲೆಗಳ ಮೂಲಕ ಹಲವಾರು ಕಂಪೆನಿಗಳನ್ನು ಸೃಷ್ಟಿಸಿದ್ದ ಸಂದೇಸರಾ ಸೋದರರು 5,000 ಕೋಟಿಗೂ ಹೆಚ್ಚು ಮೊತ್ತದ ಸಾಲವನ್ನು ವಿವಿಧ ಬ್ಯಾಂಕ್ ಗಳಿಂದ ಪಡೆದಿದ್ದರು. ಆಂಧ್ರಾ ಬ್ಯಾಂಕ್, ಯುಕೋ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಸೇರಿ ಸಾಲ ನೀಡಿದ್ದವು. ಅವು ಎನ್ ಪಿಎ ಆಗಿದ್ದವು.

ದೇಶ- ವಿದೇಶದಲ್ಲಿ ಮುನ್ನೂರು ಶೆಲ್ ಕಂಪೆನಿಗಳನ್ನು ಹುಟ್ಟುಹಾಕಿದ್ದ ಸಂದೇಸರಾ ಸಾಲ ಮೊತ್ತ ದುರುಪಯೋಗ ಮಾಡಿಕೊಳ್ಳಲು ಆ ಕಂಪೆನಿಗಳ ಹೆಸರು ಬಳಸಿದ್ದ. ಈ ಸೋದರರು ಮಾಡಿದ ಒಟ್ಟಾರೆ ವಂಚನೆಯ ಮೊತ್ತವು ಬಡ್ಡಿ ಸೇರಿ ಹೇಳುವುದಾದರೆ 8100 ಕೋಟಿ ರುಪಾಯಿ ಆಗುತ್ತದೆ. ಇದೀಗ ಸ್ಟರ್ಲಿಂಗ್ ಗುಂಪಿನ ವಿದೇಶದಲ್ಲಿನ ಬ್ಯಾಂಕ್ ಖಾತೆಗಳು, ಆಸ್ತಿಗಳ ಮೇಲೆ ಕೂಡ ಇಡಿ ಕಣ್ಣಿಟ್ಟಿದೆ.

English summary
Enforcement Directorate has attached properties worth of 9,778 crore under PMLA in a case of cheating and bank fraud by Sterling Biotech Ltd/ Sandesara Group & its main promoters Nitin Sandesara, Chetan Sandesara, Deepti Sandesara along with others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X