ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ 570 ಜಿಲ್ಲೆಗಳಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತ: ಅಧ್ಯಯನ

By Nayana
|
Google Oneindia Kannada News

ಬೆಂಗಳೂರು, ಜೂನ್ 1: ಭಾರತದ ವಿವಿಧ ರಾಜ್ಯಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಂತೆ ಆಯಾ ರಾಜ್ಯದ ಶ್ರೀಮಂತ ಹಾಗೂ ಬಡ ಜಿಲ್ಲೆಗಳಲ್ಲಿನ ಆರ್ಥಿಕ ಅಭಿವೃದ್ಧಿ ತೀವ್ರ ಕುಂಠಿತಗೊಳ್ಳುತ್ತಿದ್ದು 1991ರಿಂದ 2017 ರವರೆಗಿನ ಎರಡೂವರೆ ದಶಕಗಳ ಅವಧಿಯಲ್ಲಿ ಪ್ರತಿ ರಾಜ್ಯದ ಆಂತರಿಕ ಜಿಲ್ಲೆಗಳ ಅಭಿವೃದ್ಧಿ ಕುರಿತಂತೆ ಸಮಗ್ರ ಅಧ್ಯಯನ ಒಂದು ನಡೆದಿದೆ.

ಬಿಬಿಸಿ ನಡೆಸಿದ ಈ ಅಧ್ಯಯನದಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವಿವಿಧ ರಾಜ್ಯಗಳ ಜಿಲ್ಲೆಗಳೊಳಗಿನ ಅಭಿವೃದ್ಧಿಯ ಅಂತರ ಏರುತ್ತಲೇ ಸಾಗಿದೆ. ಕೆಲವು ಜಿಲ್ಲೆಗಳು ಅಭಿವೃದ್ಧಿಪರ ಜಿಲ್ಲೆಗಳು, ಶ್ರೀಮಂತಜಿಲ್ಲೆಗಳು ಶ್ರೀಮಂತವಾಗುತ್ತಲೇ ಸಾಗಿದ್ದರೆ ಬಡ ಜಿಲ್ಲೆಗಳು ಇನ್ನೂ ಬಡ ಜಿಲ್ಲೆಗಳಾಗಿ ಉಳಿಯುತ್ತಿದೆ.

ಬಿಬಿಎಂಪಿ ಬೆಂಗಳೂರನ್ನು ಡರ್ಟಿ ಸಿಟಿ ಮಾಡುತ್ತಿದೆ: ಹೈಕೋರ್ಟ್ ಬಿಬಿಎಂಪಿ ಬೆಂಗಳೂರನ್ನು ಡರ್ಟಿ ಸಿಟಿ ಮಾಡುತ್ತಿದೆ: ಹೈಕೋರ್ಟ್

ಇದೇ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಏರ್ಫೋರ್ಸ್‌ನ ಸ್ಯಾಟಲೈಟ್ ನೆರವಿನಿಂದ ನೆರವಿನಿಂದ ನಡೆಸಿದ ಅಧ್ಯಯನದಲ್ಲಿ ಭಾರತದ ವಿವಿಧ ರಾಜ್ಯಗಳ ಜಿಲಲ್ಲೆಗಳಲ್ಲಿನ ರಾತ್ರಿ ವೇಳೆ ಬೆಳಕು ಪ್ರಕರಿಸುವ ಆಧಾರದ ಮೇಲೆ ಆಯಾ ಜಿಲ್ಲೆಗಳ ಅಭಿವೃದ್ಧಿಯನ್ನು ಎರಡೂವರೆ ದಶಕದ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ.

ಯಾವ್ಯಾವ ರಾಜ್ಯಗಳ ಅಭಿವೃದ್ಧಿ ಅಧ್ಯಯನ

ಯಾವ್ಯಾವ ರಾಜ್ಯಗಳ ಅಭಿವೃದ್ಧಿ ಅಧ್ಯಯನ

ಬೆಂಗಳೂರು, ಚೆನ್ನೈ, ಕೊಯಮತ್ತೂರ್, ಹೈದರಾಬಾದ್, ದೆಹಲಿ, ಕೋಲ್ಕತ್ತಾ ಇಂತಹ ಪ್ರಮುಖ ನಗರಗಳಲ್ಲಿ ರಾತ್ರಿ ವೇಳೆ ಹೊಳೆಯುವ ದೀಪಗಳ ಆಧಾರದ ಮೇಲೆ ಅಭಿವೃದ್ಧಿ ಪರ ಎಂದು ಎರಡೂವರೆ ದಶಕಗಳಿಂದ ರಾತ್ರಿ ವೇಳೆ ಸ್ಯಾಟಲೈಟ್ ಗೋಚರಿಸದ ಜಿಲ್ಲೆಗಳನ್ನು ಬಡ ಜಿಲ್ಲೆಗಳೆಂದು ಯುನೈಟೆಡ್‌ ಏರ್‌ಫೋರ್ಸ್‌ನ ಉಪಗ್ರಹ ಅಧ್ಯಯನದ ಮೂಲಕ ಅಂದಾಜು ಮಾಡಲಾಗಿದೆ.

600 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ಮಾತ್ರ ಅಭಿವೃದ್ಧಿ

600 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ಮಾತ್ರ ಅಭಿವೃದ್ಧಿ

ಸಮೀಕ್ಷೆ ಪ್ರಕಾರ ದೇಶದ 600 ಜಿಲ್ಲೆಗಳ ಪೈಕಿ ಕೇವಲ 30 ಜಿಲ್ಲೆಗಳ ಶೇಕಡಾ 80ರಷ್ಟು ಪ್ರಗತಿಯತ್ತ ಸಾಗಿದ್ದರೆ ಉಳಿದ ಜಿಲ್ಲೆಗಳೆಲ್ಲವೂ ಶೇಕಡಾ 20ರಷ್ಟು ಅಭಿವೃದ್ಧಿ ಸಾಧಿಸಿದೆ. ಒಂದು ರಾಜ್ಯದ ಅಭಿವೃದ್ಧಿಯನ್ನು ಗುರುತಿಸುವಾಗ ಎಲ್ಲ ಜಿಲ್ಲೆಗಳ ಅಭಿವೃದ್ಧಿಯನ್ನು ಅದೇ ಮಾದರಿಯಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ರಾಜ್ಯದ ಶ್ರೀಮಂತ ಜಿಲ್ಲೆಗಳು ಅಂದರೆ, ಕೊಲ್ಕತ್ತಾ, ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿಯಂತಹ ಜಿಲ್ಲೆಗಳು ಅಭಿವೃದ್ಧಿ ಪಥದಲ್ಲಿ ಸಾಕಷ್ಟು ವೇಗವನ್ನು ದಾಖಲಿಸಿದ್ದರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಅಭಿವೃದ್ಧಿ ವೇಗ ಗೋಚರಿಸುವುದೇ ಇಲ್ಲ.

1992ರಿಂದ 2015ರವರೆಗೆ ನಡೆದಿರುವ ಅಧ್ಯಯನ

1992ರಿಂದ 2015ರವರೆಗೆ ನಡೆದಿರುವ ಅಧ್ಯಯನ

1992ರಲ್ಲಿ ಆರಂಭವಾದ ಈ ಯೋಜನೆ ರಿಸರ್ಚ್ ಸ್ಕಾಲರ್‌ಗಳನ್ನು ಒಳಗೊಂಡು ಅಧ್ಯಯನವನ್ನು ಆರಂಭಿಸಿತ್ತು. ಜಹಗತ್ತಿನ ಆರ್ಥಿಕ ಅಭಿವೃದ್ಧಿಯನ್ನು ಆರ್ಥಿಕ ಸಂಶೋಧನೆ ಹಾಗೂ ರಾತ್ರಿ ವೇಳೆ ಪ್ರಖರಿಸುವ ಆಧಾರದ ಮೇಲೆ ಅಧ್ಯಯನ ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.
ಯುನೈಟೆಡ್‌ ಸ್ಟೇಟ್ಸ್ ಆಫ್‌ ಅಮೇರಿಕಾದ ಯುನೈಟೆಡ್ ಫೋರ್ಸ್ ಡಿಫೆನ್ಸ್ ಮೆಟಿಯೋಲಾಜಿಕಲ್ ಪ್ರೋಗ್ರಾಮ್, ಎಂಬ ಕಾರ್ಯಾಚರಣೆಯ ಯೋಜನೆಯಡಿ, ಉಪಗ್ರಹಗಳನ್ನು ರಾತ್ರಿ ವೇಳೆ ಜಗತ್ತಿನ ನಾನಾ ರಾಷ್ಟ್ರಗಳ ಚಿತ್ರೀಕರಣ ನಡೆಸಿ ಅದರ ಆಧಾರದ ಮೇಲೆ ಆಯಾ ದೇಶದ ಅಭಿವೃದ್ಧಿಪಥವನ್ನು ಅಂದಾಜಿಸಲಾಗಿದೆ.

ರಾಜ್ಯದ ರಾತ್ರಿ ಬೆಳಕಿನ ಆಧಾರದಲ್ಲಿ ಅಭಿವೃದ್ಧಿ ಅಧ್ಯಯನ

ರಾಜ್ಯದ ರಾತ್ರಿ ಬೆಳಕಿನ ಆಧಾರದಲ್ಲಿ ಅಭಿವೃದ್ಧಿ ಅಧ್ಯಯನ

ಈ ಅಧ್ಯಯನದಿಂದ ಹೊರ ಬಂದ ಅಂಕಿ ಅಂಶಗಳನ್ನು ಆಧರಿಸಿ ಜಗತ್ತಿನ ನಾನಾ ರಾಷ್ಟ್ರಗಳಲ್ಲಿನ ನಾನಾ ರಾಜ್ಯಗಳ ಬೆಳವಣಿಗೆ ಗತಿಯನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಈ ವೇಳೆ ರಾತ್ರಿ ವೇಳೆ ಪ್ರಖರಿಸುವ ಬೆಳಕು ಆಧಾರದ ಮೇಲೆ ಆರ್ಥಿಕ ಪರಿಸ್ಥಿತಿಯನ್ನು ಗುರುತಿಸಿದೆ.
1992ರಿಂದ 2015ರ ಒಳಗಿನ ದೇಶದ ಎಲ್ಲಾ ರಾಜ್ಯಗಳ ಜಿಲ್ಲೆಗಳ ಜಿಡಿಪಿಯನ್ನು ಅಧ್ಯಯನ ನಡೆಸುವ ಪ್ರಯತ್ನವನ್ನು ಮೊದಲು ಮಾಡಲಾಗಿತ್ತು. ಆದರೆ ಜಿಡಿಪಿಯಲ್ಲಿ ಆಯಾ ಜಿಲ್ಲೆಗಳ ಜಿಡಿಪಿ ವಾಸ್ತವದಲ್ಲಿ ಆರ್ಥಿಕತೆ ಹಾಗೂ ನೈಜ ಜಿಡಿಪಿಗೂ ಸಾಕ್ಟು ವ್ಯತ್ಯಾಸಗಳು ಕಂಡು ಬಂದಿದ್ದರಿಂದ ಇಂತಹ ಅಧ್ಯಯದಿಂದ ನೈಜ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿತ್ತು.

English summary
US satellite based study has revealed that huge disparity found in economic growth between each district of India. Bigger cities like Bangalore, Mumbai, Chennai growing fast and poor district were remain in the same backwardness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X