ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ

|
Google Oneindia Kannada News

Recommended Video

Union Budget 2020-21:ಆನ್ ಲೈನ್ ಶಿಕ್ಷಣ ವ್ಯವಸ್ಥೆಗೆ ಒತ್ತು | Budget | Education | Oneindia kannada

ನವದೆಹಲಿ, ಫೆಬ್ರವರಿ 01: ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಎಫ್‌ಡಿಐ (ವಿದೇಶಿ ನೇರ ಬಂಡವಾಳ ಹೂಡಿಕೆ) ಇಸಿಬಿಗಳನ್ನು ಆಕರ್ಷಿಸಲು ಕ್ರಮಗಳನ್ನು ಕೈಗೊಳ್ಳುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2020 ಮಂಡನೆ ವೇಳೆ ಹೇಳಿದರು.

ಬಜೆಟ್‌ 2020 ಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಲವು ಘೊಷಣೆಗಳನ್ನು ಮಾಡಿದ ಸಚಿವೆ, 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೆಲವೇ ದಿನಗಳಲ್ಲಿ ಘೋಷಿಸಲಾಗುವುದು' ಎಂದರು.

Budget 2020 Live: ಆದಾಯ ತೆರಿಗೆ ಪಾವತಿದಾರರಿಗೆ ಭರ್ಜರಿ ಸಿಹಿ ಸುದ್ದಿ

ಮಾರ್ಚ್‌ 2021 ರ ವೇಳೆಗೆ ದೇಶದಾದ್ಯಂತ 150 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಈ ಶಿಕ್ಷಣ ಸಂಸ್ಥೆಗಳು ಅಪ್ರೆಂಟಿಶಿಪ್, ಪದವಿ, ಡಿಪ್ಲೋಮಾ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಲಿವೆ ಎಂದರು.

ECB And FDI To Deliver Quality Education: Nirmala Sitharaman

ಎಂಜಿನಿಯರ್ ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತದೊಂದಿಗೆ ಸೇರಿ ಒಂದು ವರ್ಷದ ಇಂಟರ್ನ್‌ಶಿಪ್ ತರಬೇತಿಯನ್ನು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು.

ಪ್ರಧಾನಮಂತ್ರಿ ಕುಸುಮ್ ಯೋಜನೆ ವಿಸ್ತರಣೆ: ರೈತರಿಗೆ ಏನು ಲಾಭ?ಪ್ರಧಾನಮಂತ್ರಿ ಕುಸುಮ್ ಯೋಜನೆ ವಿಸ್ತರಣೆ: ರೈತರಿಗೆ ಏನು ಲಾಭ?

ಹಿಂದುಳಿದ ಮತ್ತು ಶಿಕ್ಷಣದಿಂದ ವಂಚಿತರಾಗಿರುವರಿಗಾಗಿ ಆನ್‌ಲೈನ್ ತರಗತಿಗಳನ್ನು ಪ್ರಾರಂಭ ಮಾಡುವುದಾಗಿ ವಿತ್ತ ಸಚಿವೆ ಘೊಷಿಸಿದರು. ಆನ್‌ಲೈನ್ ಪದವಿ ಕೋರ್ಸ್‌ನಿಂದ ಹಿಂದುಳಿದ ಮತ್ತು ಶಿಕ್ಷಣದಿಂದ ವಂಚಿತರಾದವರು ಪದವಿ ಗಳಿಸಲು ಸಹಾಯವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿರ್ಮಲಾ ಹೇಳಿದ ಬಜೆಟ್ 2020ರ ಮೂರು ಸ್ತಂಭಗಳುನಿರ್ಮಲಾ ಹೇಳಿದ ಬಜೆಟ್ 2020ರ ಮೂರು ಸ್ತಂಭಗಳು

ಎಲ್ಲ ಜಿಲ್ಲೆಗಳಲ್ಲೂ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಹಣ ಮೀಸಲಿಡುವುದಾಗಿಯೂ ಅವರು ಹೇಳಿದರು.

English summary
Finance minister Nirmala Sitharam said in here budget that, steps would be taken to get ECB and FDI for us to deliver high quality education.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X