ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ: 2014ಕ್ಕಿಂತ ಮೂರು ಪಟ್ಟು ಹೆಚ್ಚು ಹಣ, ಹೆಂಡ ವಶ

|
Google Oneindia Kannada News

ನವದೆಹಲಿ, ಮೇ 22: ಲೋಕಸಭಾ ಚುನಾವಣೆ 2019 ಮಾರ್ಚ್‌ 10 ಕ್ಕೆ ಘೋಷಣೆ ಆಗಿತ್ತು, ಅಂದಿನಿಂದಲೇ ದೇಶದಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಅಲ್ಲಿನಿಂದ ಮತದಾನದ ದಿನದ ವರೆಗೂ ಆಯೋಗವು 3449.12 ಕೋಟಿ ಮೌಲ್ಯದ ಹಣ, ಹೆಂಡ ಮತ್ತು ಇತರೆ ವಸ್ತುಗಳನ್ನು ದೇಶದಾದ್ಯಂತ ವಶಪಡಿಸಿಕೊಂಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಸಾರ್ವತ್ರಿಕ ಚುನಾವಣೆಯಲ್ಲಿ ವಶಪಡಿಸಿಕೊಂಡಿರುವ 3449 ಕೋಟಿ ಮೌಲ್ಯದ ಹಣ, ಹೆಂಡ, ಇತರೆ ವಸ್ತುಗಳು ಕಳೆದ 2014 ರಲ್ಲಿ ವಶಪಡಿಸಿಕೊಂಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಎಂದು ಆಯೋಗ ಹೇಳಿದೆ. 2014 ರಲ್ಲಿ ಆಯೋಗವು 1206 ಕೋಟಿ ಮೌಲ್ಯದ ಅಕ್ರಮ ವಸ್ತು, ಹಣ, ಹೆಂಡಗಳನ್ನು ಆಯೋಗ ವಶಪಡಿಸಿಕೊಂಡಿತ್ತು.

ರಾಜ್ಯದಲ್ಲಿ ಚುನಾವಣಾ ಫಲಿತಾಂಶ 4 ಗಂಟೆ ತಡ: ಆಯೋಗ ರಾಜ್ಯದಲ್ಲಿ ಚುನಾವಣಾ ಫಲಿತಾಂಶ 4 ಗಂಟೆ ತಡ: ಆಯೋಗ

ಮಾರ್ಚ್‌ 10 ರಿಂದ ಮೇ 19 ರವರೆಗೆ ಆಯೋಗವು 839.03 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದೆ. 294.41 ಕೋಟಿ ಮದ್ಯ ವಶಪಡಿಸಿಕೊಂಡಿದೆ. 1270.30 ಕೋಟಿ ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡಿದೆ. 986.76 ಕೋಟಿ ಮೌಲ್ಯದ ಚಿನ್ನಾಭರಣ, ಅಥವಾ ಇನ್ನಿತರೆ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ. 58.56 ಕೋಟಿ ಮೌಲ್ಯದ ಸೀರೆ, ವಾಚು ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾಗಿ ಆಯೋಗ ಹೇಳಿದೆ.

EC seized 3449 crore worth cash, goods during lok sabha elections 2019

ಕರ್ನಾಕದಲ್ಲಿ 88.20 ಕೋಟಿ ಮೌಲ್ಯದ ಅಕ್ರಮ ಹಣ, ವಸ್ತು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು 951.9 ಕೋಟಿ ಮೌಲ್ಯದ ಹಣ, ಹೆಂಡ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಜರಾತ್‌ನಲ್ಲಿ 55.27 ಕೋಟಿ ಮೌಲ್ಯದ ಅಕ್ರಮ ಪತ್ತೆಯಾಗಿದೆ. ಉತ್ತರ ಪ್ರದೇಶದಲ್ಲಿ 193.7 ಕೋಟಿ ಮೌಲ್ಯದ ಅಕ್ರಮ ಹಣ, ಮದ್ಯ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
Election commission said 3449 crore rupees worth cash, liquor, gold and other goods seized in between March 10 to May 19 last day voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X