ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ವಿಧಾನಸಭೆ ಮತ್ತು 65 ಕ್ಷೇತ್ರಗಳ ಉಪ ಚುನಾವಣೆ ಒಂದೇ ಸಮಯಕ್ಕೆ: ಆಯೋಗ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 4: ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಬಾಕಿ ಉಳಿದಿರುವ 65 ಉಪ ಚುನಾವಣೆಗಳನ್ನು ಹೆಚ್ಚೂ ಕಡಿಮೆ ಒಂದೇ ಸಮಯಕ್ಕೆ ನಡೆಸಲು ನಿರ್ಧರಿಸಿರುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಬಿಹಾರ ವಿಧಾನಸಭೆ ಚುನಾವಣೆ ಮತ್ತು ಉಪ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದರಿಂದ ಕೇಂದ್ರ ಪಡೆಗಳ ಓಡಾಟ ಹಾಗೂ ಸಂಬಂಧಿಸಿದ ಸಾಮಗ್ರಿಗಳ ವಿತರಣೆಯ ಕಾರ್ಯಗಳು ಸುಲಭವಾಗಲಿದೆ ಎಂದು ಆಯೋಗದ ಹೇಳಿಕೆ ತಿಳಿಸಿದೆ.

ಕೋವಿಡ್ ಕಾಲದಲ್ಲಿ ಎಲೆಕ್ಷನ್: ಪ್ರಚಾರ, ಮತದಾನಕ್ಕೆ ನಿಯಮ ರೂಪಿಸಿದ ಚುನಾವಣಾ ಆಯೋಗಕೋವಿಡ್ ಕಾಲದಲ್ಲಿ ಎಲೆಕ್ಷನ್: ಪ್ರಚಾರ, ಮತದಾನಕ್ಕೆ ನಿಯಮ ರೂಪಿಸಿದ ಚುನಾವಣಾ ಆಯೋಗ

ಲೋಕಸಭೆಯಲ್ಲಿ ಒಂದು ಕ್ಷೇತ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಒಟ್ಟು 64 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಬಾಕಿ ಇದೆ. ಕೊರೊನಾ ವೈರಸ್ ಸೋಂಕಿನ ಹಾವಳಿ ಮತ್ತು ಅತವೃಷ್ಠಿಯ ಕಾರಣದಿಂದ ವಿವಿಧ ಉಪ ಚುನಾವಣೆಗಳನ್ನು ಮುಂದೂಡಲಾಗಿತ್ತು.

EC Decides To Held Bihar Assembly Elections And 65 Pending Bypolls Around Same Time

ವಿವಿಧ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಉಪ ಚುನಾವಣೆಗಳನ್ನು ನಡೆಸುವ ಸಂಬಂಧ ಶುಕ್ರವಾರ ಬೆಳಿಗ್ಗೆ ಚುನಾವಣಾ ಆಯೋಗ ಸಭೆ ನಡೆಸಿತ್ತು. ವಿಧಾನಸಭೆ ಹಾಗೂ ಸಂಸತ್ ಕ್ಷೇತ್ರಗಳನ್ನು ಸೇರಿ ಒಟ್ಟು 65 ಕಡೆ ಉಪ ಚುನಾವಣೆಗಳು ನಡೆಯಬೇಕಿವೆ. ವಿವಿಧ ರಾಜ್ಯಗಳ 64 ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ ಒಂದು ಲೋಕಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಬೇಕಿದೆ ಎಂದು ಹೇಳಿಕೆ ತಿಳಿಸಿದೆ.

ಉಪ ಚುನಾವಣೆಗಳು ನಡೆಯಬೇಕಿರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿರುವ ವರದಿಗಳು ಮತ್ತು ಮಾಹಿತಿಗಳನ್ನು ಪರಾಮರ್ಶಿಸಲಾಗಿದೆ. ಕೆಲವು ರಾಜ್ಯಗಳು ಅತೀವ ಪ್ರಮಾಣದ ಮಳೆ ಹಾಗೂ ಕೊರೊನಾ ವೈರಸ್ ಸೋಂಕು ಮುಂತಾದವುಗಳ ಕುರಿತು ಕಳವಳ ವ್ಯಕ್ತಪಡಿಸಿವೆ.

ಆರ್. ಆರ್. ನಗರ, ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸದ್ಯಕ್ಕಿಲ್ಲಆರ್. ಆರ್. ನಗರ, ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸದ್ಯಕ್ಕಿಲ್ಲ

ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29ರಂದು ಅಂತ್ಯಗೊಳ್ಳಲಿದ್ದು, ಅಕ್ಟೋಬರ್-ನವೆಂಬರ್ ವೇಳೆ ಚುನಾವಣೆ ನಡೆಯಲಿದೆ. ಸಮಯ ಉಳಿಸುವ ಸಲುವಾಗಿ ಉಪ ಚುನಾವಣೆಗಳು ಮತ್ತು ಬಿಹಾರ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಆಯೋಗ ನಿರ್ಧರಿಸಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯಗಳಿಗೂ ಅನುಕೂಲವಾಗಲಿದೆ. ಸೂಕ್ತ ಸಮಯದಲ್ಲಿ ಚುನಾವಣೆಗಳ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

English summary
Election Commission said, it has decided to conduct Bihar assembly elections and 65 pending bypolls around the same time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X