ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 2022ರಲ್ಲಿ ಉತ್ತರಪ್ರದೇಶ, ಪಂಜಾಬ್ ಸೇರಿ 5 ರಾಜ್ಯಗಳಿಗೆ ಚುನಾವಣೆ

|
Google Oneindia Kannada News

ನವದೆಹಲಿ, ಜೂನ್ 1: ಕೋವಿಡ್ 19 ಸಾಂಕ್ರಾಮಿಕದ ನಡುವೆ ಸುರಕ್ಷಿತವಾಗಿ ಚುನಾವಣೆ ನಡೆಸುವ ವಿಧಾನವನ್ನು ಆಯೋಗ ಕಂಡುಕೊಂಡಿದ್ದು, 2022ರಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿರುವ ಸುದ್ದಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯುಕ್ತ, ಬಿಹಾರ ಹಾಗೂ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆ ಆಯೋಜನೆ ನಂತರ 2022ರಲ್ಲಿ ಚುನಾವಣೆ ನಡೆಸಲು ಆಯೋಗ ಸಜ್ಜಾಗಿದೆ. ಕೋವಿಡ್ 19 ನಡುವೆ ಸುರಕ್ಷಿತ ಕ್ರಮ ಅನುಸರಿಸುವ ವಿಧಾನವನ್ನು ಅಧಿಕಾರಿಗಳು ಕಂಡು ಕೊಂಡಿದ್ದಾರೆ. ಅತ್ಯಂತ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸುವ ವಿಶ್ವಾಸ ಆಯೋಗಕ್ಕಿದೆ ಎಂದಿದ್ದಾರೆ.

ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಪುದುಚೇರಿ ಅಲ್ಲದೆ ದೇಶದ ವಿವಿಧೆಡೆ ಉಪ ಚುನಾವಣೆಗಳನ್ನು ಕೋವಿಡ್ 19 ಸಾಂಕ್ರಾಮಿಕದ ನಡುವೆ ಆಯೋಜಿಸಲಾಗಿತ್ತು. ಹೆಚ್ಚಿನ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ಸಹಕರಿಸಿದ್ದರು.

EC Confident of Holding Five Assembly Polls in 2022: Chief Election Commissioner Sushil Chandra.

2022ರಲ್ಲಿ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಮತ್ತು ಗುಜರಾತ್ ಸೇರಿದಂತೆ ಹಲವಾರು ವಿಧಾನಸಭಾ ಚುನಾವಣಾ ಯುದ್ದಕ್ಕೆ ಬಿಜೆಪಿ ಸಜ್ಜಾಗುತ್ತಿರುವ ಸುದ್ದಿ ಬಂದ ಬೆನ್ನಲ್ಲೇ ಚುನಾವಣಾ ಆಯೋಗ ಕೂಡಾ ನಿಗದಿಯಂತೆ ಚುನಾವಣೆ ನಡೆಸಲು ಮುಂದಾಗಿರುವ ಸುದ್ದಿ ಬಹಿರಂಗವಾಗಿದೆ.

ಯಾವ ರಾಜ್ಯಗಳ ವಿಧಾನಸಭೆ ಅವಧಿ 2022ರಲ್ಲಿ ಮುಕ್ತಾಯವಾಗಲಿದೆ? ಹಾಲಿ ಯಾವ ಪಕ್ಷ ಅಧಿಕಾರದಲ್ಲಿದೆ?

Recommended Video

Rohini Sindhuri ಯನ್ನ ಪದೇ ಪದೇ ಪ್ರಶ್ನೆ ಮಾಡುತ್ತಿರುವ ಪ್ರತಾಪ್ ! | Oneindia Kannada

* ಮಾರ್ಚ್ 2022: ಗೋವಾ (ಬಿಜೆಪಿ ಮೈತ್ರಿಕೂಟ)
* ಫೆಬ್ರವರಿ: ಮಣಿಪುರ (ಬಿಜೆಪಿ ಮೈತ್ರಿಕೂಟ)
* ಮಾರ್ಚ್: ಪಂಜಾಬ್ (ಕಾಂಗ್ರೆಸ್)
* ಮಾರ್ಚ್: ಉತ್ತರ ಪ್ರದೇಶ (ಬಿಜೆಪಿ)
* ಮಾರ್ಚ್ : ಉತ್ತರಾಖಂಡ್ (ಬಿಜೆಪಿ)
* ಅಕ್ಟೋಬರ್: ಹಿಮಾಚಲ ಪ್ರದೇಶ (ಬಿಜೆಪಿ)
* ಡಿಸೆಂಬರ್: ಗುಜರಾತ್ (ಬಿಜೆಪಿ)

ಇದಲ್ಲದೆ, ಜಮ್ಮು ಮತ್ತು ಕಾಶ್ಮೀರದ ಹೊಸ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಸದ್ಯ ರಾಷ್ಟ್ರಪತಿಗಳ ಆಳ್ವಿಕೆಯಲ್ಲಿದೆ.

ಇದರ ಜೊತೆಗೆ ರಾಜ್ಯಸಭೆಗೆ ಚುನಾವಣೆ ನಡೆಯಬೇಕಿದ್ದು, ಕರ್ನಾಟಕದ 4 ಸ್ಥಾನಗಳು ಸೇರಿದಂತೆ ಒಟ್ಟು 70 ಸ್ಥಾನಗಳು 2022ರ ಏಪ್ರಿಲ್ ತಿಂಗಳಿನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಖಾಲಿಯಾಗಲಿವೆ.

English summary
The Election Commission is confident of holding the five assembly polls due early next year, including in Uttar Pradesh and Punjab said Chief Election Commissioner Sushil Chandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X