ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬೋಲಾ ವೈರಾಣು ಭೀತಿ 'ಸೆಕ್ಸ್'ಗೂ ಕೊಕ್ಕೆ

By Mahesh
|
Google Oneindia Kannada News

ಕೋಲ್ಕತ್ತಾ, ಅ.18: ಭಾರತದಲ್ಲಿ ಎಬೋಲಾ ವೈರಾಣು ಶಂಕಿತರ ಬಗ್ಗೆ ದಿನದಿಂದ ದಿನಕ್ಕೆ ಸುದ್ದಿ ಬರುತ್ತಲೇ ಇದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಂತೂ ಎಬೋಲಾ ಭೀತಿ ಬೇಡ ಎಂದಿದ್ದಾರೆ. ಅದರೆ, ಕೋಲ್ಕತ್ತಾದ ಕುಖ್ಯಾತ ಕಾಮಟಿಪುರದಲ್ಲಿ ಎಬೋಲಾ ಭೀತಿ ಹೆಚ್ಚಾಗಿದ್ದು, ಆಫ್ರಿಕಾ ಮೂಲದ ಕಾಮಾರ್ಥಿಗಳಿಗೆ ನೋ ಸೆಕ್ಸ್ ಪ್ಲೀಸ್ ಎನ್ನುವ ಭಿತ್ತಿಫಲಕ ತೋರಿಸಲಾಗುತ್ತಿದೆ.

ಕೋಲ್ಕತ್ತಾದ ಅತಿದೊಡ್ಡ ರೆಡ್ ಲೈಟ್ ಪ್ರದೇಶವಾದ ಸೊನಾಗಾಚ್ಚಿಯಲ್ಲಿನ ವೇಶ್ಯೆಯರಿಗೆ ಎಬೋಲಾ ವೈರಾಣು ಬಗ್ಗೆ ಅರಿವು ಮೂಡಿಸಲು ಎನ್ ಜಿಒ ಯತ್ನಿಸುತ್ತಿದೆ. ಎಬೋಲಾ ರೋಗದ ಸೋಂಕು ಹರಡುವ ಬಗ್ಗೆ ತಿಳಿ ಹೇಳಿದ್ದು, ಅಫ್ರಿಕಾ ಮೂಲದ ಗ್ರಾಹಕರನ್ನು ಪುರಸ್ಕರಿಸಬೇಡಿ, ಕಾಮದಾಹ ತೀರಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. [ಎಬೋಲಾ : 24/7 ಭಾರತ ಸಹಾಯವಾಣಿ]

ಸುಮಾರು 1,30,000 ಸೆಕ್ಸ್ ವರ್ಕರ್ಸ್ ಗಳಿಗೆ ದರ್ಬಾರ್ ಮಹಿಳಾ ಸಮನ್ವಯ ಸಮಿತಿ (ಡಿಎಂಎಸ್ ಸಿ) ಈ ರೀತಿ ಎಚ್ಚರಿಕೆ ನೀಡಿದೆ. ಆಫ್ರಿಕಾ ಮೂಲದ ಪುರುಷರ ಜೊತೆ ಮಲಗುವ ಮುನ್ನ ಯೋಚಿಸಿ. ಎಬೋಲಾ ವೈರಾಣು ಸೋಂಕು ತಗುಲಿದರೆ ನಿಮ್ಮ ಬದುಕು ನಾಶವಾಗುತ್ತದೆ ಎಂದು ತಿಳಿ ಹೇಳಲಾಗಿದೆ ಎಂದು ಡಿಎಂ ಎಸ್ ಸಿಯ ಸದಸ್ಯೆ ಮಹಾಶ್ವೇತಾ ಹೇಳಿದ್ದಾರೆ.

Ebola threat: Sex workers asked not to entertain Africans

ಆಫ್ರಿಕಾ ಖಂಡದ ಗಿನಿಯಾ, ನೈಜೀರಿಯಾ, ಸಿಯಾರಾ ಲಿಯೋನ್ ಮುಂತಾದ ಕಡೆಗಳಲ್ಲಿ ಎರಡು ದಿನಗಳ ನಡುವಿನಲ್ಲೇ ಸುಮಾರು 56ಕ್ಕೂ ಜನರನ್ನು ಎಬೋಲಾ ಇದುವರೆವಿಗೂ ಬಲಿ ತೆಗೆದುಕೊಂಡಿದೆ. ಒಟ್ಟಾರೆ 1,975 ಪ್ರಕರಣಗಳು ದಾಖಲಾಗಿದ್ದು, 1,059 ಜನ ಸಾವನ್ನಪ್ಪಿದ್ದಾರೆ.

ಎಬೋಲಾ ವೈರಸ್ ಗಾಳಿ ಅಥವಾ ನೀರಿನ ಮೂಲಕ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ರೋಗ ಪೀಡಿತ ರಕ್ತ, ಜಿಹ್ವಾರಸ, ಮೂತ್ರ ಮುಂತಾದವುಗಳ ಸೋಕುವಿಕೆಯಿಂದ ಹರಡುತ್ತದೆ. ಮಲೇರಿಯಾ, ಕಾಲರ, ವೈರಲ್ ಫೀವರ್ ಮಾದರಿಯಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಗಂಟಲು ನೋವು, ಕೈಕಾಲು ನೋವು, ತಲೆನೋವಿನೊಂದಿಗೆ ಆರಂಭವಾಗಿ ಆಮಶಂಕೆ, ಕರಳು ಬೇನೆ, ಕಿಡ್ನಿ ವೈಫಲ್ಯ ಉಂಟಾಗಲಿದೆ. ಕೊನೆ ಕೊನೆಗೆ ರಕ್ತ ಸ್ರಾವ ಉಂಟಾಗಿ ರೋಗಿ ಸಾವನ್ನಪ್ಪುತ್ತಾನೆ.

English summary
Kolkata: Sex workers in the city's largest red light area Sonagachi have been asked by an NGO, working for their welfare, not to entertain Africans who are regular visitors to the place in the wake of the Ebola outbreak in West Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X