ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಲಲಿತ ವಹಿವಾಟು: ಅಗ್ರ ಸ್ಥಾನ ಕಾಯ್ದುಕೊಂಡ ಆಂಧ್ರಪ್ರದೇಶ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಕೇಂದ್ರ ಸರ್ಕಾರವು ಇಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ(ಡಿಐಪಿಪಿ) ಸಿದ್ದಪಡಿಸಿರುವ ಸುಲಲಿತ ಉದ್ದಿಮೆ ವಹಿವಾಟಿನ ವಾರ್ಷಿಕ ಶ್ರೇಯಾಂಕವನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಆತ್ಮನಿರ್ಬರ ಭಾರತ್‌ಗಾಗಿ ಭಾರತೀಯ ರಾಜ್ಯಗಳು ವ್ಯವಹಾರವನ್ನು ಹೆಚ್ಚಿಸುವಲ್ಲಿ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ತೋರಿಸಿದೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದ 2019 ರ ಸುಲಲಿತ ಉದ್ದಿಮೆ ವಹಿವಾಟಿನ ವಾರ್ಷಿಕ ಶ್ರೇಯಾಂಕದಲ್ಲಿ ಆಂಧ್ರಪ್ರದೇಶವು ಈ ಬಾರಿಯು ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಅಚ್ಚರಿ ವಿಚಾರ ಎಂಬಂತೆ 2018ರಲ್ಲಿ 12ನೇ ಸ್ಥಾನದಲ್ಲಿದ್ದ ಉತ್ತರ ಪ್ರದೇಶವು ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ತೆಲಂಗಾಣ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ.

ಮಲೆನಾಡಿನ ರೈತರಿಗೆ ನಿರ್ಮಲಾ ಸೀತಾರಾಮನ್ ಮಹತ್ವದ ಭರವಸೆಮಲೆನಾಡಿನ ರೈತರಿಗೆ ನಿರ್ಮಲಾ ಸೀತಾರಾಮನ್ ಮಹತ್ವದ ಭರವಸೆ

ಇನ್ನುಳಿದಂತೆ ಈ ಕ್ರಮದಲ್ಲಿ ತೆಲಂಗಾಣದ ನಂತರ ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಇತರೆ ರಾಜ್ಯಗಳಿವೆ. ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ 2018 ರ 23 ನೇ ಸ್ಥಾನದಿಂದ 11 ಸ್ಥಾನಗಳನ್ನು ಜಿಗಿದಿದೆ.

Ease of doing business 2019 ranking of states

ಈ ವರದಿಯನ್ನು ಬಿಡುಗಡೆ ಮಾಡುವಾಗ, ಸೀತಾರಾಮನ್ ಈ ಶ್ರೇಯಾಂಕವು ರಾಜ್ಯಗಳು ಮತ್ತು ಯುಟಿಗಳಲ್ಲಿ ವ್ಯಾಪಾರ ಮಾಡಲು ಉತ್ತಮ ಸ್ಥಳವನ್ನಾಗಿ ಮಾಡುತ್ತದೆ ಎಂದು ಹೇಳಿದರು.

English summary
Government today released the 'State Business Reform Action Plan 2019' (BARP) ranking in which Andhra Pradesh retained the number one ranking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X