ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪ, No ಸುನಾಮಿ ಅಲರ್ಟ್

|
Google Oneindia Kannada News

ಪೋರ್ಟ್ ಬ್ಲೇರ್, ಏಪ್ರಿಲ್ 10: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭಾನುವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.9ರಷ್ಟು ದಾಖಲಾಗಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ. ಸದ್ಯಕ್ಕೆ ಯಾವುದೇ ಸಾವು ನೋವು ಸಂಭವಿಸಿದ ವರದಿಗಳು ಬಂದಿಲ್ಲ.

ಭಾನುವಾರ ಬೆಳಗ್ಗೆ 7.02ರ ಸುಮಾರಿಗೆ ಕಂಪನ ಕಂಡು ಬಂದಿದೆ. ಸದ್ಯಕ್ಕೆ ಯಾವುದೇ ಸುನಾಮಿ ಅಲರ್ಟ್ ನೀಡಲಾಗಿಲ್ಲ. ಭೂಕಂಪದ ತೀವ್ರತೆ:4.9 ಎಂದು ರಿಕ್ಟರ್ ಮಾಪಕ ಸೂಚಿಸಿದೆ.

ಸಮಯ ಸುಮಾರು 07:02:26 IST, ಅಕ್ಷಾಂಶ: 7.50 & ರೇಖಾಂಶ: 94.31, ಆಳ: 10 ಕಿಮೀ ,ಸ್ಥಳ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್ಬೆಲ್ ಬೇ ಇಂದ 70ಕಿಮೀ ಈಶಾನ್ಯಕ್ಕೆ ಸಂಭವಿಸಿದೆ.

Earthquake hit Andaman and Nicobar Islands: National Center for Seismology

ಇತ್ತೀಚೆಗೆ ಪೋರ್ಟ್‌ಬ್ಲೇರ್‌ನ ಆಗ್ನೇಯ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಕ್ಕೂ ಮುನ್ನ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉತ್ತರ-ವಾಯುವ್ಯಕ್ಕೆ 276 ಕಿಮೀ ದೂರದಲ್ಲಿರುವ ದಿಗ್ಲಿಪುರ್ ಬಳಿ ಕಂಪನದ ಅನುಭವವಾಗಿತ್ತು.

ಭೂಕಂಪದ ಕೇಂದ್ರಬಿಂದು 15.66 ಅಕ್ಷಾಂಶ ಮತ್ತು 92.30 ರೇಖಾಂಶದಲ್ಲಿ 39 ಕಿ.ಮೀ ಆಳದಲ್ಲಿತ್ತು. ಮಾರ್ಚ್ 13 ರಂದು, ಭಾನುವಾರ ದ್ವೀಪಗಳಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ದಿಗ್ಲಿಪುರದ 25 ಕಿಮೀ ದೂರದಲ್ಲಿತ್ತು.

English summary
An earthquake of magnitude of 4.9 hit Andaman and Nicobar Islands at 7:02 am today(April 10): National Center for Seismology
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X