ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಥ್ ಡೇ ಸಂಭ್ರಮಾಚರಣೆ: ಭೂ ರಮೆಯನ್ನು ಪ್ರೀತಿಸಿ, ಉಳಿಸಿ

By Mahesh
|
Google Oneindia Kannada News

ಭೂ ರಮೆಯನ್ನು ಕೊಂಡಾಡಲು, ಜನರಲ್ಲಿ ಜಾಗೃತಿ ಮೂಡಿಸಲು 'ಅರ್ಥ್ ಡೇ' ಪ್ರತಿವರ್ಷದಂತೆ ಈ ವರ್ಷ ಕೂಡಾ ಏ.22ರಂದು ವಿಶ್ವದೆಲ್ಲೆಡೆ ಆಚರಣೆಗೊಳ್ಳುತ್ತಿದೆ. ಜಾಗತಿಕ ತಾಪಮಾನ ಏರಿಕೆ, ಹೆಚ್ಚುತ್ತಿರುವ ಇ ತ್ಯಾಜ್ಯ, ಪ್ರಕೃತಿ ವೈಪರಿತ್ಯಗಳ ನಡುವೆ ಅಳಿದುಳಿದಿರುವ ಭೂಮಿಯನ್ನು ಉಳಿಸಿಕೊಳ್ಳುವ ಹೊಣೆಯೊಂದಿಗೆ ಹಲವೆಡೆ ವಿಶ್ವ ಭೂ ದಿನದ ಸಂಭ್ರಮ ಕಂಡು ಬಂದಿದೆ.

ಅಮೆರಿಕದ ಸೆನೆಟರ್ ಗೆರಾಯ್ಡ್ ನೆಲ್ಸನ್ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ 'ವಿಶ್ವ ಭೂಮಿ ದಿನ' ಆರಂಭಿಸಿದರು.

ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ

ಹಲವು ವರ್ಷಗಳ ಕಾಲ ವಿಶ್ವ ಭೂ ದಿನವನ್ನು ಅಮೆರಿಕದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. 90 ರ ದಶಕದ ನಂತರ ವಿಶ್ವದ ಉಳಿದ ರಾಷ್ಟ್ರಗಳು ಭೂಮಿಯ ಮಹತ್ವವನ್ನು ಸಾರುತ್ತಾ, ಜನಜಾಗೃತ ಮಾಡಲು ಮುಂದಾಗಿವೆ.

ಇರುವೆ ಇಟ್ಕೊಂಡ್ರೆ ತಂಪು ತಂಪು ಕೂಲ್ಇರುವೆ ಇಟ್ಕೊಂಡ್ರೆ ತಂಪು ತಂಪು ಕೂಲ್

ಜಗತ್ತಿನ ಎಲ್ಲ ಸರಕಾರಗಳು, ವಾಣಿಜ್ಯ ಸಂಘಟನೆಗಳು ಹಾಗೂ ನಾಗರಿಕರು ಭೂ ಮಾತೆಯನ್ನು ಗೌರವದಿಂದ ಕಾಣಬೇಕು ಮತ್ತು ಆಕೆಯ ಬಗ್ಗೆ ಸೂಕ್ತ ಗಮನ ನೀಡಬೇಕು ಎಂದು ವಿಶ್ವಸಂಸ್ಥೆ ಸಂದೇಶ ಹೊರಡಿಸಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ವಿಶ್ವ ಭೂ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ಭೂಮಿಯನ್ನು ಆದರಿಸುವ ಈ ದಿನದ ಸಂಭ್ರಮಾಚರಣೆ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ವಿಶ್ವ ಭೂ ದಿನದ ಸಂಭ್ರಮ

ವಿಶ್ವ ಭೂ ದಿನದ ಸಂಭ್ರಮ

ವಿಶ್ವ ಭೂ ದಿನ ಒಂದು ದಿನದ ಆಚರಣೆಯಾಗದೆ ಪ್ರತಿದಿನದ ಹಬ್ಬವಾಗಬೇಕು. ನಾವು ವಾಸಿಸುವ ಪರಿಸರವನ್ನು ಪ್ರೀತಿಸಿದರೆ ಮಾತ್ರ ಚೆನ್ನಾಗಿಟ್ಟುಕೊಳ್ಳಲು ಸಾಧ್ಯ. ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ, ರಾಸಾಯನಿಕ ತ್ಯಾಜ್ಯಗಳಿಂದ ತುಂಬಿದ ಫಲವತ್ತಾದ ಭೂಮಿ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನಗಳ ನಡುವೆ ಕೂಡಾ ಸುಂದರ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯ ಮಾನವನಿಗಿದೆ.

ಬೆಂಗಳೂರಿಗರಿಗೆ ತ್ಯಾಜ್ಯ ನಿರ್ವಹಣೆಯ ಕಷ್ಟ

ಬೆಂಗಳೂರಿಗರಿಗೆ ತ್ಯಾಜ್ಯ ನಿರ್ವಹಣೆಯ ಕಷ್ಟ

ಬೆಂಗಳೂರಿಗರಿಗೆ ತ್ಯಾಜ್ಯ ನಿರ್ವಹಣೆಯ ಕಷ್ಟ ಸಾಮಾನ್ಯವಾಗಿ ಗೊತ್ತಿರುತ್ತೆ.ಘನ ತ್ಯಾಜ್ಯ, ಜಲ ತ್ಯಾಜ್ಯ, ಇ ಕಸ ಸೇರಿದಂತೆ ಹಲವು ರೀತಿ ಕಸ ಇರುತ್ತದೆ. ಮಕ್ಕಳಿಗೆ ಈ ಕಸ ಬೇರ್ಪಡಿಸುವ ಅವಶ್ಯಕತೆ, ಬೇರ್ಪಡಿಸುವ ರೀತಿ ಹೇಳಿಕೊಟ್ಟರೆ ಮನೆಯಲ್ಲಿ ಆಚರಿಸಬಹುದು. ಕೈಗ್ಲೌಸ್ ಹಾಕಿಕೊಂಡು ಸುರಕ್ಷಿತವಾಗಿ ಕಸವನ್ನು ಆಟದ ಮೈದಾನದಿಂದ ಹೊರ ಹಾಕುವುದನ್ನು ಕಲಿತರೆ ಮುಂದೆ ತ್ಯಾಜ್ಯ ನಿರ್ವಹಣೆ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಕಾಗದ ರಹಿತ ಕಚೇರಿಗಳು ಹೆಚ್ಚಾಗಲಿ

ಕಾಗದ ರಹಿತ ಕಚೇರಿಗಳು ಹೆಚ್ಚಾಗಲಿ, ಜನರು ಸ್ವಯಂ ಪ್ರೇರಿತರಾಗಿ ಪರಿಸರ ಉಳಿಸುವ ಕಾಯಕದಲ್ಲಿ ತೊಡಗಲಿ

ಗಂಗಾ ನದಿಯಂತೆ ಯಮುನೆಯನ್ನು ರಕ್ಷಿಸಿ

ದೆಹಲಿಯಿಂದ 22 ಕಿ.ಮೀ ದೂರದಲ್ಲೇ ಯಮುನಾ ನದಿ ಸಂಪೂರ್ಣ ಹಾಳಾಗಿದೆ. ಯಮುನಾ ನದಿ ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮಾಮಿ ಗಂಗೆ ಯೋಜನೆಯಂತೆ ಯಮುನಾ ನದಿ ರಕ್ಷಿಸಿ ಎಂದು ಪ್ರಧಾನಿಗೆ ಟ್ವೀಟ್.

ನಮಗೆಲ್ಲರಿಗೂ ಇರುವುದೊಂದೆ

ನಮಗೆಲ್ಲರಿಗೂ ಇರುವುದೊಂದೆ ಭೂಮಿ, ಭೂಮಿ ತಾಯಿಯನು ರಕ್ಷಿಣಿ, ಉಳಿಸಲು ಇದು ಸಕಾಲ. ಇಂದು ಭೂಮಿಯನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಕಷ್ಟ.

English summary
Earth Day celebrated across the world. Take time out today and honour the Earth as we celebrate Earth Day today. Stop for a while take a look around, evaluate and see what wrongs have you done and what rights can you do to make Earth a better place to live in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X