ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಸಿಕೆ: ನಿರ್ವಹಣೆಗೆ ನೂರೆಂಟು ಸವಾಲು

|
Google Oneindia Kannada News

ಬೆಂಗಳೂರು, ಜನವರಿ 11: ದೇಶಾದ್ಯಂತ ಮೊದಲ ಹಂತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಜನವರಿ 16ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲಭ್ಯವಿರುವ ಕೋವಿಡ್ ಲಸಿಕೆಗಳನ್ನು ಈಗಾಗಲೇ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡುವ ಕಾರ್ಯ ಆರಂಭಿಸಲಾಗುತ್ತಿದೆ.

ಪ್ರತಿ ಬಾಟಲಿಯಲ್ಲಿಯೂ ಹತ್ತು ಡೋಸ್‌ಗಳಷ್ಟು ಲಸಿಕೆ ಇರಲಿದೆ ಎಂದು ಅಂದಾಜಿಸಲಾಗಿದೆ. ಬಾಟಲಿ ತೆರೆದ ನಾಲ್ಕು ಗಂಟೆಯೊಳಗೆ ಆ ಡೋಸ್‌ಗಳನ್ನು ಬಳಸಬೇಕು. ಇಲ್ಲದಿದ್ದರೆ ಅವು ವ್ಯರ್ಥವಾಗಲಿವೆ.

ಕೊರೊನಾ ಲಸಿಕೆ ವಿಚಾರ: ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಸಭೆಕೊರೊನಾ ಲಸಿಕೆ ವಿಚಾರ: ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಸಭೆ

ಸಾಮಾನ್ಯವಾಗಿ ಲಸಿಕೆ ಬಾಟಲಿಗಳನ್ನು ತೆರೆದ ಬಳಿಕವೂ ಅವುಗಳನ್ನು ಸುದೀರ್ಘ ಸಮಯದವರೆಗೆ ಸಂಗ್ರಹಿಸಿಡಲು ಅನುಕೂಲವಾಗುವಂತಹ ವ್ಯಾಕ್ಸಿನ್ ವಿಯಲ್ ಮಾನಿಟರ್ಸ್ (ವಿವಿಎಂ) ಎಂಬ ವ್ಯವಸ್ಥೆ ಇದೆ. ಆದರೆ ಈ ಸೋಂಕಿನ ಪಿಡುಗಿನ ಸಂದರ್ಭದಲ್ಲಿ ತೆರೆದ ಲಸಿಕೆ ಬಾಟಲಿಗಳ ನಿರ್ವಹಣೆಯನ್ನು ನಡೆಸಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಕೋವಿಡ್ ಲಸಿಕೆಗಳನ್ನು ಒಮ್ಮೆ ತೆರೆದ ಬಳಿಕ ಹೆಚ್ಚು ಸಮಯ ಇರಿಸಲು ಸಾಧ್ಯವಾಗುವುದಿಲ್ಲ.

ಸಾರ್ವತ್ರಿಕ ಪ್ರತಿರಕ್ಷಣಾ ಕಾರ್ಯಕ್ರಮ (ಯುಐಪಿ) ಅಡಿಯಲ್ಲಿ ಕೆಲವು ಲಸಿಕೆಗಳನ್ನು ಮೊದಲ ಬಾರಿ ತೆರೆದ ಬಳಿಕ ನಾಲ್ಕು ವಾರಗಳವರೆಗೂ ಬಳಸಲು ಅವಕಾಶವಿರುತ್ತದೆ. ಆದರೆ ಇದು ವಿವಿಎಂಗಳಿಲ್ಲದೆ ಸಾಧ್ಯವಿಲ್ಲ. ಸಂಗ್ರಹಣಾ ಉಷ್ಣಾಂಶದ ಮೇಲೆ ನಿಗಾವಹಿಸುವಲ್ಲಿ ವಿವಿಎಂಗಳು ಪ್ರಮುಖ ಪಾತ್ರ ವಹಿಸುತ್ತವೆ. ಲಸಿಕೆ ಬಾಟಲಿಗಳ ಸಮರ್ಪಕ ಸಂಗ್ರಹಣೆ ಮತ್ತು ಸಾಗಾಣಿಕೆಯಲ್ಲಿ ಸಹಕಾರಿಯಾಗಿದೆ. ಮುಂದೆ ಓದಿ.

ಶೀತಲೀಕೃತ ವ್ಯವಸ್ಥೆ ಪಾತ್ರ ಹೆಚ್ಚು

ಶೀತಲೀಕೃತ ವ್ಯವಸ್ಥೆ ಪಾತ್ರ ಹೆಚ್ಚು

'ವಿವಿಎಂಗಳು ಇಲ್ಲದಿರುವುದರಿಂದ ಮತ್ತು ಲಸಿಕೆಗಳ ಬಾಟಲಿಗಳ ಎಕ್ಸ್‌ಪೈರಿ ದಿನಾಂಕ ಕೂಡ ಕಡಿಮೆ ಇರುವುದರಿಂದ ಕೋಲ್ಡ್ ಚೈನ್ ನಿರ್ವಹಣೆ ಅತಿ ಪ್ರಾಮುಖ್ಯವಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಬಾಟಲಿ ನಾಶಪಡಿಸಬೇಕು

ಬಾಟಲಿ ನಾಶಪಡಿಸಬೇಕು

'ತೆರೆದ ಬಾಟಲಿ ನೀತಿಯು ಇಲ್ಲಿ ಅನ್ವಯವಾಗುವುದಿಲ್ಲ. ಹೀಗಾಗಿ ಬಾಟಲಿಯನ್ನು ತೆರೆದ ದಿನಾಂಕ ಮತ್ತು ಸಮಯವನ್ನು ಲಸಿಕೆ ನೀಡುವ ಅಧಿಕಾರಿಗಳು ನಮೂದಿಸಬೇಕು. ಎಲ್ಲ ತೆರೆದ ಬಾಟಲಿಗಳನ್ನೂ ಅವುಗಳನ್ನು ತೆರೆದ ನಾಲ್ಕು ಗಂಟೆಗಳು ಬಳಿಕ ಅಥವಾ ಲಸಿಕೆ ಕಾರ್ಯಕ್ರಮ ಮುಗಿದ ಬಳಿಕ ನಾಶಗೊಳಿಸಬೇಕು' ಎಂದು ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಹೇಳಿದೆ.

ಕೊರೊನಾ ಲಸಿಕೆ ಪಡೆದ ಬ್ರಿಟಿನ್ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್ಕೊರೊನಾ ಲಸಿಕೆ ಪಡೆದ ಬ್ರಿಟಿನ್ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್

ಮೇಲ್ವಿಚಾರಕರ ಹೊಣೆ

ಮೇಲ್ವಿಚಾರಕರ ಹೊಣೆ

ಪ್ರತಿ ಲಸಿಕೆ ನೀಡುವ ಸ್ಥಳದಲ್ಲಿಯೂ ಮೇಲ್ವಿಚಾರಕರು ಲಸಿಕೆಗಳನ್ನು ಇರಿಸಿರುವ ಉಷ್ಣತೆಯನ್ನು ಸೂಕ್ತ ರೀತಿಯಲ್ಲಿ ಕಾಪಾಡಲಾಗುತ್ತಿದೆ ಹಾಗೂ ಅವುಗಳನ್ನು ಸಮರ್ಪಕವಾಗಿ ದಾಖಲೀಕರಣ ಮಾಡಲಾಗುತ್ತಿದೆ ಎಂಬುದನ್ನು ಖಾತರಿಪಡಿಸಬೇಕು ಎಂದು ಮಾರ್ಗಸೂಚಿ ನಿರ್ದೇಶನ ನೀಡಿದೆ.

ದಿನಕ್ಕೆ ನೂರು ಮಂದಿಗೆ ಮಾತ್ರ ಲಸಿಕೆ

ದಿನಕ್ಕೆ ನೂರು ಮಂದಿಗೆ ಮಾತ್ರ ಲಸಿಕೆ

ಲಸಿಕೆಗಳನ್ನು ಸಂರಕ್ಷಿಸಿಡಲು ವಿವಿಎಂ ವ್ಯವಸ್ಥೆ ಲಭ್ಯವಿಲ್ಲದ ಕಾರಣ ಮತ್ತು ಒಂದು ಬಾಟಲಿಯ ಲಸಿಕೆಯನ್ನು ಒಮ್ಮೆ ತೆರೆದ ಬಳಿಕ 4 ಗಂಟೆಯ ನಂತರ ಬಳಸುವಂತಿಲ್ಲವಾದ್ದರಿಂದ ಲಸಿಕೆಗಳ ವ್ಯರ್ಥವಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಒಂದು ಸ್ಥಳದಲ್ಲಿ ದಿನಕ್ಕೆ ಕೇವಲ 100 ಮಂದಿಗೆ ಮಾತ್ರ ಲಸಿಕೆ ನೀಡುವಂತೆ ಕೂಡ ಮಾರ್ಗಸೂಚಿ ತಿಳಿಸಿದೆ. ಹೀಗಾಗಿ ಈ ಕಾರ್ಯಕ್ರಮವು ಇದುವರೆಗೆ ನಡೆಯುತ್ತಿದ್ದ ಲಸಿಕೆ ಕಾರ್ಯಕ್ರಮಗಳಿಗಿಂತ ವಿಭಿನ್ನ. ಲಸಿಕೆ ಪಡೆಯುವ ವ್ಯಕ್ತಿಗಳಿಗೆ ಮುಂಚೆಯೇ ಮಾಹಿತಿ ನೀಡಲಾಗಿರುತ್ತದೆ. ನೋಂದಾಯಿಸಿದ ವ್ಯಕ್ತಿಗಳಿಗೆ ಅವರಿಗೆ ನಿಗದಿಪಡಿಸಿರುವ ದಿನದಂದೇ ಲಸಿಕೆ ನೀಡಲಾಗುತ್ತದೆ.

English summary
Covid-19 vaccines are containing 10 doses for each vial and must be used within 4 hours of opening as there is no VVMs available.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X