ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಧೂಮಪಾನಿಗಳಿಗೆ ಕಹಿ ಸುದ್ದಿ

|
Google Oneindia Kannada News

ನವದೆಹಲಿ, ಜುಲೈ 04 : ನಿಕೋಟಿನ್ ಸೇವನೆ ಮೇಲೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲಾ ಬಗೆಯ ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ ನಿಷೇಧ ಹೇರಲು ಮೋದಿ ಸರ್ಕಾರ ಆದೇಶ ಹೊರಡಿಸಲಿದೆ.

ಎಲೆಕ್ಟ್ರೋನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ENDS) ಮೂಲಕ ಸಿಗುವ ನಿಕೋಟಿನ್ ಸೇವನೆ ಸಾಧನಗಳನ್ನು ನಿಷೇಧಿಸುವಂತೆ ಆರೋಗ್ಯ ಇಲಾಖೆ ಈಗಾಗಲೇ ಶಿಫಾರಸು ಕಳಿಸಿದೆ. ಇದನ್ನು ಪರಿಗಣಿಸಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ ಮಂಡನೆ ವೇಳೆ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

ತಂಬಾಕು ಎಲೆಗಳನ್ನು ಸಂಪೂರ್ಣವಾಗಿ ಸುಡದೆ ಬಿಸಿ ಮುಟ್ಟಿಸಿ, ದ್ರವ ರೂಪದ ನಿಕೋಟಿನ್ ಅವಿಯನ್ನು ಸೇವಿಸುವ ಸಾಧನಗಳು ಹೆಚ್ಚು ಜನಪ್ರಿಯವಾಗಿವೆ. ಇಂಥ ಸಾಧನಗಳಿಗೆ ಯಾವುದೆ ಲೈಸನ್ಸ್ ಇಲ್ಲ, ಯುವ ಜನಾಂಗದ ದಿಕ್ಕು ತಪ್ಪಿಸಲಾಗುತ್ತಿದೆ, ಸುಮಾರು 460ಕ್ಕೂ ಅಧಿಕ ಇ ಸಿಗರೇಟು ಬ್ರ್ಯಾಂಡ್ ಗಳು ಭಾರತದಲ್ಲಿವೆ. ಸರಿ ಸುಮಾರು 7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯವಿದೆ.

E -cigarettes are set to be banned in India on the grounds that they are “drugs.

ನಿಷೇಧ ಸಾಧ್ಯವೇ? : ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನ ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರವು ಈ ಉತ್ಪನ್ನಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಮಾರಾಟದಲ್ಲಿ ನಿಯಂತ್ರಣ ಸಾಧಿಸಬಹುದು ಅಷ್ಟೇ. ಕಾನೂನಿನ ತೊಡಕಿನ ನಡುವೆ ಇ ಸಿಗರೇಟು ಮೇಲೆ ನಿಷೇಧ ಹೇರಲು ಸರ್ಕಾರ ಮುಂದಾಗಿದೆ.

ಇ ಸಿಗರೇಟು ಉತ್ಪನ್ನಗಳನ್ನು ಡ್ರಗ್ಸ್ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆ 1940(ಡಿಸಿಎ) ಸೆಕ್ಷನ್ 3 (ಬಿ) ಅಡಿಯಲ್ಲಿ ತರಲು ಸಾಧ್ಯವಾಗಿಲ್ಲ. ಸೆಕ್ಷನ್ 26 (ಎ) ಅಡಿಯಲ್ಲಿ ನಿಷೇಧಕ್ಕೆ ಯತ್ನಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್, ಹರ್ಯಾಣ ಹಾಗೂ ಚಂಡೀಗಢದಲ್ಲಿ ಮಾತ್ರ ಇ ಸಿಗರೇಟ್, ಇ-ಶೀಶಾ, ಇ ನಿಕೋಟಿನ್, ಪರಿಮಳ ಭರಿತ ಹುಕ್ಕಾ ಎಲ್ಲದರ ಮೇಲೆ ನಿಷೇಧವಿದೆ.

English summary
Recognizing their harmful effects, the health ministry has decided to ban the nicotine inhalers, also known as electronic nicotine delivery systems (ENDS), that are popular among smokers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X