ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.10 ರಷ್ಟು ಉದ್ಯೋಗಿಗಳನ್ನು ಮನೆಗೆ ಕಳಿಸಿದ ಇಂಡಿಗೋ ಸಂಸ್ಥೆ

|
Google Oneindia Kannada News

ನವದೆಹಲಿ, ಜುಲೈ 20: ಕೊರೊನಾ ಲಾಕ್‌ಡೌನ್ ವಿಧಿಸಿದಾಗಿನಿಂದಲೂ ಎಲ್ಲಾ ವಿಮಾನಯಾನ ಸಂಸ್ಥೆಗಳು ಸಂಕಷ್ಟಕ್ಕೆ ಒಳಗಾಗಿವೆ.

ಕೆಲವು ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ, ಇನ್ನು ಕೆಲವು ಸಂಸ್ಥೆಗಳು ಸಂಬಳವನ್ನು ಕಡಿತಗೊಳಿಸಿವೆ, ಇನ್ನೂ ಕೆಲವು 6 ತಿಂಗಳಿನಿಂದ 5 ವರ್ಷದವರೆಗೂ ವೇತನ ರಹಿತ ರಜೆಯ ಮೇಲೆ ಕಳುಹಿಸಿದೆ.

ಅಮೆರಿಕಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾಅಮೆರಿಕಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ

ಇದೀಗ ಇಂಡಿಗೋ ವಿಮಾನಯಾನ ಸಂಸ್ಥೆ ಕೊರೊನಾ ನಷ್ಟವನ್ನು ಮುಂದಿಟ್ಟುಕೊಂಡು ತನ್ನ ಶೇ.10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.

Due To Poor Revenue IndiGo Airlines Announces to Lay Off 10 Per Cent of Its Work Force

ಎಲ್ಲವೂ ಸರಿಯಾಗುವವರೆಗೂ ವೇತನ ನೀಡುವುದು ಕಷ್ಟ ಎಂದು ಸಂಸ್ಥೆ ಹೇಳಿದೆ. ಸಂಸ್ಥೆಯನ್ನು ಉಳಿಸಿಕೊಳ್ಳಲು ಸಿಬ್ಬಂದಿಯನ್ನು ಕಳೆದುಕೊಳ್ಳಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದತ್ತಾ ತಿಳಿಸಿದ್ದಾರೆ.

ಇಂಡಿಗೋ ಸಂಸ್ಥೆಯ ಇತಿಹಾಸದನಲ್ಲೇ ಮೊದಲ ಬಾರಿಗೆ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡು ಸಿಬ್ಬಂದಿಗೆ ನೋವುಂಟು ಮಾಡಲಾಗುತ್ತಿದೆ.ದೇಶೀಯ ವಿಮಾನ ಸೇವೆಯನ್ನು ಹೊರತುಪಡಿಸಿ ಕೆಲವೇ ಕೆಲವು ವಿಮಾನಗಳು ವಂದೇ ಭಾರತ್ ಯೋಜನೆಯಡಿ ವಿದೇಶಕ್ಕೆ ಕಾರ್ಯಚರಿಸುತ್ತಿವೆ.

ಕಾರ್ಗೋ ಆಪರೇಷನ್‌ಗಾಗಿ ಇಂಡಿಗೋ 10 ವಿಮಾನಗಳನ್ನು ಸಿದ್ಧವಿರಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾವು ತನ್ನ ಕೆಲವು ಸಿಬ್ಬಂದಿಗೆ ಆರು ತಿಂಗಳಿನಿಂದ ಐದು ವರ್ಷಗಳ ವರೆಗೆ ವೇತನ ರಹಿತ ರಜೆಯನ್ನು ನೀಡಿತ್ತು.

English summary
IndiGo CEO has confirmed that the company is planning to lay off 10 per cent of the workforce amid losses incurred due to low demand during the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X