ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳ್ಳೆ ಸುದ್ದಿ: ಹಳ್ಳಿಯಿಂದ ಆಸ್ಪತ್ರೆಗೆ ಡ್ರೋಣ್ ಮೂಲಕ ಬಂದ ರಕ್ತ

|
Google Oneindia Kannada News

ಡೆಹ್ರಾಡೂನ್, ಜೂನ್ 8: ಮೊದಲ ಬಾರಿಗೆ ಡ್ರೋಣ್ ಮೂಲಕ ಒಂದು ಹಳ್ಳಿಯಿಂದ ಜಿಲ್ಲಾಸ್ಪತ್ರೆಗೆ ರಕ್ತವನ್ನು ಕಳುಹಿಸುವ ಪ್ರಯೋಗ ಯಶಸ್ವಿಯಾಗಿದೆ.

ದೊಡ್ಡ ದೊಡ್ಡ ನಗರಗಳಲ್ಲಿರುವ ಆಸ್ಪತ್ರೆಗಳಲ್ಲಿ ಎಲ್ಲಾ ಗುಂಪಿನ ರಕ್ತ ಸ್ಟಾಕ್ ಇರುತ್ತದೆ. ಆದರೆ ಜಿಲ್ಲಾಸ್ಪತ್ರೆಗಳು ಏನು ಮಾಡಬೇಕು ಎನ್ನುವುದೇ ಚಿಂತೆಯ ವಿಷಯವಾಗಿತ್ತು.

ತುರ್ತು ಸಮಯದಲ್ಲಿ ರಕ್ತ ಬೇಕು ಎಂದರೆ ಎಲ್ಲಿಂದ ತರುವುದು ಎನ್ನುವುದು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೋಗಿಯ ಕಡೆಯವರಿಗೂ ದೊಡ್ಡ ಚಿಂತೆಯಾಗಿತ್ತು.

Drone supplies blood from village to Hospital for the first time

ಆಪರೇಷನ್ ಇದೆ ಎಂದರೆ ಒಂದು ವಾರ ಮುಂಚೆಯೇ ರಕ್ತವನ್ನು ಶೇಖರಿಸಿಟ್ಟುಕೊಳ್ಳಬೇಕಿತ್ತು. ಇದೀಗ ಒಂದು ಹಳ್ಳಿಯಿಂದ ಡ್ರೋನ್ ಮೂಲಕ ಆಸ್ಪತ್ರೆಗೆ ರಕ್ತವನ್ನು ಕಳುಹಿಸಬಹುದು ಎಂದು ಸಾಬೀತಾಗಿದೆ.

ಹಾಗಾದರೆ ಆಸ್ಪತ್ರೆಯಿಂದಲೂ ರಕ್ತವನ್ನು ಹಳ್ಳಿಗೆ ರವಾನಿಸುವ ಸಾಧ್ಯತೆಯೂ ಇದೆ ಎಂಬುದು ಕೂಡ ಇದರಿಂದ ತಿಳಿದುಬರುತ್ತದೆ. ಈ ಪ್ರಯೋಗ ದೇಶದ ವಿವಿಧ ರಾಜ್ಯ, ಜಿಲ್ಲೆಗಳಲ್ಲೂ ನಡೆದರೆ ಎಷ್ಟೋ ಪ್ರಾಣವನ್ನು ರಕ್ಷಿಸಬಹುದಾಗಿದೆ.

ನಂದಗಾವ್‌ನಿಂದ ಬೂರಿ ಆಸ್ಪತ್ರೆಗೆ 36 ಕಿಮೀ ವ್ಯಾಪ್ತಿಯನ್ನು 18 ನಿಮಿಷದಲ್ಲಿ ಕ್ರಮಿಸಿದೆ. ರಸ್ತೆಯಿಂದ ಚಲಿಸಿದರೆ 100 ನಿಮಿಷಗಳು ಕನಿಷ್ಠ ಬೇಕಾಗುತ್ತದೆ.

ಒಂದೊಮ್ಮೆ ರಸ್ತೆಯ ಮೂಲಕ ತೆರಳಿದರೆ ವಾಹನ ದಟ್ಟಣೆ ಉಂಟಾಗಬಹುದು, ಅಥವಾ ಅಪಘಾತವೇ ನಡೆಯಬಹುದು ಅಥವಾ ಇನ್ಯಾವುದೇ ತೊಂದರೆ ಉಂಟಾಗಬಹುದು. ಆದರೆ ಡ್ರೋಣ್ ಮೂಲಕ ಕಳುಹಿಸುವುದರಿಂದ ಯಾವುದೇ ಅಡೆತಡೆಗಳು ಇರುವುದಿಲ್ಲ ಹಾಗೂ ಸಮಯ ಕೂಡ ಉಳಿತಾಯವಾಗುತ್ತದೆ.

ಸಾಕಷ್ಟು ಗ್ರಾಮಗಳಲ್ಲಿ ಸಂಚಾರಕ್ಕೆ ವಾಹನಗಳೇ ಇಲ್ಲ, ಆಸ್ಪತ್ರೆಗೆ ತೆರಳಬೇಕೆಂದರೂ ಎಷ್ಟೋ ಕಿಲೋಮೀಟರ್ ನಡೆದು ವಾಹನಗಳಲ್ಲಿ ಹೋಗಬೇಕಾದ ಪರಿಸ್ಥಿತಿ ಇದೆ. ಟೆಲಿ ಮೆಡಿಸಿನ್ ಯೋಜನೆ ಅಂಗವಾಗಿ ಈ ನೂತನ ಪ್ರಯೋಗವನ್ನು ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

English summary
For the First time Drone supplies blood to hospital in uttarakhand from remote village.unmanned aerial vehicle (UAV) in a first-ofits-kind experiment transported blood samples for over 36 kilometres from a remote primary health centre in Tehri district of Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X