ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೋನ್ ಬಳಕೆಗೆ ಬಂತು ಕೇಂದ್ರ ಸರಕಾರದ ನೀತಿ, ಅದರಲ್ಲಿ ಏನೈತಿ?

|
Google Oneindia Kannada News

ಡ್ರೋನ್ ಮೂಲಕ ಪಿಜ್ಜಾ ಡೆಲಿವರಿ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಇ ಕಾಮರ್ಸ್ ಕಂಪೆನಿಗಳು ಉತ್ಪನ್ನಗಳೂ ಅವುಗಳಲ್ಲೇ ಮನೆಗೆ ಬರುತ್ತದೆ ನೋಡ್ತಿರಿ ಎಂದು ಮಾತನಾಡುತ್ತಿದ್ದವರು ಅದಕ್ಕಾಗಿ ಇನ್ನೂ ಸ್ವಲ್ಪ ಕಾಲ ಕಾಯ

ಲೇ ಬೇಕಿದೆ. ವಿಮಾನಯಾನ ಸಚಿವಾಲಯವು ಸೋಮವಾರದಂದು ಡ್ರೋನ್ ನೀತಿ ಬಗ್ಗೆ ಮಾರ್ಗದರ್ಶಿ ಸೂತ್ರ ವಿತರಿಸಿದೆ.

ಕೊಡಗಿನ ಜನರ ರಕ್ಷಣೆಗೆ ಬೆಂಗಳೂರು ಹುಡುಗರ ಡ್ರೋನ್ಕೊಡಗಿನ ಜನರ ರಕ್ಷಣೆಗೆ ಬೆಂಗಳೂರು ಹುಡುಗರ ಡ್ರೋನ್

ಆ ಪ್ರಕಾರವಾಗಿ ಕೆಲವು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ, ಡ್ರೋನ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡುವ ಪ್ರಸ್ತಾವ ಮಾಡಿದೆ. ಅದಕ್ಕಾದರೂ ಈ ವರ್ಷ ಡಿಸೆಂಬರ್ ತನಕ ಕಾಯಬೇಕು. ಈಗ ಮಾಡಿರುವ ನಿಯಮಗಳ ಪ್ರಸ್ತಾವವು ಮುಂಬರುವ ದಿನಗಳಲ್ಲಿ ಸಡಿಲಗೊಳ್ಳುವ ಬಗ್ಗೆ ಕೂಡ ಸರಕಾರ ಹೇಳಿದೆ.

Drone policy issued by central government, whats that?

ಡ್ರೋನ್ ಗಳನ್ನು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅದು ಕೂಡ ಅವುಗಳ ತೂಕದ ಆಧಾರದಲ್ಲಿ. ಆ ತೂಕಗಳಲ್ಲೇ ಅತ್ಯಂತ ಕಡಿಮೆ ಅಂದರೆ 250 ಗ್ರಾಮ್ ತೂಕದ್ದಾದರೆ, ಅತಿ ಭಾರದ್ದು ಅಂದರೆ 150 ಕೇಜಿ. ಮೊದಲ ಎರಡು ವಿಭಾಗಗಳನ್ನು ಹೊರತುಪಡಿಸಿ, ಅಂದರೆ 250 ಗ್ರಾಮ್ ಹಾಗೂ 2 ಕೇಜಿ ತೂಕದ್ದು (ಇವೆರಡನ್ನು ಮಕ್ಕಳು ಆಟಿಕೆ ರೀತಿ ಬಳಸಬಹುದು) ಬಿಟ್ಟು ಉಳಿದವನ್ನು ನೋಂದಣಿ ಮಾಡಿಸಲೇ ಬೇಕು.

ಅವುಗಳಿಗೆ ಯೂನಿಕ್ ಐಡೆಂಟಿಫಿಕೇಷನ್ ನಂಬರ್ (ಯುಐಎನ್) ನೀಡಲಾಗುತ್ತದೆ. ಡ್ರೋನ್ ಗೆ ಪರವಾನಗಿ ಕೇಳುವವರು ಹದಿನೆಂಟು ವರ್ಷ ಮೇಲ್ಪಟ್ಟಿರಬೇಕು. ಕನಿಷ್ಠ ಹತ್ತನೇ ತರಗತಿ ಪಾಸಾಗಿ, ಇಂಗ್ಲಿಷ್ ಭಾಷಾ ಜ್ಞಾನ ಇರಬೇಕು. ಇನ್ನು ಕೆಲವು ಪ್ರದೇಶಗಳಲ್ಲಿ ಡ್ರೋನ್ ಹಾರಾಟ ನಿಷೇಧ ಪ್ರದೇಶ ಎಂದು ಗುರುತಿಸಿ, ಅಲ್ಲಿ ಡ್ರೋನ್ ಹಾರಾಟ ನಡೆಸುವಂತಿಲ್ಲ ಎಂಬ ನಿಯಮ ಮಾಡಲಾಗುವುದು.

"ಡ್ರೋನ್" ಬಳಸಿ ಬೆಳೆ ಪರಿಸ್ಥಿತಿ ಸರ್ವೆ : ಸಚಿವ ಶಿವಶಂಕರರೆಡ್ಡಿ

ಸದ್ಯಕ್ಕೆ ಡ್ರೋನ್ ಅನ್ನು ಕಣ್ಣಿಗೆ ಕಾಣುವಷ್ಟು ದೂರದವರೆಗೆ ಮಾತ್ರ ಬಳಸಲು ಅವಕಾಶ ನೀಡುತ್ತೇವೆ. ಆ ನಂತರ ಕಾರ್ಯಪಡೆಯೊಂದನ್ನು ರಚಿಸಲಾಗುವುದು. ಅದರ ಮೂಲಕ ದೂರದ ಪ್ರದೇಶಗಳಿಗೂ ಡ್ರೋನ್ ಬಳಕೆ ಮಾಡುವ ಬಗ್ಗೆ ಅಧ್ಯಯನ ನಡೆಸುತ್ತದೆ ಎಂದು ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

English summary
Central government issued drone policy on Monday. Here is the details of the policy proposed by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X