ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್, ಆರ್ಸಿಯನ್ನು ಸ್ವೀಕರಿಸಲು ಆದೇಶ

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಇನ್ನು ಮುಂದೆ ಟ್ರಾಫಿಕ್ ಪೊಲೀಸ್ ಕೇಳಿದಾಗ ವಾಹನ ಚಾಲನಾ ಪರವಾನಗಿಯಾಗಲಿ, ನೋಂದಣಿ ಪತ್ರವನ್ನಾಗಲಿ ಕಾಗದ ರೂಪದಲ್ಲಿ ತೋರಿಸುವ ಬದಲು ನಮ್ಮ ಮೊಬೈಲಿನಲ್ಲಿಯೇ ಡಿಜಿಟಲ್ ರೂಪದಲ್ಲಿ ತೋರಿಸಬಹುದು.

ಈ ಡಿಜಿಟಲ್ ದಾಖಲೆಗಳನ್ನು ಪರಿಗಣಿಸುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಆದೇಶ ನೀಡಿದೆ. ಮೇಲೆ ತಿಳಿಸಿದ ಎರಡು ದಾಖಲೆಗಳು ಮಾತ್ರವಲ್ಲ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮುಂತಾದ ದಾಖಲೆಗಳನ್ನು ಡಿಜಿಲಾಕರ್ ಅಥವಾ ಎಂಪರಿವರ್ತನ್ ಆಪ್ ನಲ್ಲಿ ಕೂಡಿಟ್ಟುಕೊಂಡು ಅಗತ್ಯ ಬಿದ್ದಾಗ ತೋರಿಸಬಹುದು.

ಡಿಎಲ್ ಪಡೆಯಲು ಇನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಡಿಎಲ್ ಪಡೆಯಲು ಇನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

ರಸ್ತೆ ಸಾರಿಗೆ ಮತ್ತು ಹೆದ್ದಾಗಿ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದ್ದು, ಡ್ರೈವಿಂಗ್ ಲೆಸೆನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಮುಂತಾದವುಗಳನ್ನು ಡಿಜಿಲಾಕರ್ ಆಪ್ ಮೂಲಕ ಪ್ರಸ್ತುತಪಡಿಸುವುದು ಮೋಟರ್ ವೆಹಿಕಲ್ ಆಕ್ಟ್ 1988 ಅಡಿಯಲ್ಲಿ, ಸಾರಿಗೆ ಅಧಿಕಾರಿಗಳು ನೀಡಿರುವ ದಾಖಲೆಗಳಷ್ಟೇ ಸ್ವೀಕಾರಾರ್ಹವಾಗಿದೆ ಎಂದು ಸ್ಪಷ್ಟಪಡಿಸಿದೆ.

ಡಿಜಿಲಾಕರ್ ಅಥವಾ ಎಂಪರಿವರ್ತನ್ ಆಪ್

ಡಿಜಿಲಾಕರ್ ಅಥವಾ ಎಂಪರಿವರ್ತನ್ ಆಪ್

ಡಿಜಿಲಾಕರ್ ಅಥವಾ ಎಂಪರಿವರ್ತನ್ ಆಪ್ ಗಳಲ್ಲಿ ಕೂಡಿಟ್ಟ ದಾಖಲೆಗಳನ್ನು ಟ್ರಾಫಿಕ್ ಪೊಲೀಸರು ಅಥವಾ ಆರ್ಟಿಓ ಅಧಿಕಾರಿಗಳು ಪರಿಗಣಿಸುತ್ತಿಲ್ಲ ಎಂಬ ಬಗ್ಗೆ ಹಲವಾರು ದೂರುಗಳು ಮತ್ತು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮವನ್ನು ತೆಗೆದುಕೊಂಡಿದೆ.

ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಿಜಿಲಾಕರ್ ಆಪ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಂಪರಿವರ್ತನ್ ಆಪ್ ಗಳಲ್ಲಿ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮುಂತಾದ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸ್ಟೋರ್ ಮಾಡಲು ಅವಕಾಶ ನೀಡಲಾಗಿದೆ. ಇವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ ಮೂಲರೂಪದ ದಾಖಲೆಗಳಷ್ಟೇ ಸಮಾನವಾಗಿವೆ.

ಡಿಜಿ ಲಾಕರ್ ಗೆ ಅಧಿಕೃತ ಮಾನ್ಯತೆ: ಡಿಎಲ್, ಆರ್‌ಸಿ ಆ್ಯಪ್ ನಲ್ಲೇ ಲಭ್ಯ ಡಿಜಿ ಲಾಕರ್ ಗೆ ಅಧಿಕೃತ ಮಾನ್ಯತೆ: ಡಿಎಲ್, ಆರ್‌ಸಿ ಆ್ಯಪ್ ನಲ್ಲೇ ಲಭ್ಯ

ಹೊಸ ವಾಹನಗಳ ವಿಮೆ ಮತ್ತು ಹಳೆ ವಾಹನಗಳ ವಿಮಾ ನವೀಕರಣ

ಹೊಸ ವಾಹನಗಳ ವಿಮೆ ಮತ್ತು ಹಳೆ ವಾಹನಗಳ ವಿಮಾ ನವೀಕರಣ

ಇದರ ಜೊತೆಗೆ, ಹೊಸ ವಾಹನಗಳ ವಿಮೆ ಮತ್ತು ಹಳೆ ವಾಹನಗಳ ವಿಮಾ ನವೀಕರಣ ದಾಖಲೆಗಳನ್ನು ಕೂಡ ವಿಮಾ ಮಾಹಿತಿ ಮಂಡಳಿ ವಾಹನ್ ಡೇಟಾಬೇಸ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಂಪರಿವರ್ತನ್ ಅಥವಾ ಈಚಲನ್ ಆಪ್ ನಲ್ಲಿ ಈ ದಾಖಲೆಗಳಲ್ಲಿ ಕೂಡ ಅಪ್ಲೋಡ್ ಆಗುತ್ತಿವೆ. ಎಂಪರಿವರ್ತನ್ ಅಥವಾ ಈಚಲನ್ ಆಪ್ ಗಳಲ್ಲಿ ವಿಮಾ ದಾಖಲಾತಿಗಳು ಇದ್ದರೆ ಮೂಲ ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.

ಸೌದಿ ಅರೇಬಿಯಾದ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸಸೌದಿ ಅರೇಬಿಯಾದ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸ

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ

ಆದರೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಾದ ಸಂದರ್ಭ ಬಂದಾಗ ಹೇಗೆ ವಶಪಡಿಸಿಕೊಳ್ಳುವುದು? ಇದಕ್ಕೂ ಇಲ್ಲಿ ಪರಿಹಾರವಿದೆ. ಈಚಲನ್ ವ್ಯವಸ್ಥೆಯ ಮೂಲಕ ಈ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಿದೆ. ಹೀಗೆ ವಶಪಡಿಸಿಕೊಂಡಿದ್ದು ವಾಹನ್ ಡೇಟಾಬೇಸ್ ನಲ್ಲಿ ದಾಖಲಾಗಲಿದೆ.

English summary
Driving license or RC book or any other important documents like Aadhaar, PAN are accepted by concerned authorities in digital form. Ministry of Road Transport and Highway has issued directions to all states to accept these digital documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X