ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಸುಭಾಷ್ ಚಂದ್ರ ಬೋಸ್ ರ ವಾಹನ ಚಾಲಕ ನಿಧನ

By Ananthanag
|
Google Oneindia Kannada News

ಅಜಾಂಘರ್( ಉತ್ತರ ಪ್ರದೇಶ), ಫೆಬ್ರವರಿ 7: ನೇತಾಜಿ ಸುಭಾಷ್ ಚಂದ್ರ ಬೋಸ್ ವಾಹನ ಚಾಲಕರಾಗಿದ್ದ ಕರ್ನಲ್ ನಿಜಾಮುದ್ದೀನ್ ಅವರು ತಮ್ಮ ಊರಾದ ಅಜಾಂಘರ್ ನಲ್ಲಿ ಸೋಮವಾರ ನಿಧನರಾಗಿದ್ದಾರೆ.

ನಿಜಾಮುದ್ದೀನ್ ಅವರು 1901ರಲ್ಲಿ ಜನಿಸಿದ್ದು, 117 ವರ್ಷ ವಯಸ್ಸಾಗಿದ್ದು, 1943ರಿಂದ 1945 ರ ಅವಧಿಯಲ್ಲಿ ಸುಭಾಶ್ ಚಂದ್ರ ಬೋಸ್ ಅವರ ಜೊತೆಗಿದ್ದರು. ಅವರ ವಾಹನ ಚಾಲನೆ ಮಾಡುತ್ತಿದ್ದರು. ಜೊತೆಗೆ ಸ್ವತಂತ್ರ ಹೋರಾಟದಲ್ಲಿಯೂ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.[ವಿಮಾನ ಅಪಘಾತದಲ್ಲೇ ಸುಭಾಷ್ ಚಂದ್ರ ಬೋಸ್ ಸಾವು: ಸಿಐಎ ವರದಿ]

the driver of Netaji Subhash Chandra Bose, passed away at the age of 117

ನಿಜಾಮುದ್ದೀನ್ ಅವರು ಪತ್ನಿ ಅಜ್ಬುಲ್ ನಿಶಾ ಮತ್ತು ಮೂರು ಗಂಡು ಮಕ್ಕಳು ಹಾಗು ಇಬ್ಬರು ಪುತ್ತಿಯರನ್ನು ಅಗಲಿದ್ದಾರೆ. ಅವರು ಸುಭಾಷ್ ಅವರ ಆದರ್ಶಗಳನ್ನು ಪಾಲಿಸುತ್ತಿದ್ದರು ಎಂದು ಪರಿವಾರ ತಿಳಿಸಿದೆ.

ನಿಜಾಮುದ್ದೀನ್ ಅವರ ನಿಧನಕ್ಕೆ ಹಿರಿಯರು ಕಂಬನಿ ಮಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸ್ವತಂತ್ರಕ್ಕಾಗಿ ಹೋರಾಡಿದ ಕರ್ನಲ್ ನಿಜಾಮುದ್ದೀನ್ ಯಾವಾಗಲು ನಮಗೆ ದೇಶಭಕ್ತಿ, ಧೈರ್ಯಮತ್ತು ಆದರ್ಶವನ್ನು ತುಂಬುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

English summary
Colonel Nizamuddin, the driver of Netaji Subhash Chandra Bose, passed away at the age of 117 in native Azangarh district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X