ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉರಿಯಲ್ಲಿ ಎನ್‌ಕೌಂಟರ್, ಉಗ್ರ ಅಬ್ದುಲ್ ಖಯೂಮ್ ಹತ್ಯೆ

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 26 : ಜಮ್ಮು ಮತ್ತು ಕಾಶ್ಮೀರದ ಮೋಸ್ಟ್ ವಾಟೆಂಡ್ ಉಗ್ರ ಅಬ್ದುಲ್ ಖಯೂಮ್‌ನನ್ನು ಹತ್ಯೆ ಮಾಡಲಾಗಿದೆ. ಪಾಕಿಸ್ತಾನದಿಂದ ವಾಪಸ್ ಬರುವಾಗ ಉರಿ ಪ್ರದೇಶದಲ್ಲಿ ಖಯೂಮ್‌ನನ್ನು ಭಾರತೀಯ ಸೇನೆ ಕೊಂದು ಹಾಕಿದೆ.

ಎರಡು ವರ್ಷಗಳಿಂದ ಖಯೂಮ್ ಜಮ್ಮು ಮತ್ತು ಕಾಶ್ಮೀರದ ಮೋಸ್ಟ್ ವಾಡೆಂಟ್ ಉಗ್ರರ ಪಟ್ಟಿಯಲ್ಲಿದ್ದ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಹೊರಬಂದಿದ್ದ ಖಯೂಮ್, ಲಷ್ಕರ್-ಇ-ಇಸ್ಲಾಂ ಎಂಬ ಸಂಘಟನೆ ಹುಟ್ಟುಹಾಕಿದ್ದ. ಹಲವು ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ.

ಕಾಶ್ಮೀರ ಕಣಿವೆಯಲ್ಲಿನ ಟಾಪ್ 5 ಉಗ್ರರ ಪಟ್ಟಿಕಾಶ್ಮೀರ ಕಣಿವೆಯಲ್ಲಿನ ಟಾಪ್ 5 ಉಗ್ರರ ಪಟ್ಟಿ

 Dreaded terrorist Abdul Qayoom Najar killed in Uri

ಖಯೂಮ್‌ನನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಉಚ್ಛಾಟಿಸಲಾಗಿತ್ತು. ಖಯೂಮ್ ಮುಗ್ಧ ಜನರನ್ನು ಹತ್ಯೆ ಮಾಡುತ್ತಿದ್ದಾನೆ ಮತ್ತು ಹುರಿಯತ್ ಮುಖಂಡರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬ ಆರೋಪದ ಹಿನ್ನಲೆಯಲ್ಲಿ ಉಚ್ಛಾಟನೆ ಮಾಡಲಾಗಿತ್ತು.

ವೆಚ್ಚ ಕಡಿತದಿಂದ ಉಗ್ರರ ವೇತನಕ್ಕೆ ಕತ್ತರಿ, ಸಂಬಳ ಎಷ್ಟು?ವೆಚ್ಚ ಕಡಿತದಿಂದ ಉಗ್ರರ ವೇತನಕ್ಕೆ ಕತ್ತರಿ, ಸಂಬಳ ಎಷ್ಟು?

ಮೊದಲು ಖಯೂಮ್ ಉತ್ತರ ಕಾಶ್ಮೀರದ ಉಗ್ರರ ಪಟ್ಟಿಯಲ್ಲಿದ್ದ. ಮೊಬೈಲ್ ಟವರ್‌ ಮೇಲೆ ನಡೆದ ದಾಳಿ, 6 ಜನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಖಯೂಮ್ ಪ್ರಮುಖನಾಗಿದ್ದ. ಪೊಲೀಸರು ಈತನ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.

ಬಾರಮುಲ್ಲಾ ಜಿಲ್ಲೆಯ ಸುಪೋರ್ ಪ್ರದೇಶದ ನಿವಾಸಿಯಾದ ಖಯೂಮ್ 16ನೇ ವಯಸ್ಸಿನಲ್ಲಿ ಉಗ್ರ ಸಂಘಟನೆ ಸೇರಿದ್ದ. 1992ರಲ್ಲಿ ಈತನನ್ನು ಬಂಧಿಸಲಾಗಿತ್ತು. ನಂತರ ಬಿಡುಗಡೆಗೊಂಡಿದ್ದ ಈತ 1995ರಲ್ಲಿ ಮತ್ತೆ ಸಂಘಟನೆ ಸೇರಿಕೊಂಡಿದ್ದ. ಕಮಾಂಡರ್ ಆಗಬೇಕು ಎಂಬುದು ಈತನ ಕನಸಾಗಿತ್ತು.

English summary
Dreaded Grade A A terrorists Abdul Qayoom Najar was shot dead at Uri by the security agencies. He was killed while he was returning from Pakistan. This is a major success for the Indian Army since he has been on the most wanted list for over two years now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X