ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

DRDO ಸಂಪರ್ಕರಹಿತ ಸ್ಯಾನಿಟೈಸರ್ OakMist ಜನಪ್ರಿಯತೆ

|
Google Oneindia Kannada News

ನವದೆಹಲಿ, ಮೇ 21: DRDO ಮತ್ತು ರಿಯಾಟ್ ಲ್ಯಾಬ್ಸ್ ಸಂಯುಕ್ತವಾಗಿ ಅಭಿವೃದ್ಧಿಪಡಿಸಿದ ಓಕ್ ಮಿಸ್ಟ್(OakMist) ಕಾಂಟ್ಯಾಕ್ಟ್ ಲೆಸ್ ಸ್ಯಾನಿಟೈಸರ್ ವಿತರಣಾ ಘಟಕ ಜನಪ್ರಿಯತೆ ಗಳಿಸುತ್ತಿದೆ.

ರಾಷ್ಟ್ರಪತಿ ಭವನ, ಪ್ರಧಾನಮಂತ್ರಿಗಳ ಕಚೇರಿ, ಸುಪ್ರೀಂಕೋರ್ಟ್, ಗೃಹ ವ್ಯವಹಾರಗಳ ಸಚಿವಾಲಯ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಗಣ್ಯ ವ್ಯಕ್ತಿಗಳ ನಿವಾಸಗಳಲ್ಲಿ OakMist ಅಳವಡಿಸಲಾಗಿದೆ.

ಪ್ರತಿನಿತ್ಯ 20,000 ಮಾಸ್ಕ್ ಉತ್ಪಾದಿಸಿದರೆ ಕೊರೊನಾದಿಂದ ಬಚಾವ್ ಆಗುತ್ತಾ ಭಾರತ? ಪ್ರತಿನಿತ್ಯ 20,000 ಮಾಸ್ಕ್ ಉತ್ಪಾದಿಸಿದರೆ ಕೊರೊನಾದಿಂದ ಬಚಾವ್ ಆಗುತ್ತಾ ಭಾರತ?

ಇದು ಆಲ್ಕೋಹಾಲ್ ಆಧರಿತ ಕೈ ಉಜ್ಜುವ ಸ್ಯಾನಿಟೈಸರ್ ಸೊಲ್ಯೂಶನ್ ಅನ್ನು ಸಿಂಪಡಿಸುತ್ತದೆ. ಸಂಪರ್ಕ ರಹಿತ ಸ್ಯಾನಿಟೈಸೇಷನ್‍ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸಲಹೆಗೆ ಅನುಸಾರವಾಗಿದೆ. ಇಂದು ಸಮುದಾಯಕ್ಕೆ ಈ ಉತ್ಪನ್ನ ಲಭ್ಯವಾಗುವಂತೆ ಮಾಡಲಾಗಿದೆ.

ನೀರು ಸಂರಕ್ಷಣೆಯ ಉದ್ದೇಶ

ನೀರು ಸಂರಕ್ಷಣೆಯ ಉದ್ದೇಶ

ಓಕೆಮಿಸ್ಟ್ ಹೆಸರಿನ ಈ ಉತ್ಪನ್ನವು ನೀರು ಸಂರಕ್ಷಣೆಯ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ ನೀರಿನ ಹನಿಯನ್ನು ಸೃಷ್ಟಿಸುವ ತಂತ್ರಜ್ಞಾನವನ್ನು ಆಧರಿಸಿದೆ. ಯಾವುದೇ ಸಂಪರ್ಕವಿಲ್ಲದೇ ಇದು ಕಾರ್ಯನಿರ್ವಹಿಸುತ್ತದೆ ಹಾಗೂ ಅಲ್ಟ್ರಾಸಾನಿಕ್ ಸೆನ್ಸಾರ್ ಸಹಾಯದಿಂದ ಇದು ಚಾಲಿತವಾಗುತ್ತದೆ.

ಏಕೈಕ ದ್ರವ ಸುರಿಯುವ ನಳಿಕೆ

ಏಕೈಕ ದ್ರವ ಸುರಿಯುವ ನಳಿಕೆ

ಏಕೈಕ ದ್ರವ ಸುರಿಯುವ ನಳಿಕೆಯ ಮೂಲಕ ಕಡಿಮೆ ಪ್ರಮಾಣದಲ್ಲಿ ಸ್ಯಾನಿಟೈಸರ್ ಹರಿಯುತ್ತದೆ ಹಾಗೂ ಕೈ ಉಜ್ಜುವ ಸ್ಯಾನಿಟೈಸರ್ ಪೂರೈಸಲು ವಾಯು ಆಧರಿತ ತುಂತುರು ಹನಿಗಳನ್ನು ಸೃಷ್ಟಿಸುತ್ತದೆ. ಕೊರೋನಾ ವೈರಸ್‍ನಿಂದ ಗರಿಷ್ಠ ಸುರಕ್ಷತೆನ್ನು ಖಾತರಿಪಡಿಸುತ್ತದೆ.

5-6 ಮಿಲಿಲೀಟರ್ ಸ್ಯಾನಿಟೈಸರ್

5-6 ಮಿಲಿಲೀಟರ್ ಸ್ಯಾನಿಟೈಸರ್

ಇದು ಬಳಕೆಯ ವೇಳೆ ಸ್ಯಾನಿಟೈಸರ್ ಕನಿಷ್ಠ ಪ್ರಮಾಣದಲ್ಲಿ ವ್ಯರ್ಥವಾಗುವಂತೆ ಮಾಡುತ್ತದೆ. ಸ್ವಯಂಚಾಲಿತ ವ್ಯವಸ್ಥೆ (ಅಟೋಮೈಸರ್) ಬಳಸಿಕೊಂಡು ಒಂದು ಕಾರ್ಯಾಚರಣೆ ವೇಳೆ 5 ಸೆಕೆಂಡ್‍ಗಳ ಕಾಲ ಕೇವಲ 5-6 ಮಿಲಿಲೀಟರ್ ಸ್ಯಾನಿಟೈಸರ್ ಬಿಡುಗಡೆಯಾಗುತ್ತದೆ. ಓಕೆಮಿಸ್ಟ್ ಎಲ್ಲ ಸಂಘ ಸಂಸ್ಥೆಗಳಿಗೆ, ವಾಣಿಜ್ಯ ಹಾಗೂ ವಾಣಿಜ್ಯೇತರ ಬಳಕೆಗಳಿಗೆ ಯೋಗ್ಯವಾಗಿದೆ.

ಸಿಇಒ ಶಿಶಿರ್ ಗುಪ್ತಾ

ಭಾರತ ನೋವೆಲ್ ಕೊರೋನಾ ವೈರಸ್ ವಿರುದ್ಧ ಹೋರಾಡಲು ರಿಯೋಟ್ ಲ್ಯಾಬ್, ಈ ವಿನೂತನ ಅನುಶೋಧನೆಯನ್ನು ದೇಶದ ಉದ್ದಗಲಕ್ಕೂ ಒಯ್ಯಲಿದೆ ಎಂದು ರಿಯೋಟ್ ಲ್ಯಾಬ್ಸ್ , ಸಂಸ್ಥಾಪಕ ಮತ್ತು ಸಿಇಒ ಶಿಶಿರ್ ಗುಪ್ತಾ ಹೇಳಿದ್ದಾರೆ. ಇದು ಬುಕ್ಕಿಂಗ್‍ಪೂರ್ವ https://oakmist.com ನಲ್ಲಿ ಲಭ್ಯವಿದೆ.

English summary
All government offices and residences of notable personnel, including Rashtrapati Bhawan, PMO, Supreme Court, Ministry of Home Affairs, among others have been equipped with DRDO and Riot Labz developed OakMist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X