ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಧುನಿಕ ಅಗ್ನಿ ಪ್ರೈಮ್ ಕ್ಷಿಪಣಿ ಯಶಸ್ವಿ ಪ್ರಯೋಗ ಯಶಸ್ವಿ

|
Google Oneindia Kannada News

ಭುವನೇಶ್ವರ, ಜೂನ್ 28; ಒಡಿಶಾ ಕರಾವಳಿಯ ಸೇನಾ ನೆಲೆಯಿಂದ 'ಅಗ್ನಿ ಪ್ರೈಮ್' ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಯಿತು. ಪ್ರಯೋಗ ಯಶಸ್ವಿಯಾಗಿದೆ ಎಂದು ಡಿಆರ್‌ಡಿಓ ಹೇಳಿದೆ.

ಸೋಮವಾರ ಬಾಲಸೊರ್ ಕರಾವಳಿಯ ಸೇನಾ ನೆಲೆಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಬೆಳಗ್ಗೆ 10.55ಕ್ಕೆ ಉಡಾವಣೆ ಮಾಡಲಾಯಿತು. ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ 'ಅಗ್ನಿ ಪ್ರೈಮ್' ಪ್ರಯೋಗ ಯಶಸ್ವಿಯಾಗಿ ನಡೆದಿದೆ.

ಭಾರತ-ಇಸ್ರೇಲ್ ಜಂಟಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷೆ ಯಶಸ್ವಿಭಾರತ-ಇಸ್ರೇಲ್ ಜಂಟಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷೆ ಯಶಸ್ವಿ

'ಅಗ್ನಿ ಪ್ರೈಮ್' ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಕ್ಷಿಪಣಿಯಾಗಿದೆ. 2 ಸಾವಿರ ಕಿ. ಮೀ. ದೂರ ಕ್ರಮಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಡಿಆರ್‌ಡಿಓ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಿದೆ.

ಬ್ರಹ್ಮೋಸ್ ಭೂದಾಳಿ ಆವೃತ್ತಿಯ ಕ್ಷಿಪಣಿ ಪರೀಕ್ಷೆ ಯಶಸ್ವಿ ಬ್ರಹ್ಮೋಸ್ ಭೂದಾಳಿ ಆವೃತ್ತಿಯ ಕ್ಷಿಪಣಿ ಪರೀಕ್ಷೆ ಯಶಸ್ವಿ

DRDO Successfully Tested New Missile In The Agni Series Known As Agni P

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಅಣ್ವಸ್ತ್ರ ಹೊತ್ತೊಯ್ಯುವಂತಹ ಸಾಮರ್ಥ್ಯವನ್ನು ಹೊಂದಿದೆ. ಯೋಜನೆಯ ಪ್ರಕಾರವೇ ಕ್ಷಿಪಣಿ ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಡಿಆರ್‌ಡಿಓ ಹೇಳಿದೆ.

ಪರಮಾಣು ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ರಾತ್ರಿ ಪ್ರಯೋಗ ಯಶಸ್ವಿಪರಮಾಣು ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ರಾತ್ರಿ ಪ್ರಯೋಗ ಯಶಸ್ವಿ

'ಅಗ್ನಿ ಪ್ರೈಮ್' ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಮೊಬೈಲ್ ಲಾಂಚರ್ ಮೂಲಕವೂ ಉಡಾವಣೆ ಮಾಡಬಹುದಾಗಿದೆ. ಪೂರ್ವ ಕರಾವಳಿಯ ಟೆಲಿಮೆಟ್ರಿ ಮತ್ತು ರಡಾರ್ ಕೇಂದ್ರಗಳು ಕ್ಷಿಪಣಿಯನ್ನು ಪತ್ತೆ ಹಚ್ಚಿ ಮೇಲ್ವಿಚಾರಣೆ ಮಾಡಿವೆ.

ಭೂಮಿಯಿಂದ ಭೂಮಿಗೆ ಹಾರಾಟ ಮಾಡುವ ಈ ಕ್ಷಿಪಣಿ 1000 ಕೆ. ಜಿ. ಪೆಲೋಡ್ ಅಥವ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಅಗ್ನಿ-1 ಕ್ಷಿಪಣಿಗಿಂತ ತುಂಬಾ ಹಗುರವಾಗಿದೆ.

English summary
The Defence Research and Development Organisation (DRDO) successfully flight tested the new missile in the Agni series known as Agni P.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X