• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

DRDO ಅತ್ಯಾಧುನಿಕ ಕ್ಷಿಪಣಿಗಳ ಪ್ರಯೋಗ ಪರೀಕ್ಷೆ ಯಶಸ್ವಿ

|

ಬಾಲಸೋರ್(ಒಡಿಶಾ), ಫೆಬ್ರವರಿ 27: ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ ಉಗ್ರರ ವಿಧ್ವಂಸಕ ಕೃತ್ಯಕ್ಕೆ ತಿರುಗೇಟು ನೀಡಲು ಭಾರತ ಆರಂಭಿಸಿದೆ. ಪಾಕಿಸ್ತಾನದ ಬಾಲಕೋಟ್, ಗಡಿ ನಿಯಂತ್ರಣ ರೇಖೆ ಬಳಿಯ ಮುಝಾಫರಬಾದ್ ಹಾಗೂ ಚಕೋತಿಯಲ್ಲಿದ್ದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಯನ್ನು ಭಾರತೀಯ ವಾಯುಸೇನೆ ಧ್ವಂಸಗೊಳಿಸಿದೆ.ಇದೇ ಸಂದರ್ಭದಲ್ಲಿ ಒಡಿಶಾಸ ಕಡಲ ತೀರದಲ್ಲಿ ಎರಡು ಅತ್ಯಾಧುನಿಕ ಕ್ಷಿಪಣಿಗಳ ಪ್ರಯೋಗದ ಪರೀಕ್ಷೆಯನ್ನು ಡಿಆರ್ ಡಿಒ ಯಶಸ್ವಿಯಾಗಿದೆ.

ಒಡಿಶಾದ ಬಾಲಸೋರ್ ಜಿಲ್ಲೆಯ ಚಾಂದಿಪುರ್ ನಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಮಂಗಳವಾರದಂದು ಕ್ಷಿಪಣಿಗಳ ಪರೀಕ್ಷೆ ನಡೆಸಲಾಯಿತು. ಭೂಮೇಲ್ಮೆಯಿಂದ ಆಗಸಕ್ಕೆ ಚಿಮ್ಮುವ(surface to air missile) ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ವಿನ್ಯಾಸಗೊಳಿಸಿದೆ. 15 ಕಿ.ಮೀ ವ್ಯಾಪ್ತಿಯಲ್ಲಿರುವ ಬಹುಸ್ತರ ಗುರಿಯನ್ನು ನಿಖರವಾಗಿ ಮುಟ್ಟಿ ಕ್ಷಣಾರ್ಧದಲ್ಲಿ ನಾಶ ಪಡಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

ಪಾಕಿಸ್ತಾನಕ್ಕೆ ಕ್ಷಿಪಣಿ ರಹಸ್ಯ ಮಾರಾಟ, ಡಿಆರ್ ಡಿಒ ಸಿಬ್ಬಂದಿ ಬಂಧನ

ಭಾರತದಲ್ಲಿರುವ ಮಧ್ಯಮ ಶ್ರೇಣಿಯಲ್ಲಿರುವ ಕ್ಷಿಪಣಿಗಳಿಗೆ ಇದು ಪೂರಕವಾಗಿವೆ. ನೌಕೆಗಳ ಮೇಲೆ ನಡೆಯುವ ದಾಳಿಯನ್ನು ಪಡೆಯಲು ಅಥವಾ ಭೂಸೇನೆ ಬಳಕೆಗೂ ಇದನ್ನು ಬಳಸಬಹುದು ಎಂದು ಡಿಆರ್ ಡಿ ಒ ಅಧಿಕಾರಿಗಳು ಹೇಳಿದ್ದಾರೆ.

ರಾಜಸ್ಥಾನದಲ್ಲಿ ನಾಗ್ ಕ್ಷಿಪಣಿ ಪರೀಕ್ಷೆ ಎರಡು ಬಾರಿ ಯಶಸ್ವಿ

ಈ ಹಿಂದೆ ಜೈಪುರದ ಮರಭೂಮಿಯಲ್ಲಿ 7 ಕಿ. ಮೀ ದೂರದ ಗುರಿಯನ್ನು ತಲುಪಬಹುದಾದ ಶಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು ಹೊಡೆಯಲು ಮತ್ತು ನಾಶಮಾಡಲು ವಿನ್ಯಾಸಗೊಳಿಸಲಾಗಿರುವ 'ನಾಗ್' ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನೆಲ್ಲೂರು ಮೂಲದ ವಿಜ್ಞಾನಿ ಡಿಅರ್ ಡಿಒ ಚೇರ್ಮನ್

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ವಿಜ್ಞಾನ ನಗರಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ)ದ ಮಾನವ ರಹಿತ (ಯುಎವಿ) ಯುದ್ಧ ವಿಮಾನಗಳ ಪರೀಕ್ಷಾರ್ಥ ವಾಯುನೆಲೆ ಕೂಡಾ ಈಗ ಡಿಆರ್ ಡಿಒನ ಪರೀಕ್ಷೆ, ಪ್ರಯೋಗಕ್ಕೆ ಮುಕ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India successfully test fires quick reaction surface to air missile off the coast of Odisha. Two missiles were tested by the DRDO (Defence Research and Development Organisation) for the missile being developed for the Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more