ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಲೆಟ್ ಬುಲೆಟ್ ಬದಲು ಪ್ಲಾಸ್ಟಿಕ್ ಬುಲೆಟ್: ಡಿಆರ್ ಡಿಒ ಸಂಶೋಧನೆ

|
Google Oneindia Kannada News

ನವದೆಹಲಿ, ಜನವರಿ 4: ಕಾಶ್ಮೀರದಲ್ಲಿ ಕಲ್ಲು ತೂರುವವರ ವಿರುದ್ಧ ಬಳಸಲಾದ ಪೆಲೆಟ್ ಬುಲೆಟ್ ಭಾರಿ ವಿವಾದ ಸೃಷ್ಟಿಸಿದ್ದರಿಂದ ಅದಕ್ಕೆ ಪರ್ಯಾಯವಾದ ಅಸ್ತ್ರವನ್ನು ಕಂಡುಕೊಳ್ಳಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕಡಿಮೆ ಲೆಥಾಲ್ ಇರುವ ಪ್ಲಾಸ್ಟಿಕ್ ಬುಲೆಟ್‌ಅನ್ನು ಅಭಿವೃದ್ಧಿಪಡಿಸಿದೆ.

ಭ್ರಷ್ಟಾಚಾರದ ಆರೋಪ : 5 ಸೇನಾಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ಭ್ರಷ್ಟಾಚಾರದ ಆರೋಪ : 5 ಸೇನಾಧಿಕಾರಿಗಳ ವಿರುದ್ಧ ಸಿಬಿಐ ತನಿಖೆ

2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರ ಬುರ್ಹಾನ್ ವಾನಿ ಹತ್ಯೆಯ ಬಳಿಕ ನಡೆದ ಹಿಂಸಾಚಾರಗಳನ್ನು ತಡೆಯಲು ಸೈನಿಕರು ಪೆಲೆಟ್ ಬುಲೆಟ್‌ಗಳನ್ನು ಹಾರಿಸಿದ್ದರು. ಇದರಿಂದ ಸಾವಿರಾರು ಮಂದಿ ಗಾಯಗೊಂಡಿದ್ದರು. ಅನೇಕರು ಅಂಧರಾಗಿದ್ದರು. ಈ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

DRDO plastic bullet alternative for pellet shot jammu kashmir lethal weapon

ಪೆಲೆಟ್ ಗನ್‌ಗಳಿಂದ ಭಾರಿ ಅನಾಹುತಗಳು ಆಗುತ್ತಿದೆ ಎಂದು ವ್ಯಾಪಕ ವಿರೋಧಗಳು ಕೇಳಿಬಂದಿದ್ದರಿಂದ ಗೃಹ ಸಚಿವಾಲಯವು ಅದಕ್ಕೆ ಪರ್ಯಾಯವಾಗಿ ಸ್ವದೇಶಿ ನಿರ್ಮಿತ ಪರಿಹಾರ ಕಂಡುಕೊಳ್ಳುವಂತೆ ಡಿಆರ್ ಡಿಒಗೆ ಸೂಚಿಸಿತ್ತು.

ಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲ ಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲ

ಈ ಪ್ಲಾಸ್ಟಿಕ್ ಬುಲೆಟ್‌ಗಳನ್ನು ಎಕೆ 47ರ ಮೂಲಕವೂ ಸಿಡಿಸಬಹುದು. ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಇವುಗಳನ್ನು ಪೂರೈಸಲಾಗುತ್ತದೆ. ಇವು ಆಮದಾದ ರಬ್ಬರ್ ಬುಲೆಟ್‌ಗಳಿಗಿಂತ ಕಡಿಮೆ ಅಪಾಯಕಾರಿ.

ಇವುಗಳನ್ನು ನೈಲಾನ್‌ನಿಂದ ತಯಾರಿಸಲಾಗಿದ್ದು, 50 ಮೀಟರ್ ದೂರದಿಂದ ಗುಂಡು ಹಾರಿಸಿದಾಗ ಗಾಯಗಳಾಗುತ್ತವೆ. ಪೆಲೆಟ್ ಬುಲೆಟ್‌ಗಳಿಗಿಂತ ಇವು 500 ಪಟ್ಟು ಕಡಿಮೆ ಗಾಯ ಉಂಟುಮಾಡುತ್ತವೆ.

ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ: ನಾಲ್ವರು ಉಗ್ರರ ಹತ್ಯೆಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ: ನಾಲ್ವರು ಉಗ್ರರ ಹತ್ಯೆ

ಈ ಬುಲೆಟ್‌ಗಳು ಉದ್ರಿಕ್ತ ಗುಂಪುಗಳನ್ನು ಚದುರಿಸಲು ಪರಿಣಾಮಕಾರಿಯಾಗಿದ್ದು, ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಒಂದು ಲಕ್ಷ ಬುಲೆಟ್‌ಗಳನ್ನು ಪೂರೈಕೆ ಮಾಡಲಾಗಿದೆ.

English summary
DRDO has developed a less lathal plastic bullet as an alternative to the pellet bullet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X