ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19 ಪ್ರತಿಕಾಯ ಪತ್ತೆ ಕಿಟ್ ಅಭಿವೃದ್ಧಿಪಡಿಸಿದ ಡಿಆರ್‌ಡಿಒ

|
Google Oneindia Kannada News

ನವದೆಹಲಿ, ಮೇ 21: ಕೋವಿಡ್ 19 ಪ್ರತಿಕಾಯ ಪತ್ತೆ ಹಚ್ಚುವ ಕಿಟ್ ಒಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದೆ ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಹಾಗೆಯೇ ಕೇವಲ 75 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದಾಗಿದೆ, ಈ ಕಿಟ್ ಶೆಲ್ಫ್‌ ಲೈಫ್ 18 ತಿಂಗಳುಗಳದ್ದಾಗಿದ್ದು, ನ್ಯೂಕ್ಲಿಯೊಕ್ಯಾಪ್ಸಿಡ್, ಸಾರ್ಸ್ -ಕೋವಿನ್-2 ಪ್ರೋಟಿನ್‌ಗಳನ್ನು ಪತ್ತೆ ಮಾಡುತ್ತದೆ.

ಸ್ವ್ಯಾಬ್ ಟೆಸ್ಟ್‌ ಭಯವೇ, ಗಾರ್ಗ್ಲಿಂಗ್ ಮಾಡಿಯೂ ಕೋವಿಡ್ ಪರೀಕ್ಷೆ ಮಾಡಬಹುದು!ಸ್ವ್ಯಾಬ್ ಟೆಸ್ಟ್‌ ಭಯವೇ, ಗಾರ್ಗ್ಲಿಂಗ್ ಮಾಡಿಯೂ ಕೋವಿಡ್ ಪರೀಕ್ಷೆ ಮಾಡಬಹುದು!

ನವದೆಹಲಿ ಮೂಲದ ವ್ಯಾನ್‌ಗಾರ್ಡ್ ಡಯಾಗ್ನೊಸ್ಟಿಕ್ಸ್ ಪ್ರೈ.ಲಿ. ಜತೆಗೂಡಿ ಈ ಕಿಟ್‌ನ್ನು ಅಭಿವೃದ್ಧಿಪಡಿಸಲಾಗಿದ್ದು, ಜೂನ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

DRDO Develops Covid Antibody Detection Kit; To Be Launched In June

ಡಿಪ್‌ಕೋವ್ಯಾನ್ ಹೆಸರಿನಲ್ಲಿ ಕರೆಯಲಾಗುವ ಈ ಕಿಟ್, ಕೇವಲ 75 ನಿಮಿಷಗಳಲ್ಲಿ ಫಲಿತಾಂಶ ತೆಗೆದುಕೊಳ್ಳುವುದರಿಂದ ಇತರೆ ರೋಗಿಗಳೊಂದಿಗೆ ಯಾವುದೇ ಅಡ್ಡ ಪರಿಣಾಮ ಬೀರದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಹಾಗೆಯೇ ಗಾರ್ಗ್ಲಿಂಗ್ ಮಾಡಿಯೂ ಕೂಡ ಕೋವಿಡ್ ಫಲಿತಾಂಶವನ್ನು ಪಡೆಯಬಹುದಾದ ಸಂಶೋಧನೆಗೆ ಫಲ ಸಿಕ್ಕಿದೆ. ಸಿಎಸ್‌ಐಆರ್-ಎನ್‌ಎಎಆರ್‌ನ ಪರಿಸರ ಶಾಸ್ತ್ರ ವಿಭಾಗವು ಈ ಹೊಸ ಸಂಶೋಧನೆಯನ್ನು ಮಾಡಿದೆ.

ಕೋವಿಡ್ ಪರೀಕ್ಷೆಯನ್ನು ಇನ್ನುಮುಂದೆ ಮತ್ತಷ್ಟು ಸುಲಭಗೊಳಿಸಬಹುದು, ಕೆಮಿಕಲ್ ದ್ರಾವಣವನ್ನು ಬಾಯಲ್ಲಿ ಹಾಕಿಕೊಂಡು ಗಾರ್ಗ್ಲಿಂಗ್ ಮಾಡುವ ಮೂಲಕ ಕೋವಿಡ್ ವರದಿ ಪಡೆಯಬಹುದು.

ಹಿರಿಯ ವಿಜ್ಞಾನಿ ಡಾ. ಕೃಷ್ಣ ಖೈರ್ನರ್ ಮತ್ತು ಅವರ ತಂಡ ಈ ಹೊಸ ಮಾದರಿಯ ಕೋವಿಡ್ ಪರೀಕ್ಷೆ ಅಭಿವೃದ್ಧಿಪಡಿಸಿದೆ.ಈ ಹೊಸ ತಂತ್ರದಲ್ಲಿ ಅಸ್ತಿತ್ವದಲ್ಲಿರುವ ಮಾದರಿಗಳ ಪರೀಕ್ಷೆಯಂತೆ ಯಾವುದೇ ಆರ್‌ಎನ್‌ಎ ಹೊರತೆಗೆಯುವ ಅಗತ್ಯವಿಲ್ಲ.

ಇದರಿಂದ ವೇಗವಾಗಿ ಮಾದರಿ ಸಂಗ್ರಹಿಸಬಹುದು, ಮಾದರಿ ಸಂಗ್ರಹ ಕೇಂದ್ರಗಳಲ್ಲಿನ ವ್ಯಕ್ತಿಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡಬಹುದು. ಯಾವುದೇ ಆರ್‌ಎನ್‌ಎ ಹೊರತೆಗೆಯುವ ಕಿಟ್ ಅಗತ್ಯವಿಲ್ಲ, ಇದು ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ.

English summary
TDIPCOVAN is intended for the qualitative detection of IgG antibodies in human serum or plasma, targeting SARS-CoV-2 related antigens. It offers a significantly faster turnaround time of just 75 minutes to conduct the test without any cross reactivity with other diseases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X