ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ-ಸ್ಯಾಟ್ ಯೋಜನೆ ಆರಂಭವಾಗಿದ್ದು 2 ವರ್ಷದ ಹಿಂದೆ: ಡಿಆರ್‌ಡಿಒ ಅಧ್ಯಕ್ಷ

|
Google Oneindia Kannada News

ನವದೆಹಲಿ, ಮಾರ್ಚ್ 28: ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಕಿರೀಟ ತಂದುಕೊಟ್ಟ ಉಪಗ್ರಹ ನಿಗ್ರಹ ಕ್ಷಿಪಣಿ ಸಾಮರ್ಥ್ಯ ಯೋಜನೆಯನ್ನು ಎರಡು ವರ್ಷದ ಹಿಂದಷ್ಟೇ ಆರಂಭಿಸಲಾಗಿತ್ತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಜಿ. ಸತೀಶ್ ರೆಡ್ಡಿ ತಿಳಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಕ್ಷಣೆಗೆ ಸಂಬಂಧಿಸಿದ ಮಾಹಿತಿಗಳನ್ನು ನಾವು ಒದಗಿಸುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಮಗೆ ಈ ಯೋಜನೆಯ ಪರೀಕ್ಷೆಯಲ್ಲಿ ಮುಂದುವರಿಯುವಂತೆ ಸೂಚಿಸಿದರು. ಅವರು ಪ್ರಧಾನಿಯವರಿಂದ ಒಪ್ಪಿಗೆ ಪಡೆದುಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಅದರ ಕೆಲಸ ಆರಂಭವಾಗಿತ್ತು. ನಾವು ಆರು ತಿಂಗಳ ಹಿಂದೆ ಯೋಜನೆಯ ಹಂತಕ್ಕೆ ತಲುಪಿದೆವು ಎಂದು ಅವರು ಎಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

 ಮಿಶನ್ ಶಕ್ತಿ ಬಗ್ಗೆ ಯುಪಿಎಗೆ ಇಚ್ಛಾಶಕ್ತಿ ಕೊರತೆ: ಇಸ್ರೋ ಮಾಜಿ ಅಧ್ಯಕ್ಷ ಆರೋಪ ಮಿಶನ್ ಶಕ್ತಿ ಬಗ್ಗೆ ಯುಪಿಎಗೆ ಇಚ್ಛಾಶಕ್ತಿ ಕೊರತೆ: ಇಸ್ರೋ ಮಾಜಿ ಅಧ್ಯಕ್ಷ ಆರೋಪ

ಅದನ್ನು ಪ್ರಯೋಗಿಸುವ ದಿನವನ್ನು ನಿಗದಿಪಡಿಸಿಕೊಂಡು ಸುಮಾರು ನೂರು ವಿಜ್ಞಾನಿಗಳು ಹಗಲಿರುಳು ಶ್ರಮಿಸಿದ್ದಾರೆ ಎಂದರು.

drdo chief G Satheesh Reddy said A-Sat missile project began two years ago

ಎ ಸ್ಯಾಟ್ ಯಶಸ್ವಿ: ಮನಮೋಹನ್ ಸಿಂಗ್ ಕನಸು ನನಸು ಎಂದ ಕಾಂಗ್ರೆಸ್ ಎ ಸ್ಯಾಟ್ ಯಶಸ್ವಿ: ಮನಮೋಹನ್ ಸಿಂಗ್ ಕನಸು ನನಸು ಎಂದ ಕಾಂಗ್ರೆಸ್

300 ಕಿ.ಮೀ. ದೂರದ ಉಪಗ್ರಹವನ್ನು ಆಯ್ದುಕೊಂಡಿದಕ್ಕೆ ಕಾರಣ ವಿವರಿಸಿದ ಅವರು, ಬಾಹ್ಯಾಕಾಶದಲ್ಲಿರುವ ಸಮೀಪದ ಇತರೆ ಉಪಗ್ರಹಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕಿತ್ತು. ಜವಾಬ್ದಾರಿಯುತ ದೇಶವಾಗಿ ನಾವು ಎಲ್ಲ ಬಾಹ್ಯಾಕಾಶ ಸಂಪತ್ತುಗಳು ಸುರಕ್ಷಿತವಾಗಿವೆ ಮತ್ತು ಉಪಗ್ರಹದ ಅವಶೇಷಗಳು ಬೇಗನೆ ನಾಶವಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ತಿಳಿಸಿದರು.

ಆಗ ಅನುಮತಿಯೇ ಕೊಟ್ಟಿರಲಿಲ್ಲ!: ಡಿಆರ್‌ಡಿಒ ಶ್ರೇಯಸ್ಸು ತನ್ನದೆಂದ ಕಾಂಗ್ರೆಸ್‌ಗೆ ಮುಖಭಂಗ ಆಗ ಅನುಮತಿಯೇ ಕೊಟ್ಟಿರಲಿಲ್ಲ!: ಡಿಆರ್‌ಡಿಒ ಶ್ರೇಯಸ್ಸು ತನ್ನದೆಂದ ಕಾಂಗ್ರೆಸ್‌ಗೆ ಮುಖಭಂಗ

ನಾವು ಉಪಗ್ರಹವನ್ನು 'ಕೈನೆಟಿಕ್ ಕಿಲ್' ಮೂಲಕ ಹೊಡೆದಿದ್ದೇವೆ. ಅಂದರೆ, ಅದನ್ನು ನೇರವಾಗಿ ಹೊಡೆದಿದ್ದೇವೆ. ನಾವು ತಯಾರಿಸಿರುವ ಅನೇಕ ತಂತ್ರಜ್ಞಾನಗಳು ಸಂಪೂರ್ಣವಾಗಿ ಸ್ವದೇಶದಲ್ಲಿಯೇ ನಿರ್ಮಿಸಿರುವಂತಹವು. ನಾವು ಕೆಲವೇ ಸೆಂಟಿಮೀಟರ್‌ನಲ್ಲಿ ಗುರಿಯನ್ನು ನಿಖರವಾಗಿ ತಲುಪಿದ್ದೇವೆ. ಇದು ನಿಖರತೆಯ ಅತ್ಯಧಿಕ ಮಟ್ಟ ಎಂದು ವಿವರಿಸಿದರು.

English summary
DRDO chairman Dr G Satheesh Reddy on Wednesday said that, the project development started a few years back and we went into mission mode in the last 6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X