ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರೀಶ್ ಮುರ್ಮು ಬಳಿಕ ದೇಶದ ಅತ್ಯುನ್ನತ ಹುದ್ದೆ ಮಯೂರ್ ಬಂಜ್ ತೆಕ್ಕೆಗೆ

|
Google Oneindia Kannada News

ನವದೆಹಲಿ ಜೂ. 22: ಓಡಿಶಾ ರಾಜ್ಯದ ಮಯೂರ್ ಬಂಜ್ ಜಿಲ್ಲೆಯ ಗಿರೀಶ್ ಮುರ್ಮು ಅವರು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಆದ ನಂತರ ಮತ್ತದೇ ಜಿಲ್ಲೆಗೆ ಎರಡನೇ ಬಾರಿ ದೇಶದ ಉನ್ನತ ಸ್ಥಾನ ಸಿಕ್ಕಿದೆ.

ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಮಂಗಳವಾರ ಬಿಜೆಪಿ ನೇತೃತ್ವದ ಎನ್ ಡಿಎ ಘೋಷಿಸಿರುವ ದ್ರೌಪದಿ ಮುರ್ಮು ಅವರು ಸಹ ಇದೇ ರಾಜ್ಯದ ಮಯೂರ್ ಬಂಜ್ ಜಿಲ್ಲೆಯವರೆ ಆಗಿದ್ದಾರೆ. ಝಾರ್ಖಂಡನ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರು ಅರ್ಹರೆಂದು ಭಾವಿಸಿರುವ ಬಿಜೆಪಿ ದೇಶದ ಉನ್ನತ ಸಂವಿಧಾನಿಕ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದೆ.

ವ್ಯಕ್ತಿಚಿತ್ರ: ದೇಶದ ಪ್ರಥಮ ಪ್ರಜೆಯಾಗಲಿರುವ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮುವ್ಯಕ್ತಿಚಿತ್ರ: ದೇಶದ ಪ್ರಥಮ ಪ್ರಜೆಯಾಗಲಿರುವ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು

ಗಿರೀಶ್ ಮುರ್ಮು ಮತ್ತು ದ್ರೌಪದಿ ಮುರ್ಮು ಅವರ ಮೂಲಕ ಮಯೂರ್ ಬಂಜ್ ಜಿಲ್ಲೆಯು ರಾಷ್ಟ್ರಮಟ್ಟದ ಎರಡು ಅತ್ಯುತ್ತಮ ಹುದ್ದೆ ತನ್ನದಾಗಿಸಿಕೊಂಡಿದೆ.

ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ದ್ರೌಪದಿ ಮುರ್ಮು ಪಕ್ಷದ ಜಿಲ್ಲಾ ಸಂಘಟನೆಯಿಂದ ಯಿಂದ ಹಿಡಿದು ಶಾಸಕಿ, ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಓಡಿಶಾದ ಮುಖ್ಯಮಂತ್ರಿಯಾಗಿ ನಂತರ ರಾಜ್ಯಪಾಲರಾದ ಕಾರ್ಯ ನಿರ್ವಹಿಸಿದ ಅನುಭವ ಹೋಂದಿದ್ದಾರೆ.

ಆಶ್ಚರ್ಯಗೊಂಡ ದ್ರೌಪದಿ ಮುರ್ಮು

ಆಶ್ಚರ್ಯಗೊಂಡ ದ್ರೌಪದಿ ಮುರ್ಮು

ಬಿಜೆಪಿ ನನ್ನನ್ನು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸಿರುವುದು ಕೇಳಿ ಆಶ್ಚರ್ಯವಾಯಿತು. ಕೂಡಲೇ ನಂಬಲು ಸಾಧ್ಯವಾಗಲಿಲ್ಲ, ನನ್ನನ್ನು ಆಯ್ಕೆ ಮಾಡಿದ ಪಕ್ಷಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ. ಚುನಾವಣೆ ಮೂಲಕ ಉನ್ನತ ಹುದ್ದೆ ಅಲಂಕರಿಸಿದರೆ ಸಂವಿಧಾನದ ಆಶಯದಂತೆ ದೊರೆತ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ದೇಶಕ್ಕಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಮುರ್ಮು ಸಂತಸ ಹಂಚಿಕೊಂಡರು.

ಮುರ್ಮು ರಾಷ್ಟ್ರಪತಿಯಾದರೆ ಒಂದೇ ಕಲ್ಲಿನಲ್ಲಿ ಮೂರುಹಕ್ಕಿ ಹೊಡೆಯಬಹುದೇ?ಮುರ್ಮು ರಾಷ್ಟ್ರಪತಿಯಾದರೆ ಒಂದೇ ಕಲ್ಲಿನಲ್ಲಿ ಮೂರುಹಕ್ಕಿ ಹೊಡೆಯಬಹುದೇ?

ನಾಯಕರ ಸಹಕಾರ ಕೋರುತ್ತೇನೆ

ನಾಯಕರ ಸಹಕಾರ ಕೋರುತ್ತೇನೆ

ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾದ ನಂತರ ಸುದ್ದಿಗಾರರ ಜತೆ ಮೊದಲ ಬಾರಿಗೆ ಮಾತನಾಡಿರುವ ಮುರ್ಮು ಅವರು, "ಚುನಾವಣೆ ಎಂದ ಮೇಲೆ ಎಲ್ಲ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಆಡಳಿತ ಪಕ್ಷದ ಅಭಿವೃದ್ಧಿ ಕೆಲಸಗಳು, ಯೋಜನೆಗಳು ಜನರನ್ನು ತಲುಪಿವೆ. ಸಂಸದರು, ಶಾಸಕರ ಬೆಂಬಲ ಸಹಕಾರದ ಜತೆ ಎಲ್ಲ ಪಕ್ಷಗಳ ನಾಯಕರ ಬೆಂಬಲ ಕೋರುತ್ತೇನೆ" ಎಂದು ವಿರೋಧ ಪಕ್ಷವು ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸಿರುವುದರ ಬಗ್ಗೆ ಪ್ರಶ್ನೆಗೆ ಉತ್ತರಿಸಿದರು.

ದೇಶದ ಎರಡನೇ ಮಹಿಳಾ ರಾಷ್ಟ್ರಪತಿ?

ದೇಶದ ಎರಡನೇ ಮಹಿಳಾ ರಾಷ್ಟ್ರಪತಿ?

ಜುಲೈ 18ರಂದು ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಎನ್‌ಡಿಎ ಘೋಷಿತ ದ್ರೌಪದಿ ಮುರ್ಮು ಅವರು ವಿಜಯ ಸಾಧಿಸದರೆ ದೇಶದ ಮೊದಲ ಬುಡಕಟ್ಟು ಜನಾಂಗದ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ಟಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಓಡಿಶಾದ ಮೈತ್ರಿ ಕೂಟದ ಮೊದಲ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ದ್ರೌಪತಿ ಮುರ್ಮು ಅವರು, ಝಾರ್ಖಂಡನ ಮೊದಲ ಮಹಿಳಾ ಗೌವರ್ನರ್ ಆಗಿ 2015ರಿಂದ 2021 ಕಾರ್ಯ ನಿರ್ವಹಿಸಿದ್ದಾರೆ.

ಮುರ್ಮು ಹುಟ್ಟು-ರಾಜಕೀಯ:

ಮುರ್ಮು ಹುಟ್ಟು-ರಾಜಕೀಯ:

ದ್ರೌಪದಿ ಮುರ್ಮು ಓಡಿಶಾ ರಾಜ್ಯದ ಮಯೂರ್ ಭಂಜ್ ನ ಹಳ್ಳಿಯಲ್ಲಿ 1958ರ ಲ್ಲಿ ಜೂ.20ರಂದು ಬುಡಕಟ್ಟು ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವರು. ಬಡಕುಟುಂಬವಾದ್ದರಿಂದ ಅನೇಕ ಸಮಸ್ಯೆಗಳ ಮಧ್ಯೆಯೇ ಶಿಕ್ಷಣ ಪೂರೈಸಿದರು. ಭುವನೇಶ್ವರಿ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದರು. ರಾಯಂಗಪುರದ ಎನ್ ಎಸಿ ಉಪಾಧ್ಯಕ್ಷರಾಗಿ ರಾಜಕೀಯಕ್ಕೆ ಧುಮುಕಿದರು. ನಂತರ 2000ದಿಂದ 2009ರವರೆಗೆ ಎರಡು ಭಾರಿ ಓಡಿಶಾದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಸಾರಿಗೆ-ವಾಣಿಜ್ಯ, ಪಶುಸಂಗೋಪನೆ ಇಲಾಖೆ ಖಾತೆ ನಿರ್ವಹಿಸುವ ಮೂಲಕ ಸಚಿವೆಯಾಗಿ ಅನುಭವ ಪಡೆದರು.

ದ್ರೌಪದಿ ಮುರ್ಮು ಕುರಿತಾದ ಒಂದಷ್ಟು ಅಂಶಗಳು:

ದ್ರೌಪದಿ ಮುರ್ಮು ಕುರಿತಾದ ಒಂದಷ್ಟು ಅಂಶಗಳು:

*1958ರ ಲ್ಲಿ ಜೂ.20ರಂದು ಬುಡಕಟ್ಟು ಕುಟುಂಬವೊಂದರಲ್ಲಿ ಹುಟ್ಟಿದ ದ್ರೌಪತಿ ಮುರ್ಮು.

* ದ್ರೌಪದಿ ಮುರ್ಮು ಅವರಿಗೆ ಓಡಿಶಾ ವಿಧಾನಸಭೆ ನೀಡುವ ಅತ್ಯತ್ತಮ ಶಾಸಕಿ ಹೆಸರಿನ 'ನೀಲಕಂಠ ಪ್ರಶಸ್ತಿ'ಗೆ ಭಾಜನರಾದರು.

*1979-1983ರ ಅವಧಿಯಲ್ಲಿ ನೀರಾವರಿ ಹಾಗೂ ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕಿ ಆಗಿ ಸೇವೆ ಸಲ್ಲಿಕೆ.

*1997ರಲ್ಲಿ ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾಗಿ ಮುರ್ಮು ಆಯ್ಕೆ.

* 2010-2013ರ ಅವಧಿಯಲ್ಲಿ ಮಯೂರ್ ಬಂಜ್ ನಲ್ಲಿ ಬಿಜೆಪಿ ಜಿಲ್ಲಾಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ.

* 2013-2015ರವರೆ ಬಿಜೆಪಿಯ ಎಸ್ ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಾಕಾರಿಣಿ ಸದಸ್ಯೆ ಆಗಿ ಸೇವೆ.

Recommended Video

Draupadi Murmu ಭಾರತದ ಮೊದಲ ಮಹಿಳಾ ಬುಡಕಟ್ಟು ರಾಷ್ಟ್ರಪತಿ ಆಗ್ತಾರಾ? | *Politics | OneIndia Kannada

English summary
BJP led NDA announced former governor of jharkand Draupadi murmu's as presidential candidate. She said i am very glatefull to party. She is the 2nd from person from Mayurbhanj District to be selected for Top Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X